ಆತಂಕಕಾರಿ ಬೆಳವಣಿಗೆ: ಯಾರು ಹೊಣೆ?

ನಾಲ್ಕೈದು ದಶಕಗಳ ಹಿಂದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆಲ್ಲ ‘ಶಿರಾಡಿ ಘಾಟಿಯಲ್ಲಿ ಭೂಕುಸಿತ, ಸಂಚಾರ ಅಸ್ತವ್ಯಸ್ತ’ ಎಂಬಂತಹ ಸುದ್ದಿಯನ್ನು ಕೇಳಿಯೇ ಗೊತ್ತಿರಲಿಲ್ಲ. ಚಾರ್ಮಾಡಿ ಘಾಟಿಯಲ್ಲಿ ಮಾತ್ರ ಜೋರು ಮಳೆ ಬಂದಾಗ ಕೆಲವೆಡೆ ಭೂಕುಸಿತ ಉಂಟಾಗುತ್ತಿತ್ತು ಅಷ್ಟೆ. ಹಿಂದಿನ ಕೆಲವು ವರ್ಷಗಳಿಂದ, ಪ್ರತಿ ಮಳೆಗಾಲದಲ್ಲಿ ಶಿರಾಡಿ ಘಾಟಿಯಲ್ಲೂ ಗುಡ್ಡ ಕುಸಿತ, ಕಿಲೊಮೀಟರ್ ಉದ್ದಕ್ಕೆ ವಾಹನಗಳು ಸಾಲುಗಟ್ಟುವಂತಹ ಸುದ್ದಿಗಳು ಮಾಮೂಲಾಗಿವೆ.

ಇಂತಹ ಬೆಳವಣಿಗೆಗಳಿಂದ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ. ಈ ಮಾರ್ಗಗಳಲ್ಲಿ ಸಂಚರಿಸುತ್ತಿರುವ ತೈಲ ಸಾಗಣೆಯ ಟ್ಯಾಂಕರ್ಗಳು, ದೊಡ್ಡ ದೊಡ್ಡ ಲಾರಿಗಳು, ಎತ್ತಿನಹೊಳೆ ಯೋಜನೆಯ ಕಾಮಗಾರಿ, ಹೆದ್ದಾರಿ ಅಗಲೀಕರಣದಂತಹ ಕಾರ್ಯಗಳು ಈ ಆತಂಕಕಾರಿ ಬೆಳವಣಿಗೆಗೆ ಕಾರಣವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ತಜ್ಞರು ಇದಕ್ಕೆ ಸೂಕ್ತ ಉತ್ತರ ಕಂಡುಕೊಳ್ಳಬೇಕು.

-ಬಿ.ಎನ್.ಭರತ್, ಬೆಂಗಳೂರು

ಆಟಕ್ಕೆ ಬೇಕು ಪ್ರಾಮುಖ್ಯ: ಧೋರಣೆ ಬದಲಾಗಲಿ

ಸದೃಢ ಮನಸ್ಸು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕ. ಸದೃಢ ದೇಹವು ದೃಢ ಮನಸ್ಸಿನ ಮೂಲ. ಮಕ್ಕಳು ಹೆಚ್ಚು ಅಂಕ ಗಳಿಸಬೇಕೆಂಬ ಕಾರಣಕ್ಕೆ ಅವರು ಪಠ್ಯಪುಸ್ತಕಗಳನ್ನು ಓದುವುದರತ್ತ ಮಾತ್ರ ಪೋಷಕರು ಹಾಗೂ ಶಿಕ್ಷಕರು ಲಕ್ಷ್ಯ ವಹಿಸುವುದು ಅಶಕ್ತ ಪೀಳಿಗೆಯ ಉಗಮಕ್ಕೆ ನಾಂದಿಯಾಗುತ್ತದೆ. ಮನೆ ಮತ್ತು ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೂ ಪ್ರಾಮುಖ್ಯ ಇರಬೇಕು. ಭವಿಷ್ಯದಲ್ಲಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಮತ್ತು ಜೀವನದ ನೈಜ ಆನಂದ ಸವಿಯಲು ಮಕ್ಕಳಿಗೆ ಆಟಗಳ ಮಹತ್ವವನ್ನು ತಿಳಿಸಿಕೊಡಬೇಕು. ಅವರು ಆಟದಲ್ಲಿ ತೊಡಗುವುದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು.

-ಅನಿಲಕುಮಾರ ಮುಗಳಿ, ಧಾರವಾಡ

ಪುಸ್ತಕದ ಸಾಂಗತ್ಯ: ಆರೋಗ್ಯಕರ ಹವ್ಯಾಸ

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ರಾಜ್ಯದ ಎಲ್ಲ ಶಾಲೆಗಳೂ ‘ಮಕ್ಕಳಸ್ನೇಹಿ ಗ್ರಂಥಾಲಯ’ ಹೊಂದಬೇಕು ಹಾಗೂ ಪ್ರಾಥಮಿಕ, ಪ್ರೌಢಶಾಲೆಗಳು ವಾರದಲ್ಲಿ ತರಗತಿಯ ಒಂದು ಅವಧಿಯನ್ನು ಗ್ರಂಥಾಲಯ ಬಳಕೆಗೆ ಮೀಸಲಿಡಬೇಕು ಎಂದು ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯು ಒಂದು ಕ್ರಾಂತಿಕಾರಕ ನಡೆಯಾಗಿದೆ. ಮಕ್ಕಳ ಕಲಿಕೆಯಲ್ಲಿನ ಏಕತಾನತೆಯನ್ನು ಹೋಗಲಾಡಿಸಿ ಅವರ ಜ್ಞಾನದ ಪರಿಧಿಯು ವ್ಯಾಪಕವಾಗಿ ವಿಸ್ತರಿಸುವಂತೆ ಮಾಡುವುದಕ್ಕೆ ಈ ಕ್ರಮ ಪೂರಕವಾಗಿದೆ.

ಪುಸ್ತಕದ ಸಾಂಗತ್ಯ ಬೆಳೆಸುವ ಈ ಯೋಜನೆಯು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಹವ್ಯಾಸವನ್ನು ಬೆಳೆಸುತ್ತದೆ. ಶಿಕ್ಷಕರು ಮತ್ತು ಅಧಿಕಾರಿಗಳು ಮನಃಪೂರ್ವಕವಾಗಿ ಈ ಯೋಜನೆಯಲ್ಲಿ ತೊಡಗಿಸಿಕೊಂಡಾಗ ಇಲಾಖೆಯ ಈ ಮಹತ್ತರ ಯೋಜನೆಯ ಆಶಯ ಸಾಕಾರಗೊಳ್ಳಲು ಸಾಧ್ಯ.

-ಜಯವೀರ ಎ.ಕೆ., ಖೇಮಲಾಪುರ, ರಾಯಬಾಗ

ಗುಡ್ಡ ಅಗೆತ: ಇರಲಿ ಕಡಿವಾಣ

ಧಾರವಾಡವು ಗುಡ್ಡಗಳ ನಗರ. ಆದರೆ ಈಗ ಬಹುತೇಕ ಗುಡ್ಡಗಳು ಅಗೆತಕ್ಕೆ ಒಳಗಾಗಿ, ಅಲ್ಲಿ ಮನೆಗಳನ್ನು ನಿರ್ಮಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಕೆಲವು ಕಡೆ ಗುಡ್ಡವನ್ನು ಅಗೆದು ಸಮತಟ್ಟು ಮಾಡಿ, ಬಿದ್ದ ಮಣ್ಣನ್ನು ಕೂಡ ಪೇರಿಸಿ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ಇಂತಹ ಬಡಾವಣೆಗಳಲ್ಲಿ ನಿವೇಶನಗಳನ್ನು ಹಂಚಿ ಗಂಟುಮಾಡಿಕೊಂಡು ಹೋದಾತ, ದುರಂತ ಸಂಭವಿಸಿದರೆ ಕೈಗೆ ಸಿಗಲಾರ. ಇದನ್ನೆಲ್ಲ ನೋಡುವಾಗ, ಕೇರಳದ ವಯನಾಡ್ ಭೂಕುಸಿತದ ಭಯಾನಕ ದೃಶ್ಯಗಳು ಕಣ್ಮುಂದೆ ಬಂದು ಮನಸ್ಸು ಕ್ಷೋಭೆಗೊಳಗಾಗುತ್ತದೆ.

ಗುಡ್ಡವು ಮಾನವ ನಿರ್ಮಿತವಲ್ಲ, ನಿಸರ್ಗ ನಿರ್ಮಿತ. ಅದು ಅಲ್ಲಿ ಇದೆಯೆಂದರೆ, ಅದಕ್ಕೆ ನೈಸರ್ಗಿಕ ಪ್ರಾಮುಖ್ಯ ಇರಲೇಬೇಕು. ಹೀಗಿರುವಾಗ ಯಾವುದೇ ಗುಡ್ಡ ಅಗೆಯುವಾಗ, ಮಣ್ಣು ತೆಗೆಯುವಾಗ, ಗಣಿಗಾರಿಕೆ ನಡೆಸುವಾಗ ಸ್ಥಳೀಯ ಆಡಳಿತದ ಅನುಮತಿ ಪಡೆಯಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಈ ಭೂಮಿ, ಗುಡ್ಡಗಳು ಅಥವಾ ನದಿಗಳು ನಮಗಾಗಿ ಉಚಿತವಾಗಿ ಬಂದ ಬಳುವಳಿಗಳಲ್ಲ. ಅವುಗಳನ್ನು ನಮ್ಮ ಮುಂದಿನ ಪೀಳಿಗೆಗಾಗಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು.

-ಶಾರದಾ ಗೋಪಾಲ, ಧಾರವಾಡ

ಬತ್ತಿರುವ ಕೆರೆಗಳಿಗೆ ನೀರು ತುಂಬಿಸಿ

ರಾಜ್ಯದ ಎಲ್ಲೆಡೆ ಈ ತಿಂಗಳು ಉತ್ತಮ ಮಳೆ ಆಗುತ್ತಿದ್ದು, ಹತ್ತು ಹಲವು ಅಣೆಕಟ್ಟೆಗಳು ತುಂಬಿ ಹರಿಯುತ್ತಿರುವುದು ಸಂತಸದ ಸಂಗತಿ. ಆದರೆ, ಕೆಲವೆಡೆ ಮಳೆಯೇ ಇಲ್ಲದೆ ಹಲವಾರು ಕೆರೆಗಳು ಬತ್ತಿಹೋಗಿವೆ. ಅರ್ಧ ಟಿಎಂಸಿ ಅಡಿ ಅಥವಾ ಒಂದು ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವುಳ್ಳ ಕೆರೆಗಳಿಗೆ ಈ ಮಳೆಗಾಲದ ಅವಧಿಯಲ್ಲೇ ನೀರು ತುಂಬಿಸಿದರೆ, ಜನರಿಗೆ, ಪಶು–ಪಕ್ಷಿಗಳಿಗಷ್ಟೇ ಅಲ್ಲದೆ ಆ ಪ್ರದೇಶದ ಅಂತರ್ಜಲ ವೃದ್ಧಿಗೂ ಅನುಕೂಲವಾಗುತ್ತದೆ. ಹಾಗಾಗಿ, ಸಂಬಂಧಪಟ್ಟವರು ಬತ್ತಿರುವ ಕೆರೆಗಳಿಗೆ ನೀರು ತುಂಬಿಸಲು ಗಮನಹರಿಸಲಿ.

-ಹೊಸಹಳ್ಳಿ ದಾಳೇಗೌಡ, ಬಿ.ಆರ್. ಪ್ರಾಜೆಕ್ಟ್, ಶಿವಮೊಗ್ಗ

ಅಂಗನವಾಡಿ: ಹೊಸ ನಾಮಕರಣ ಅನಗತ್ಯ

ಎಲ್ಕೆಜಿ, ಯುಕೆಜಿ ಶಿಕ್ಷಣ ನೀಡುವ ರಾಜ್ಯದ ಅಂಗನವಾಡಿಗಳಿಗೆ ‘ಸರ್ಕಾರಿ ಮಾಂಟೆಸ್ಸರಿ’ ಎಂದು ನಾಮಕರಣ ಮಾಡಲು ಸರ್ಕಾರ ಮುಂದಾಗಿರುವುದು ವಿಪರ್ಯಾಸ. ಅಂಗನವಾಡಿ ಎನ್ನುವ ಹೆಸರು ಮುಂದುವರಿದರೆ ಸರ್ಕಾರಕ್ಕೆ ಯಾವ ರೀತಿ ಮುಜುಗರ ಉಂಟಾಗುತ್ತದೆ ಎಂಬುದು ತಿಳಿಯುವುದಿಲ್ಲ.

-ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.