ದ್ವೇಷ ರಾಜಕಾರಣ: ಸೊರಗಿದ ಶಾಸಕರ ಶಕ್ತಿ

ರಾಜ್ಯದಲ್ಲಿ ನಡೆಯುತ್ತಿರುವ ಸದ್ಯದ ರಾಜಕಾರಣವನ್ನು ಗಮನಿಸಿದರೆ, ರಾಜಭವನವನ್ನು ಬಳಸಿಕೊಂಡು ಹೇಗಾದರೂ ಮಾಡಿ ಚುನಾಯಿತ ಸರ್ಕಾರವನ್ನು ಬೀಳಿಸಬೇಕೆಂದುಕೊಂಡಿರುವ ವಿರೋಧ ಪಕ್ಷಗಳು, ಇನ್ನೊಂದು ಕಡೆ, ಅಷ್ಟೇ ತೀವ್ರ ಪ್ರಯತ್ನ ಹಾಕಿ ಅದನ್ನು ತಡೆಯಲು ಹೊರಟಿರುವ ಆಡಳಿತ ಪಕ್ಷ ಕಾಣುತ್ತಿವೆ. ಈ ಇಬ್ಬರ ನಡುವೆ ಮತದಾರರು ಮೂರ್ಖರಾಗಿದ್ದಾರೆ. ರಾಜಕಾರಣಿಗಳ ಇಂತಹ ಆಟದಿಂದ ರಾಜ್ಯದ ಯಾವ ಯಾವ ವರ್ಗಕ್ಕೆ, ಅದರಲ್ಲೂ ಯುವಕರು, ರೈತರು, ಕೂಲಿಕಾರ್ಮಿಕರು, ಶಿಕ್ಷಣಾರ್ಥಿಗಳಿಗೆ ಯಾವ ರೀತಿಯ ಪ್ರಯೋಜನ ಆಗಲಿದೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು.

ಖಾಸಗಿ ಉದ್ದಿಮೆಗಳಲ್ಲಿ ಸೃಷ್ಟಿಯಾಗುವ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳನ್ನು ಶೇ 100ರಷ್ಟು ಪ್ರಮಾಣದಲ್ಲಿ ಕನ್ನಡಿಗರಿಗೇ ಮೀಸಲಿಡುವ ಉದ್ದೇಶದ ಕರಡು ಮಸೂದೆ ಬಗ್ಗೆ ಈಚೆಗೆ ಚರ್ಚೆ ನಡೆಯಿತು. ಉದ್ಯಮಿಗಳು ಮತ್ತು ಕೆಲವು ರಾಜಕಾರಣಿಗಳ ಬಿಗಿ ಪಟ್ಟಿಗೆ ಸಿಲುಕಿ, ಆ ಸದ್ದು ಹಾಗೇ ತಣ್ಣಗಾಯಿತು. ಅವರು ಇವರ ಮೇಲೆ, ಇವರು ಅವರ ಮೇಲೆ ವ್ಯಕ್ತಿಗತ ಜಿದ್ದಿನಿಂದ ತೊಡೆ ತಟ್ಟುವ ಬದಲು, ಇದೇ ಕಾಳಜಿಯನ್ನು ಕನ್ನಡಿಗರಿಗೆ ಉದ್ಯೋಗ ಕೊಡಿಸಲು ತೋರಿಸಬೇಕಾಗಿತ್ತು. ಚುನಾಯಿತ ಸದಸ್ಯರೆಲ್ಲರೂ ಒಟ್ಟಿಗೆ ಸೇರಿ ಗಟ್ಟಿಯಾಗಿ ನಿಂತಿದ್ದರೆ ಖಾಸಗಿ ಉದ್ದಿಮೆಗಳಲ್ಲಿ ಅರ್ಹ ಕನ್ನಡಿಗರಿಗೆ ಕೆಲಸ ಸಿಗುತ್ತಿತ್ತು. ರಾಜ್ಯದ ಅಭಿವೃದ್ಧಿಗೆ ನೆರವಾಗದ ಶಾಸಕರ ಶಕ್ತಿಯು ಜಿದ್ದು, ದ್ವೇಷ, ಅಸೂಯೆಯ ಕಡೆಗೆ ಸಾಗುತ್ತಿರುವುದು ಸರಿಯಲ್ಲ.

-ತಾ.ಸಿ.ತಿಮ್ಮಯ್ಯ, ಬೆಂಗಳೂರು

ಯಾಕಾದರೂ ಬರುತ್ತಾರೋ...!

ದುರಂತ ನಡೆದ ಸ್ಥಳವನ್ನು ಕೂಡಲೇ ವೀಕ್ಷಿಸಲು ಬರುವವರಿಂದ ರಕ್ಷಣಾ ಕಾರ್ಯಕ್ಕೆ ತೊಡಕುಂಟಾಗುತ್ತದೆ ಎಂದು ಡಾ. ಕೆ.ಎಸ್.ಚೈತ್ರಾ ಅವರು ತಮ್ಮ ಲೇಖನದಲ್ಲಿ (ಸಂಗತ, ಆ. 2) ಅಭಿಪ್ರಾಯಪಟ್ಟಿರುವುದು ಸರಿಯಾಗಿದೆ.

ಬೆಂಗಳೂರಿನಲ್ಲಿ ಹಿಂದೊಮ್ಮೆ ಸಂಭವಿಸಿದ ದುರಂತದಲ್ಲಿ, ರಕ್ಷಕರು ಜನರ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾಗ, ಅದನ್ನು ನೋಡಲು ಬಂದ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಆದರೆ ಆಗ ಸಚಿವರು, ಶಾಸಕರು ಬಂದುದರಿಂದ ಪೊಲೀಸರು ಶಿಷ್ಟಾಚಾರದ ಅನುಸಾರ ಅವರ ಕಡೆ ಗಮನ ಕೊಡಬೇಕಾಗಿ ಬಂತು. ಆಗ ಅವರ ಕೆಲಸಕ್ಕೆ ಅಡ್ಡಿಯಾಯಿತು. ಆ ಸಂದರ್ಭದಲ್ಲಿ ಒಬ್ಬ ಇನ್‌ಸ್ಪೆಕ್ಟರ್ ಹೇಳಿದ್ದು ನೆನಪಾಯಿತು: ‘ಇವರು ಯಾಕಾದರೂ ಬರುತ್ತಾರೋ?!’

-ಎಸ್.ವೆಂಕಟಕೃಷ್ಣ, ಬೆಂಗಳೂರು

ಪಾದರಕ್ಷೆ ಪ್ರಕರಣ: ಒಂದು ನೆನಪು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಅಂಗಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೊಲಿದಿದ್ದ ಚಪ್ಪಲಿಯನ್ನು ₹ 10 ಲಕ್ಷ ಕೊಟ್ಟು ಖರೀದಿಸಲು ವ್ಯಕ್ತಿಯೊಬ್ಬರು ಮುಂದೆ ಬಂದಿದ್ದರೂ ಉತ್ತರಪ್ರದೇಶದ ಚಮ್ಮಾರ ರಾಮ್ ಚೇತ್ ಅದನ್ನು ಕೊಡಲು ನಿರಾಕರಿಸಿರುವ ಸುದ್ದಿಯನ್ನು (ಪ್ರ.ವಾ., ಆ. 2) ಓದಿದಾಗ, ಮಹಾತ್ಮ ಗಾಂಧಿಯವರಿಗೆ ಸಂಬಂಧಿಸಿದ ಅಂತಹುದೇ ಒಂದು ಪ್ರಕರಣ ನೆನಪಾಯಿತು.

ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅಲ್ಲಿನ ಭಾರತೀಯರು ಮತ್ತು ಇತರರ ಹಕ್ಕುಗಳಿಗಾಗಿ ಹೋರಾಟ ಪ್ರಾರಂಭಿಸಿದಾಗ, ಅಲ್ಲಿನ ಬ್ರಿಟಿಷ್ ಆಡಳಿತಾಧಿಕಾರಿ ಜನರಲ್ ಸ್ಮಟ್ಸ್‌ನಿಂದ ಹಲವು ಬಾರಿ ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಬೇಕಾಗುತ್ತದೆ. ಆಗ ಗಾಂಧೀಜಿ ಜೈಲಿನಲ್ಲಿ ಪಾದರಕ್ಷೆ ಹೊಲಿಯುವುದನ್ನು ಕಲಿಯುತ್ತಾರೆ. ಜೈಲಿನಲ್ಲಿ ತಾವೇ ತಯಾರಿಸಿದ ಹಲವು ಪಾದರಕ್ಷೆಗಳ ಜೋಡಿಗಳಲ್ಲಿ ಒಂದು ಜೊತೆ ಪಾದರಕ್ಷೆಯನ್ನು ತಮ್ಮನ್ನು ಜೈಲಿಗೆ ಕಳುಹಿಸಿದ ಸ್ಮಟ್ಸ್‌ಗೆ ಕಾಣಿಕೆಯಾಗಿ ನೀಡುತ್ತಾರೆ. ಗಾಂಧೀಜಿ ಆಗ ಅಲ್ಲಿನ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಇದೇ ಸ್ಮಟ್ಸ್ ಮುಂದೆ ಗಾಂಧೀಜಿ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಇಂಗ್ಲೆಂಡಿಗೆ ಹೋದಾಗ ಅವರನ್ನು ಆತ್ಮೀಯವಾಗಿ ತನ್ನ ಮನೆಗೆ ಕರೆದೊಯ್ದು ಆದರಿಸಿ, ತಮ್ಮ ಮನೆಯ ಕಪಾಟಿನಲ್ಲಿದ್ದ, ಗಾಂಧೀಜಿ ಹೊಲಿದಿದ್ದ ಚಪ್ಪಲಿಯನ್ನು ತೋರಿಸುತ್ತಾ ಅವರ ನೆನಪನ್ನು ಕೆದಕುತ್ತಾನೆ.

ಗಾಂಧೀಜಿ 70ನೇ ಹುಟ್ಟುಹಬ್ಬದ ಸ್ಮರಣ ಸಂಚಿಕೆಗೆ ಬರೆದ ಲೇಖನವೊಂದರಲ್ಲಿ ಜನರಲ್ ಸ್ಮಟ್ಸ್ ‘... ಆ ಚಪ್ಪಲಿಗಳನ್ನು ನಾನು ಹಲವು ಬೇಸಿಗೆಗಳಲ್ಲಿ ಬಳಸಿರುವೆನಾದರೂ ಅಂತಹ ಅಪೂರ್ವ ವ್ಯಕ್ತಿ ಸಿದ್ಧಪಡಿಸಿದ ಚಪ್ಪಲಿಗಳಲ್ಲಿ ಕಾಲಿಡಲು ನಾನು ಅರ್ಹನಲ್ಲ ಎಂದೇ ಸದಾ ನನಗನ್ನಿಸಿದೆ’ ಎಂದಿದ್ದಾನೆ. ಅಂತೇಯೇ ಸ್ಮಟ್ಸ್ ಆ ಚಪ್ಪಲಿಗಳನ್ನು ಗಾಂಧಿ ವಸ್ತುಸಂಗ್ರಹಾಲಯಕ್ಕೆಂದು ನಂತರ ಭಾರತಕ್ಕೆ ಕಳಿಸಿಕೊಡುತ್ತಾನೆ. ಇದು ಅಂದಿನ ಪ್ರಾಜ್ಞ ಬ್ರಿಟಿಷ್ ಆಡಳಿತಗಾರರ ಮನದಲ್ಲಿ ಗಾಂಧೀಜಿ ಕುರಿತು ನೆಲಸಿದ್ದ ಆದರದ ಭಾವವನ್ನು ತೋರಿಸುತ್ತದೆ.

⇒ವೆಂಕಟೇಶ ಮಾಚಕನೂರ, ಧಾರವಾಡ

ಸಂಸತ್ ಭವನ ಸೋರಿಕೆ: ಗಂಭೀರವಾಗಿ ಪರಿಗಣಿಸಿ

ನೂತನ ಸಂಸತ್ ಭವನ ನಮ್ಮೆಲ್ಲರ ಹೆಮ್ಮೆಯ ಪ್ರತೀಕ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಭವನ ಒಂದೇ ವರ್ಷದಲ್ಲಿ ಸೋರುತ್ತಿರುವುದು ಎಲ್ಲ ಪ್ರಜೆಗಳೂ ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯ. ಯಾಕೆಂದರೆ, ಸೋರುತ್ತಿರುವುದು ಅಂಗನವಾಡಿ ಕಟ್ಟಡ ಅಲ್ಲ! ಅದು, ಭಾರತೀಯರ ಅಸ್ಮಿತೆಯಂತಿರುವ, ದೇಗುಲಕ್ಕೆ ಸಮಾನವಾದ ನಮ್ಮ ಸಂಸತ್ ಭವನ. ಅದರ ನಿರ್ಮಾಣ ವೆಚ್ಚದಲ್ಲಿ ನಮ್ಮ ತೆರಿಗೆ ಹಣ ಇದೆ!

100 ವರ್ಷದ ಇತಿಹಾಸ ಹೊಂದಿರುವ ನಮ್ಮ ಹಳೆಯ ಸಂಸತ್ ಭವನದಲ್ಲಿ ಇಲ್ಲಿಯವರೆಗೆ ಒಂದು ಹನಿ ನೀರೂ ಸೋರಿಕೆಯಾಗಿಲ್ಲ ಎಂಬುದು ಗಮನಾರ್ಹ. ಆಗಿನ ತಂತ್ರಜ್ಞಾನಕ್ಕೂ ಇಂದಿನ ತಂತ್ರಜ್ಞಾನಕ್ಕೂ ಅಜಗಜಾಂತರ ಇದೆ ಎಂಬುದನ್ನು ಇದು ಸೂಚಿಸುತ್ತದೆ. ನೂತನ ಸಂಸತ್ ಭವನ ಸೋರಿಕೆಯಾಗುತ್ತದೆ ಎಂದರೆ, ಅದನ್ನು ಕಳಪೆ ಕಾಮಗಾರಿ ಎಂದೇ ನಾವು ಭಾವಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.

-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ

ಹಗುರ... ಭಾರ?!

ಎಲ್‌ಕೆಜಿ, ಯುಕೆಜಿ
ಶಾಲಾ ಮಕ್ಕಳಿಗೆ

ಆಗುವುದಂತೆ
ಪುಸ್ತಕಗಳ ಹೊರೆ ಹಗುರ
ಅದಕ್ಕಿಂತ ದೊಡ್ಡದು
ಹೆತ್ತವರ ಚಿಂತೆ...
ಕಡಿಮೆ ಮಾಡುವವರಾರು
ಶಾಲಾ ಶುಲ್ಕದ ಭಾರ?!

-ಮ.ಗು.ಬಸವಣ್ಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.