ಮುತ್ತಿನಂಥ ಪ್ರಶ್ನೆ!

‘ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಹಗರಣಗಳ ಬಗ್ಗೆಯೇ ಏಕೆ ಚರ್ಚೆ ಮಾಡುತ್ತೀರಿ?’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕೇಳಿರುವುದಾಗಿ ವರದಿಯಾಗಿದೆ. ಇದೊಂದು ಮುತ್ತಿನಂತಹ ಪ್ರಶ್ನೆಯಾಗಿದೆ.

-ಎಸ್.ಎನ್.ಕೃಷ್ಣಮೂರ್ತಿ, ಕಡೂರು

ಆಸ್ಪತ್ರೆ ಆವರಣದಲ್ಲಿ ಇರಲಿ ಸೂಕ್ತ ಸೌಲಭ್ಯ

ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಹಣ್ಣುಹಂಪಲುಗಳ ಮಾರಾಟ ಮಳಿಗೆ ಹಾಗೂ ಸೂಕ್ತ ಕ್ಯಾಂಟೀನ್ ವ್ಯವಸ್ಥೆ ಇಲ್ಲದಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ರೋಗಿಗಳ ಸಂಬಂಧಿಕರು ದೂರದ ಸ್ಥಳಗಳಿಗೆ ಹೋಗಿ ದುಬಾರಿ ಬೆಲೆ ತೆತ್ತು ಅವುಗಳನ್ನು ಕೊಂಡು ತರಬೇಕಾದ ಪರಿಸ್ಥಿತಿ ಇದೆ. ಇದು ತಪ್ಪಬೇಕು. ಸರ್ಕಾರವು ಹಾಪ್ಕಾಮ್ಸ್ ಮೂಲಕ ಇಲ್ಲಿ ರಿಯಾಯಿತಿ ದರದಲ್ಲಿ ಹಣ್ಣುಹಂಪಲು ಮಾರಾಟ ವ್ಯವಸ್ಥೆ ಮಾಡಬೇಕು. ಜೊತೆಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ವ್ಯವಸ್ಥೆಯನ್ನು ಕೂಡ ಮಾಡಬೇಕು. ಇದರಿಂದ ಸಾವಿರಾರು ಮಂದಿಗೆ ಪ್ರಯೋಜನವಾಗುತ್ತದೆ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ವಿಚಾರಣಾಧೀನ ಕೈದಿಗಳಿಗೆ ವಿನಾಯಿತಿ ಅನಗತ್ಯ

ಕರ್ನಾಟಕ ಕಾರಾಗೃಹ ನಿಯಮಗಳ ಪ್ರಕಾರ, ಕೊಲೆ ಆರೋಪಿಗಳನ್ನು ಹೊರತುಪಡಿಸಿ ವಿಚಾರಣಾಧೀನ ಕೈದಿಗಳು ಸ್ವಂತ ಖರ್ಚಿನಲ್ಲಿ ಬಟ್ಟೆ, ಆಹಾರದಂತಹ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ರಾಜಕಾರಣಿಗಳು ಅಥವಾ ಪ್ರಮುಖ ರಾಜಕೀಯ ನಾಯಕರು ವಿವಿಧ ಆರೋಪಗಳಿಗೆ ಒಳಗಾಗಿ ಜೈಲು ಪಾಲಾದಾಗ, ಅವರಿಗೆ ವಿಐಪಿ ಆತಿಥ್ಯ ನೀಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಚಾರಣಾಧೀನ ಕೈದಿಗಳಿಗೆ ಇಂತಹ ಸೌಲಭ್ಯಗಳನ್ನು ನೀಡಿದರೆ, ಮನೆ ಮತ್ತು ಜೈಲು ಒಂದೇ ಎಂದು ಅವರಿಗೆ ಅನ್ನಿಸಿಬಿಡಬಹುದು. ಜೈಲುವಾಸದ ಅವಧಿಯು ಕೈದಿಗಳ ಮನಸ್ಸಿನಲ್ಲಿ ಪರಿವರ್ತನೆ ಉಂಟು ಮಾಡಿ, ಮುಂದೆ ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು, ಜೊತೆಗೆ ಅವರ ಶಿಸ್ತುಬದ್ಧ ಜೀವನಕ್ಕೆ ದಾರಿಯಾಗಬೇಕು.

ತೀವ್ರ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅಥವಾ ವೃದ್ಧ ಕೈದಿಗಳಿಗೆ ಕೆಲಮಟ್ಟಿನ ರಿಯಾಯಿತಿ ತೋರಬಹುದು. ಈ ಕಾರಣದಿಂದ, ಹಾಲಿ ಜಾರಿಯಲ್ಲಿರುವ ನಿಯಮಗಳಿಗೆ ಸರ್ಕಾರ ಸೂಕ್ತ ತಿದ್ದುಪಡಿ ತರುವ ಅಗತ್ಯವಿದೆ.

-ಕೆ.ವಿ.ವಾಸು, ಮೈಸೂರು

ಅನಾದರ ತೋರುವ ಪಿ.ಜಿ: ಕ್ರಮ ಬೇಕು

ಅನಿವಾರ್ಯವಾಗಿ ಪಿ.ಜಿ.ಗಳನ್ನು ಆಶ್ರಯಿಸಿರುವವರಲ್ಲಿ ಹಲವರು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ನಗರಗಳಲ್ಲಿ ಅವುಗಳ ಮಾಲೀಕರ ನಿರ್ಲಕ್ಷ್ಯಕ್ಕೆ ತುತ್ತಾಗುತ್ತಿದ್ದಾರೆ. ಕಾನೂನಿನ ಹಿಡಿತ ಏನೆಂಬುದನ್ನು ಇಂತಹ ಮಾಲೀಕರಿಗೆ ತಿಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸ್ವಸ್ಥ ಸಮಾಜದ ಸ್ಥಾಪನೆಗಾಗಿ ಇಂತಹ ಕ್ರಮ ಅಪೇಕ್ಷಿತ.

-ಅನಿಲಕುಮಾರ ಮುಗಳಿ, ಧಾರವಾಡ

ಶಿರೂರು ಪ್ರಕರಣ: ಗಂಭೀರವಾಗಿ ಪರಿಗಣಿಸಿ

ದೆಹಲಿಯ ಕೋಚಿಂಗ್ ಕೇಂದ್ರವೊಂದರ ನೆಲಮಾಳಿಗೆಗೆ ನೀರು ನುಗ್ಗಿ ಮೂವರು ಐಎಎಸ್ ಆಕಾಂಕ್ಷಿಗಳು ಬಲಿಯಾದ ಪ್ರಕರಣದ ಸಂಬಂಧ ಕೆಲವರನ್ನು ಬಂಧಿಸಿ ತನಿಖೆಗೆ ಒಳಪಡಿಸಿರುವುದು ಸ್ವಾಗತಾರ್ಹ. ದೆಹಲಿಗಿಂತಲೂ ಭಯಾನಕವಾದ ಹೃದಯವಿದ್ರಾವಕ ಪ್ರಕರಣ ಶಿರೂರಿನಲ್ಲಿ ಘಟಿಸಿದೆ. ಗುಡ್ಡ ಕಡಿಯುವಲ್ಲಿ ಆದ ತಾಂತ್ರಿಕ ದೋಷವೇ ಈ ದುರ್ಘಟನೆಗೆ ಮೂಲ ಕಾರಣ ಎಂಬುದು ತಜ್ಞರ ಅಭಿಮತ.

ಈ ಗುಡ್ಡ ಕುಸಿತದಿಂದ ಅಧಿಕೃತವಾಗಿ 11 ಮಂದಿ ನಾಪತ್ತೆ ಯಾಗಿದ್ದು ಅವರಲ್ಲಿ ಎಂಟು ಮಂದಿಯ ದೇಹಗಳು ಪತ್ತೆಯಾಗಿವೆ. ಶಿರೂರಿನ ಗಂಗಾವಳಿ ನದಿಯ ಆಚೆ ದಡದಲ್ಲಿನ ಜನರು ಮನೆಮಠ ಕಳೆದುಕೊಂಡು ದಿಗ್ಭ್ರಾಂತರಾಗಿದ್ದಾರೆ.
ವಿಷಯ ಇಷ್ಟೆಲ್ಲ ಗಂಭೀರವಾಗಿರುವಾಗ, ಇದಕ್ಕೆ ಕಾರಣ ಶೋಧಿಸಬೇಕು. ತಪ್ಪಿತಸ್ಥರನ್ನು ತನಿಖೆಗೆ ಒಳಪಡಿಸಿ, ಶಿಕ್ಷೆ ವಿಧಿಸಿದಾಗಲೇ ಸಂತ್ರಸ್ತರಿಗೆ ನ್ಯಾಯ ಸಿಕ್ಕಂತೆ ಆಗುವುದು.

-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ

ಕಸದ ಲಾರಿಗಳಿಗೆ ಇರಲಿ ವೇಗಮಿತಿ

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಕಸದ ಲಾರಿಯು ಇತ್ತೀಚೆಗೆ ಅತಿ ವೇಗದಲ್ಲಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಇಬ್ಬರು ಸವಾರರ ಅಮೂಲ್ಯ ಜೀವವನ್ನು ಬಲಿ ತೆಗೆದುಕೊಂಡಿರುವ ಸುದ್ದಿ (ಪ್ರ.ವಾ., ಜುಲೈ 29) ಕಳವಳ ಮೂಡಿಸಿತು. ಇದೇ ವೇಳೆ, ರಾಜ್ಯದಲ್ಲಿ ವಾಹನಗಳು 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವುದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಲು ಮುಂದಾಗಿರುವುದು ಜನಸ್ನೇಹಿ ನಡೆ.

ಅದೇ ರೀತಿ, ಕಸದ ಲಾರಿಗಳಿಗೆ ಅನುಮತಿ ಕೊಡುವಾಗಲೇ ವೇಗಮಿತಿಯನ್ನು ಗಂಟೆಗೆ 30 ಕಿ.ಮೀ.ಗೆ ನಿಗದಿ ಮಾಡುವುದು ಒಳ್ಳೆಯದು. ಇದರಿಂದ, ನಗರ ಪ್ರದೇಶಗಳಲ್ಲಿ ಯಮಸದೃಶ ಕಸದ ಲಾರಿಗಳಿಂದ ಒದಗಬಹುದಾದ ಅನಾಹುತಗಳ ನಿಯಂತ್ರಣ ಸಾಧ್ಯವಾಗಬಹುದು.

-ಶಾಂತಕುಮಾರ್, ಸರ್ಜಾಪುರ

ನಾರದನ ಕಿವಿಮಾತು?!

ಅಂದು ಪುರಾಣದ
ನಾರದನ ಕಿವಿಮಾತಿನಂತೆ
ಬೇಡನೊಬ್ಬ ದರೋಡೆ
ಮಾಡುವುದ ಬಿಟ್ಟು
ವಾಲ್ಮೀಕಿ ಆದನಂತೆ!
ಇಂದು ಯಾವ ನಾರದನ

ಕಿವಿಮಾತಿನ ಪ್ರಕಾರ

ವಾಲ್ಮೀಕಿ (ನಿಗಮದ) ಹಣವನ್ನು

ದರೋಡೆ ಮಾಡಿದರು

ಎಂದು ಇ.ಡಿ.ಯವರು

ಹುಡುಕುತ್ತಿದ್ದಾರಂತೆ?!

-ಜೆ.ಬಿ.ಮಂಜುನಾಥ, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.