ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಆನೆಗಳ ಸಾವು ಸಾಮಾನ್ಯ ಎಂಬಂತಾಗಿದೆ. ಕಳೆದ ಮಾರ್ಚ್ 16ರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ 35 ವರ್ಷದ ಹೆಣ್ಣಾನೆ ಮತ್ತು ಅದರ ಮಡಿಲಲ್ಲೇ ಅದರ 5 ತಿಂಗಳ ಮರಿ ಸತ್ತಿರುವ ಸಚಿತ್ರ ವರದಿ ಪ್ರಕಟವಾಗಿತ್ತು. ಅದೇ ತಿಂಗಳ 30 ಹಾಗೂ 31ರ ಪತ್ರಿಕೆಗಳಲ್ಲೂ ಆನೆ ಸಾವಿನ ವರದಿಗಳಿದ್ದವು. ಹೀಗೆ ಸತತವಾಗಿ ಆನೆಗಳು ಸಾವನ್ನಪ್ಪುತ್ತಿರುವುದು ಅಚ್ಚರಿ ಮತ್ತು ಬೇಸರವನ್ನು ಮೂಡಿಸುತ್ತದೆ.

ಜನಸಂಖ್ಯಾ ಸ್ಫೋಟದಿಂದಾಗಿ ಅನೇಕ ಜೀವಿಗಳು, ಪಕ್ಷಿಗಳು ಮಾತ್ರವಲ್ಲದೆ ಆನೆಯಂಥ ದೈತ್ಯ ಪ್ರಾಣಿಗಳೂ ಜೀವಿಸಲು ಕಷ್ಟಪಡುವಂತಾಗಿದೆ. ಮನುಷ್ಯನ ಸ್ವಾರ್ಥ, ಕ್ರೌರ್ಯಕ್ಕೆ ಎಣೆಯೇ ಇಲ್ಲವಾಗಿದೆ.

ಒಬ್ಬ ಮನುಷ್ಯನ ಕೊಲೆಯಾದರೆ ಕೊಲೆಗಾರನನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಲು ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆ ಇದೆ. ಹಾಗಾದರೆ ಮನುಷ್ಯನಿಗಿಂತ ಹಲವು ಪಟ್ಟು ದೊಡ್ಡದಾದ ಆನೆಗೆ ಜೀವಿಸುವ ಹಕ್ಕಿಲ್ಲವೇ? ಆನೆಗಳ ಹತ್ಯೆ ಮಾಡಿದವರನ್ನು ಪತ್ತೆ ಮಾಡುವ ಕೆಲಸಕ್ಕೆ ಯಾಕೆ ಆಸಕ್ತಿ ವಹಿಸುತ್ತಿಲ್ಲ?

ಅರಣ್ಯಭೂಮಿ ಒತ್ತುವರಿ, ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳು ಮತ್ತು ಗಣಿಗಾರಿಕೆಗೆ ಪರವಾನಗಿ ನೀಡಿದ್ದರಿಂದ ಕಾಡುಪ್ರಾಣಿಗಳಿಗೆ ನೆಲೆ ಇಲ್ಲದಾಗಿದೆ. ಇಂಥ ಚಟುವಟಿಕೆಗಳನ್ನು ನಿಲ್ಲಿಸಿದರೆ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಕಡಿಮೆ ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.