ಉತ್ತರಹಳ್ಳಿ, ಪೂರ್ಣಪ್ರಜ್ಞನಗರ ಮುಂತಾದ ಬಡಾವಣೆಗಳು ಇತ್ತೀಚೆಗೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬಡಾವಣೆಗಳು. ಈ ಪ್ರದೇಶಗಳಿಂದ ಕೆ.ಆರ್. ಮಾರುಕಟ್ಟೆ ಹಾಗೂ ಮೆಜೆಸ್ಟಿಕ್‌ಗೆ ಬಸ್ಸುಗಳ ಅನುಕೂಲ ಸಾಕಷ್ಟಿವೆಯಾದರೂ ತಲುಪಲು ಒಂದು, ಒಂದೂವರೆ ಗಂಟೆಯ ಪ್ರಯಾಣ ಪ್ರಯಾಸಕರವಾಗಿದೆ.

ಆದ್ದರಿಂದ ಒಂದೆರಡು ರೂಟ್ ಬಸ್‌ಗಳು ಈ ಬಡಾವಣೆಗಳಿಂದ ದೇವೇಗೌಡ ಪೆಟ್ರೋಲ್ ಬಂಕ್, ಕಾಮಾಕ್ಯ, ಕತ್ರಿಗುಪ್ಪೆ, ಬ್ಯಾಂಕ್ ಕಾಲೋನಿ, ಹನುಮಂತನಗರ ದಾಟಿ ಹಾಲಿ ಇರುವ 45ಜಿ ಮಾರ್ಗದಲ್ಲಿ ಅಂದರೆ ಗೂಡ್‌್ಸ ಶೆಡ್ ರಸ್ತೆಯ ಮೂಲಕ ಮೆಜೆಸ್ಟಿಕ್/ರೈಲ್ವೆ ನಿಲ್ದಾಣ ತಲುಪಿದರೆ ಅತಿ ಶೀಘ್ರವಾಗಿ ಮೆಜೆಸ್ಟಿಕ್ ತಲುಪಿ ಬಿಡಬಹುದು. ಹಾಗೂ ಹನುಮಂತನಗರ, ಗವಿಪುರಕ್ಕೆ ಸಂಪರ್ಕ ಕಲ್ಪಿಸಿದಂತಾಗುತ್ತದೆ.

ಈಗ ಈ ಪ್ರದೇಶಗಳಿಂದ ಹನುಮಂತನಗರ, ಗವಿಪುರ ತಲುಪಲು ಮೂರು ಬಸ್‌ಗಳನ್ನು ಬದಲಿಸ ಬೇಕಾಗಿರುವುದರಿಂದ ಅನಗತ್ಯ ಸಮಯ ವ್ಯಯವಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ನಮಗೆ ಅನುಕೂಲ ಮಾಡಿಕೊಡಬೇಕಾಗಿ ಕೋರುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.