ದೇಶದಲ್ಲಿ ಒಂದು ವರ್ಷದಿಂದ ಅಲ್ಪಸಂಖ್ಯಾತರು ಮತ್ತು ದಲಿತರು ಸಂತ್ರಸ್ತರಾಗಿರುವ ಯಾವುದೇ ಘಟನೆಯನ್ನು ತಿರುಚಿ ಕೇಂದ್ರ ಸರ್ಕಾರವನ್ನು, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಡಿಯುವ ಬಡಿಗೆಯಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ. ಹೈದರಾಬಾದ್ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ರೋಹಿತ್ ಸಾವು ಕೂಡ ಇದಕ್ಕೆ ಹೊರತಲ್ಲ.

ಪ್ರತಿಪಕ್ಷಗಳು ಹುಯಿಲೆ ಬ್ಬಿಸುತ್ತಿದ್ದಂತೆಯೇ ಟಿ.ವಿ. ಚಾನೆಲ್ಗಳು ಟಿ.ಆರ್.ಪಿ. ಹೆಚ್ಚಿಸಿಕೊಳ್ಳಲು ಅರಚಾಟ ಮೊದಲಿಡುತ್ತವೆ. ಸತ್ಯ ಸಂಶೋ ಧಿಸಿಬಿಟ್ಟರೆ ಸುದ್ದಿ ಒಂದೇ ದಿನಕ್ಕೆ ರದ್ದಿಯಾಗುತ್ತದೆ. ಆದ್ದ ರಿಂದ ಜಾತಿ, ಮತದ ಹೆಸರಿನಲ್ಲಿ ಬೆಂಕಿ ಹಚ್ಚಿಬಿಟ್ಟರೆ ಸುದ್ದಿ ಹಸಿಬಿಸಿಯಾಗಿ, ಹಲವು ದಿನ ಆದಾಯ ಮೂಲವಾಗುತ್ತದೆ.

ಇದೇ ಹೈದರಾಬಾದ್ ವಿ.ವಿ.ಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಎಂಟು ಮಂದಿ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐ.ಐ.ಟಿ.ಗಳಲ್ಲೂ ದಲಿತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಕಾರಣವೇನೆಂದು ಆಮೂಲಾಗ್ರ ತನಿಖೆಯಾದರೆ ಮಾತ್ರ ದಲಿತರಿಗೆ ನ್ಯಾಯ ಸಿಗುತ್ತದೆಯೇ ಹೊರತು ರಾಜಕೀಯ ಪುಢಾರಿಗಳ ಹುನ್ನಾರಗಳಿಗೆ ಬಲಿಯಾದರೆ ಅಲ್ಲ.

ಇಂದು ವಿ.ವಿ.ಗಳು ಗೂಂಡಾ ರಾಜಕಾರಣದ ಮೈದಾನ ವಾಗಿ ಪರಿವರ್ತನೆಗೊಂಡಿವೆ. ಇದರಲ್ಲಿ ದಲಿತರೂ ಸೇರಿ ದಂತೆ ಎಲ್ಲರ ಪಾಲಿದೆ. ಅಧ್ಯಯನ ಒಂದನ್ನು ಬಿಟ್ಟು ಉಳಿ ದೆಲ್ಲ ವ್ಯವಹಾರಗಳೂ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತವೆ. ದಲಿತ ವಿದ್ಯಾರ್ಥಿ ಸಾವನ್ನು ಪೆಪ್ಪರಮೆಂಟಿನಂತೆ ಚೀಪಿ ಸುಖಿಸುವುದರಲ್ಲೇ ಅವರವರ ಆನಂದವಿದೆ. ರೋಹಿತ್ ಸಾವು ನಮ್ಮ ವಿ.ವಿ.ಗಳ ಶುದ್ಧೀಕರಣಕ್ಕೆ ನಾಂದಿ ಆದೀತೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.