ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ ನೂತನವಾಗಿ ಅಳವಡಿಸಲಾದ ಮಾಪಕಗಳು, ನೀರು ಸರಬರಾಜಿನ ವೇಗಕ್ಕಿಂತ ಹೆಚ್ಚು ನಾಗಾಲೋಟದಲ್ಲಿ ಓಡುತ್ತಿವೆ. ಈ ಹಿಂದೆ ನೂರಾರು ರೂಪಾಯಿ ಬಿಲ್ ಬರುತ್ತಿದ್ದ ಜಾಗದಲ್ಲಿ ಸಾವಿರಾರು ರೂಪಾಯಿ ಬಿಲ್ ಬರತೊಡಗಿದೆ. ಆಸ್ತಿ ಕಂದಾಯ, ವಿದ್ಯುತ್ ಬಿಲ್, ಟಿಲಿಫೋನ್ ಬಿಲ್, ಆದಾಯ ತೆರಿಗೆ ಹಾಗೂ ಇತರೆ ಬಿಲ್ಗಳನ್ನೂ ಭರಿಸಬಹುದಾಗಿದೆ. ಆದರೆ ನೀರಿನ ಬಿಲ್ ಪಾವತಿಸಲು ಗ್ರಾಹಕರಿಗೆ ಬಹಳ ತೊಂದರೆಯುಂಟಾಗಿದೆ.

ಮತ್ತೊಂದೆಡೆ ಒಂದು ನಿವೇಶನದಲ್ಲಿರುವ ಕಟ್ಟಡ ಒಬ್ಬ ಮಾಲೀಕನಿಗೆ ಸೇರಿದ್ದು, ಈಗಾಗಲೇ ಆಧಿಕೃತ ನೀರಿನ ಸಂಪರ್ಕ ಹೊಂದಿದೆ. ಆದರೂ ಈ ಕಟ್ಟಡದಲ್ಲಿ ಒಂದಕ್ಕಿಂತ ಹೆಚ್ಚು ಶೌಚಾಲಯಗಳಿದ್ದಲ್ಲಿ ಪ್ರತಿಯೊಂದು ಶೌಚಾಲಯಕ್ಕೂ ಪ್ರತ್ಯೇಕ ನೀರಿನ ಸಂಪರ್ಕವನ್ನು ಪಡೆಯುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಶೌಚಾಲಯ ಸಂಪರ್ಕಗಳನ್ನು ಕಡಿತಗೊಳಿಸುವುದಾಗಿ ಜಲಮಂಡಳಿಯ ಸಿಬ್ಬಂದಿ ಬೆದರಿಕೆ ಒಡ್ಡುತ್ತಿದ್ದಾರೆ.

ಜಲಮಂಡಲಿಯ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟೀಕರಣ ನೀಡಲಿ. ಪ್ರತಿಯೊಂದು ಶೌಚಾಲಯಕ್ಕೂ ಪ್ರತ್ಯೇಕ ನೀರಿನ ಸಂಪರ್ಕವನ್ನು ಪಡೆಯುವುದು ಅಗತ್ಯ ಹಾಗೂ ಕಡ್ಡಾಯವಿದ್ದಲ್ಲಿ ಪುರಾವೆಗಾಗಿ ಜಲಮಂಡಳಿ ಹೊರಡಿಸಿರುವ ನೀಯಮಾವಳಿಗಳು, ಮಾರ್ಗಸೂಚಿ, ಸುತ್ತೋಲೆ, ಆದೇಶ ಹಾಗೂ ಇತರೆ ಪ್ರಕಟಣೆಗಳನ್ನು ಪ್ರಕಟಿಸಿ ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಶೀಘ್ರ ಕ್ರಮ ಕೃಗೊಳ್ಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.