ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪಾ ಅಮೆರಿಕ ಟೂರ್ನಿ: ಕ್ವಾರ್ಟರ್‌ಗೆ ಕೊಲಂಬಿಯಾ

Published 29 ಜೂನ್ 2024, 15:45 IST
Last Updated 29 ಜೂನ್ 2024, 15:45 IST
ಅಕ್ಷರ ಗಾತ್ರ

ಗ್ಲೆಂಡೇಲ್, ಅಮೆರಿಕ: ಕೊಲಂಬಿಯಾ ತಂಡವು ಶುಕ್ರವಾರ 3–0 ಗೋಲುಗಳಿಂದ ಕೋಸ್ಟರಿಕಾ ತಂಡವನ್ನು ಸೋಲಿಸಿ ಕೊಪಾ ಅಮೆರಿಕ ಟೂರ್ನಿಯ ಕ್ವಾರ್ಟರ್‌ ಫೈನಲ್ ಪ್ರವೇಶಿಸಿತು.

ಲೂಯಿಸ್ ಡಿಯಾಜ್, ಡೇವಿನ್ಸನ್ ಸ್ಯಾಂಚೆಜ್  ಮತ್ತು ಜಾನ್ ಕಾರ್ಡೊಬಾ ಗಳಿಸಿದ ಗೋಲುಗಳ ನೆರವಿನಿಂದ ಕೊಲಂಬಿಯಾ ತಂಡ 'ಡಿ' ಗುಂಪಿನಲ್ಲಿ ಆರು ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು. 

31ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಲಿವರ್‌ಪೂಲ್ ತಂಡದ ಸ್ಟಾರ್ ಆಟಗಾರ ಡಿಯಾಜ್ ಅವರು ಗೋಲಾಗಿ ಪರಿವರ್ತಿಸಿ ಕೊಲಂಬಿಯಾಕ್ಕೆ ಮುನ್ನಡೆ ಒದಗಿಸಿದರು. 59ನೇ ನಿಮಿಷ ಡೇವಿನ್ಸನ್ ಹಾಗೂ 62ನೇ ನಿಮಿಷ ಜಾನ್ ಗೋಲು ಗಳಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು.

ಕೊಲಂಬಿಯಾ ತಂಡದ ಪ್ರಬಲ ರಕ್ಷಣಾ ವ್ಯೂಹದಿಂದ ಕೋಸ್ಟರಿಕಾ ತಂಡಕ್ಕೆ ಗೋಲು ಗಳಿಸಲು ಅವಕಾಶ ಆಗಲಿಲ್ಲ. 

ಬ್ರೆಜಿಲ್‌ಗೆ ಜಯ: ಮತ್ತೊಂದು ಪಂದ್ಯದಲ್ಲಿ ವಿನೀಷಿಯಸ್ ಜೂನಿಯರ್ ವಿರಾಮಕ್ಕೆ ಮೊದಲೇ ಗಳಿಸಿದ ಎರಡು ಗೋಲುಗಳ ನೆರವಿನಿಂದ ಬ್ರೆಜಿಲ್ ತಂಡ 4–1 ರಿಂದ ಪರಗ್ವೆ ತಂಡವನ್ನು ಮಣಿಸಿತು. ಆ ಮೂಲಕ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿತು. 

ಆಡಿರುವ ಎರಡು ಪಂದ್ಯ ಸೋತಿರುವ ಪರಗ್ವೆ ಟೂರ್ನಿಯಿಂದ ಹೊರಬಿತ್ತು. ಮಂಗಳವಾರ ನಡೆಯುವ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಬ್ರೆಜಿಲ್ ಜಯ ಗಳಿಸಿದರೆ ಅಥವಾ ಡ್ರಾ ಸಾಧಿಸಿದರೆ ಗುಂಪಿನಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿ ನಾಕೌಟ್‌ಗೆ ಮುನ್ನಡೆಯಬಹುದು.

ಬ್ರೆಜಿಲ್ ಪರ ಮೊದಲಾರ್ಧದಲ್ಲಿ ವಿನೀಸಿಯಸ್‌ (35, 45+5),  ಸ್ಯಾವಿನ್ಹೋ (43) ಗೋಲು ಗಳಿಸಿದರೆ,  ದ್ವಿತೀಯಾರ್ಧದಲ್ಲಿ ಲ್ಯೂಕಾಸ್ ಪಕ್ವೆಟಾ (65ನೇ ನಿಮಿಷ) ‘ಪೆನಾಲ್ಟಿ ಕಿಕ್’ ಮೂಲಕ ಗೋಲು ಗಳಿಸಿದರು. ಪರಗ್ವೆ ಪರ ಒಮರ್ ಅಲ್ಡೆರೆಟ್ ಏಕೈಕ ಗೋಲು ಗಳಿಸಿದರು.

ಒರಟು ಆಟಕ್ಕಾಗಿ 81ನೇ ನಿಮಿಷದಲ್ಲಿ ಪರಗ್ವೆ ತಂಡದ ಆಂಡ್ರೆಸ್ ಕ್ಯೂಬಾಸ್ ಅವರಿಗೆ ರೆಡ್ ಕಾರ್ಡ್ ತೋರಿಸಿ ಹೊರಗೆ ಕಳುಹಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT