ರಿಯಾದ್ (ಎಎಫ್ಪಿ): ದಿಗ್ಗಜ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರು ಮುಂದಿನ ಋತುವಿನಲ್ಲಿ ಸೌದಿ ಅರೇಬಿಯಾದ ಕ್ಲಬ್ ಪರ ಆಡಲು ಭಾರಿ ಮೊತ್ತದ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಇದರೊಂದಿಗೆ ಅವರು ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಹಾದಿಯಲ್ಲಿ ಹೆಜ್ಜೆಯಿಟ್ಟಿದ್ದಾರೆ. ರೊನಾಲ್ಡೊ, ಸೌದಿ ಅರೇಬಿಯಾದ ಪ್ರೊ ಲೀಗ್ ಕ್ಲಬ್ ಅಲ್ ನಸ್ರ್ ಪರ ಆಡುತ್ತಿದ್ದಾರೆ.

ಮೆಸ್ಸಿ ಯಾವ ಕ್ಲಬ್ ಪರ ಆಡುವರು ಮತ್ತು ಒಪ್ಪಂದದ ಮೊತ್ತ ಎಷ್ಟು ಎಂಬುದು ಬಹಿರಂಗವಾಗಿಲ್ಲ. ‘ಮೆಸ್ಸಿ ಅವರ ಒಪ್ಪಂದ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಋತುವಿನಲ್ಲಿ ಸೌದಿ ಅರೇಬಿಯಾದಲ್ಲಿ ಆಡಲಿದ್ದಾರೆ’ ಎಂಬುದನ್ನಷ್ಟೇ ಮೂಲಗಳು ಹೇಳಿವೆ.

‘ಭಾರಿ ಮೊತ್ತದ ಒಪ್ಪಂದ ಇದಾಗಿದ್ದು, ಅಂತಿಮ ಹಂತದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದೇವೆ’ ಎಂದು ಮೂಲಗಳು ತಿಳಿಸಿವೆ. ಮೆಸ್ಸಿ ಅವರು ಅಲ್ ಹಿಲಾಲ್ ಕ್ಲಬ್ಗೆ ಆಡಲಿದ್ದಾರೆ ಎಂದು ಕೆಲವು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು.

ಅವರು ಈಗ ಆಡುತ್ತಿರುವ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್ಜಿ) ಕ್ಲಬ್ ಈ ಬೆಳವಣಿಗಗಳ ಬಗ್ಗೆ ಏನನ್ನೂ ಹೇಳಿಲ್ಲ. ಪಿಎಸ್ಜಿ ಜತೆಗಿನ ಅವರ ಒಪ್ಪಂದ ಜೂನ್ 30 ರಂದು ಕೊನೆಗೊಳ್ಳಲಿದೆ. ಒಪ್ಪಂದವನ್ನು ಇನ್ನೊಂದು ಅವಧಿಗೆ ವಿಸ್ತರಿಸಲು ಕ್ಲಬ್ ಉತ್ಸುಕವಾಗಿಲ್ಲ ಎನ್ನಲಾಗಿದೆ.

‘ಒಪ್ಪಂದವನ್ನು ನವೀಕರಿಸುವುದಾಗಿದ್ದಲ್ಲಿ, ಈ ಹಿಂದೆಯೇ ಮಾಡಬೇಕಿತ್ತು’ ಎಂದು ಪಿಎಸ್ಜಿಯ ಮೂಲಗಳು ಹೇಳಿವೆ.

ಮೆಸ್ಸಿ ಈಚೆಗೆ ಕ್ಲಬ್ನ ಒಪ್ಪಿಗೆ ಪಡೆಯದೆಯೇ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದರು. ಇದಕ್ಕಾಗಿ ಅವರನ್ನು ಎರಡು ವಾರಗಳ ಅವಧಿಗೆ ಅಮಾನತು ಮಾಡಿತ್ತು. ಈ ತಪ್ಪಿಗಾಗಿ ಅವರು ಅಭಿಮಾನಿಗಳ ಕ್ಷಮೆ ಕೋರಿದ್ದರು.

ರೊನಾಲ್ಡೊ ಅವರು 2025ರ ಜೂನ್ವರೆಗೆ ಅಲ್ ನಸ್ರ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ ₹1,775 ಕೋಟಿ ಪಡೆದಿದ್ದಾರೆ ಎಂದು ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.