ಬೆಂಗಳೂರು: ದೆಹಲಿ ತಂಡವು ಇಲ್ಲಿ ನಡೆಯುತ್ತಿರುವ ಎನ್‌ಎಫ್‌ಸಿ ಸಬ್ ಜೂನಿಯರ್ ಬಾಲಕರ ಸೆಮಿಫೈನಲ್‌ನಲ್ಲಿ ಆತಿಥೇಯ ಕರ್ನಾಟಕ ತಂಡವನ್ನು ಎದುರಿಸಲಿದೆ. ನಾಲ್ಕರ ಘಟ್ಟದ ಪಂದ್ಯವು ಶುಕ್ರವಾರ ಬೆಂಗಳೂರು ಫುಟ್‌ಬಾಲ್ ಮೈದಾನದಲ್ಲಿ ನಡೆಯಲಿದೆ

ಬುಧವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡವು 7 –2ರಿಂದ ಒಡಿಶಾ ವಿರುದ್ಧ ಜಯಿಸಿತು. ಡೆಲ್ಲಿ ತಂಡದ ಮ್ಯಾಕ್‌ಡೊನಿಷ್ ಎನ್‌ಗೆರಂಗಬಮ್ (49, 52ನೇ ನಿ), ತೈಬಾಂಗ್ ಎನ್‌ಗಾಂಬಾ (64ನಿ, 88ನಿ) ಮತ್ತು ಅಂಶ್ ರಾಜ್ ಸಿಂಗ್ (71ನಿ, 86ನಿ) ಗೋಲುಗಳನ್ನು ಗಳಿಸಿದರು. ತಂಡದ ಅಮನ್ ಟೊಪೊ ಉಡುಗೊರೆ ಗೋಲು ಕೊಟ್ಟರು.

ಒಡಿಶಾ ತಂಡದ ಆಯುಷ್ ಗೋಪಿ (19ನಿ, 58ನಿ) ಗೋಲು ಹೊಡೆದರು.

ಎ ಗುಂಪಿನಲ್ಲಿ ಪಂಜಾಬ್ ತಂಡವು 9–0ಯಿಂದ ಬಿಹಾರ ವಿರುದ್ಧ ಜಯಿಸಿತು. ಪಂಜಾಬ್ ತಂಡದ ಶಂಶೇರ್ ಸಿಂಗ್ (17ನಿ, 20ನಿ, 28ನಿ, 32ನಿ ಹಾಗೂ 89ನಿ) ಗೋಲುಗಳ ಮಳೆ ಸುರಿಸಿದರು. ಆಶು ಕುಮಾರ್ (45+2ನಿ), ಹರ್ಗುನ್ ಸಿಂಗ್ (62ನಿ) ಜಶನ್‌ಪ್ರೀತ್ ಸಿಂಗ್ (63ನಿ) ಮತ್ತು ಅಮಣಿಂದರ್ ಸಿಂಗ್ ಜೋಶಿ (87ನಿ) ತಲಾ ಒಂದು ಗೋಲು ಗಳಿಸಿದರು.

ಗುರುವಾರ ವಿಶ್ರಾಂತಿಯ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.