ಕಲ್ಯಾಣಿ: ಲಿಂಡಾ ಕೋಮ್ ಮತ್ತು ಪ್ರಿಯಾಂಕಾ ಪೊಟ್ಟೆಕಾಟ್ ಗಳಿಸಿದ ಗೋಲುಗಳ ನೆರವಿನಿಂದ ಲಯನೆಸಸ್ ತಂಡ 17 ವರ್ಷದೊಳಗಿನವರ ಮಹಿಳೆಯರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಪಂದ್ಯದಲ್ಲಿ ಏಕಪಕ್ಷೀಯ ಜಯ ಸಾಧಿಸಿತು.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಪ್ಯಾಂಥರ್ಸ್ ತಂಡವನ್ನು ಲಯನೆಸೆಸ್ 3–0 ಗೋಲುಗಳಿಂದ ಮಣಿಸಿತು. ಲಿಂಡಾ ಕೋಮ್ 35ನೇ ನಿಮಿಷದಲ್ಲಿ ಮತ್ತು ಪ್ರಿಯಾಂಕಾ 73ನೇ ನಿಮಿಷದಲ್ಲಿ ತಂಡಕ್ಕೆ ಗೋಲು ತಂದುಕೊಟ್ಟರು. ಪ್ಯಾಂಥರ್ಸ್‌ನ ಸುಧಾ ಟರ್ಕಿ 17ನೇ ನಿಮಿಷದಲ್ಲಿ ಲಯನೆಸಸ್‌ಗೆ ಉಡುಗೊರೆ ಗೋಲು ನೀಡಿ ಆ ತಂಡ ಖಾತೆ ತೆರೆಯಲು ನೆರವಾದರು.

ಲಯನೆಸೆಸ್‌ನ ಸುಮತಿ ಕುಮಾರಿಗೆ ಪಂದ್ಯದ ಮೊದಲ ಗೋಲು ಗಳಿಸುವ ಅವಕಾಶ ಲಭಿಸಿತ್ತು. ಆದರೆ ಗೋಲು ಗಳಿಸಿದ್ದು ಮಾತ್ರ ಎದುರಾಳಿ ತಂಡದ ನಾಯಕಿ ಸುಧಾ. ಸುನಿತಾ ಮುಂಡಾ ನೀಡಿದ ಕ್ರಾಸ್ ತಡೆಯಲು ಯತ್ನಿಸಿದ ಅವರು ಲಯ ತಪ್ಪಿ ಚೆಂಡನ್ನು ತಮ್ಮದೇ ಬಲೆಯೊಳಗೆ ನುಗ್ಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.