ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೇಬಲ್ ಟೆನಿಸ್‌ ಟೂರ್ನಿ: ಬೆಳಗಾವಿಯ ತನಿಷ್ಕಾಗೆ ‘ಡಬಲ್’ ಸಂಭ್ರಮ

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್‌ ಟೂರ್ನಿ: ವಿಭಾಸ್‌ಗೆ 17 ವರ್ಷದೊಳಗಿನವರ ಪ್ರಶಸ್ತಿ
Published : 6 ಜುಲೈ 2024, 16:09 IST
Last Updated : 6 ಜುಲೈ 2024, 16:09 IST
ಫಾಲೋ ಮಾಡಿ
Comments

ಮಂಗಳೂರು: ಬಲಶಾಲಿ ಹೊಡೆತ ಮತ್ತು ಅಮೋಘ ಬ್ಲಾಕಿಂಗ್‌ ಮೂಲಕ ಗಮನ ಸೆಳೆದ ಬೆಳಗಾವಿಯ ತನಿಷ್ಕಾ ಕಪಿಲ್ ಕಾಲಭೈರವ್ 24 ತಾಸುಗಳೊಳಗೆ ಎರಡು ಪ್ರಶಸ್ತಿ ಗೆದ್ದು ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಸಂಭ್ರಮಿಸಿದರು.

ಸಂಗಮ್ ಬೈಲೂರು ಅವರ ಬೆಳಗಾವಿ ಟೇಬಲ್ ಟೆನಿಸ್ ಅಕಾಡೆಮಿಯ ಕ್ರೀಡಾಪಟು, ಡಿವೈನ್ ಪ್ರಾವಿಡೆನ್ಸ್ ಶಾಲೆಯ ವಿದ್ಯಾರ್ಥಿನಿ ತನಿಷ್ಕಾ ಶುಕ್ರವಾರ ರಾತ್ರಿ 17 ವರ್ಷದೊಳಗಿನ ಬಾಲಕಿಯರ ಪ್ರಶಸ್ತಿ ಗೆದ್ದುಕೊಂಡರೆ ಶನಿವಾರ ಸಂಜೆ 15 ವರ್ಷದೊಳಗಿನ ಬಾಲಕಿಯರ ವಿಭಾಗದ ಚಾಂಪಿಯನ್ ಆದರು. 

ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ, ನಗರದ ಕಂಕನಾಡಿಯ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಟೂರ್ನಿಯ 17 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತೆ ತನಿಷ್ಕಾ 11-5, 11-5, 11-4ರಲ್ಲಿ ಪರ್ಣವಿ ಎದುರು ಜಯ ಗಳಿಸಿದರು. 15 ವರ್ಷದೊಳಗಿನವರ ವಿಭಾಗದಲ್ಲಿ ಪಾಂಗ್ ಸ್ಮಾಷರ್ಸ್‌ನ ಹಿಯಾ ಸಿಂಗ್ ವಿರುದ್ಧ 11-13, 6-11, 11-9, 11-4, 11-3ರಲ್ಲಿ ಗೆದ್ದರು. ಬೆಂಗಳೂರಿನಲ್ಲಿ ನಡೆದ ಈ ವರ್ಷದ ಮೊದಲ ರ‍್ಯಾಂಕಿಂಗ್ ಟೂರ್ನಿಯ ಫೈನಲ್‌ನಲ್ಲೂ ಅವರು ಹಿಯಾ ಸಿಂಗ್ ಎದುರು ಗೆದ್ದಿದ್ದರು.

17 ವರ್ಷದೊಳಗಿನ ಬಾಲಕರ ವಿಭಾಗದ ಪ್ರಶಸ್ತಿಯೂ ಎರಡನೇ ಶ್ರೇಯಾಂಕಿತ ಆಟಗಾರನ ಪಾಲಾಯಿತು. ತಮಗಿಂತ ಕಡಿಮೆ ಶ್ರೇಯಾಂಕದ ಗೌರವ್ ಗೌಡ ವಿರುದ್ಧ ಬೆಂಗಳೂರು ಸ್ಕೈಸ್‌ ಅಕಾಡೆಮಿಯ ವಿಭಾಸ್ ವಿ.ಜಿ 11-7, 11-13, 11-6, 9-11, 11-5ರಲ್ಲಿ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದರು. 

17 ಮತ್ತು 15 ವರ್ಷದೊಳಗಿನ ಬಾಲಕಿಯರ ಪ್ರಶಸ್ತಿ ಗೆದ್ದ ತನಿಷ್ಕಾ ಕಪಿಲ್‌ ಕಾಲಭೈರವ್‌ ಆಟದ ಶೈಲಿ -ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
17 ಮತ್ತು 15 ವರ್ಷದೊಳಗಿನ ಬಾಲಕಿಯರ ಪ್ರಶಸ್ತಿ ಗೆದ್ದ ತನಿಷ್ಕಾ ಕಪಿಲ್‌ ಕಾಲಭೈರವ್‌ ಆಟದ ಶೈಲಿ -ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್

ಫಲಿತಾಂಶಗಳು: 17 ವರ್ಷದೊಳಗಿನ ಬಾಲಕರ ಫೈನಲ್‌: ವಿಭಾಸ್‌ಗೆ ಗೌರವ್‌ ಗೌಡ ವಿರುದ್ಧ 11-7, 11-13, 11-6, 9-11, 11-5ರಲ್ಲಿ ಜಯ; ಸೆಮಿಫೈನಲ್‌: ವಿಭಾಸ್‌ಗೆ ಅಥರ್ವ ನವರಂಗೆ ಎದುರು 5-11, 11-6, 11-8, 11-6ರಲ್ಲಿ, ಗೌರವ್ ಗೌಡಗೆ ಆರ್ಯ ಜೈನ್ ವಿರುದ್ಧ 11-9, 6-11, 7-11, 11-6, 11-7ರಲ್ಲಿ ಜಯ. 17 ವರ್ಷದೊಳಗಿನ ಬಾಲಕಿಯರ ಫೈನಲ್‌: ತನಿಷ್ಕಾ ಕಾಲಭೈರವ್‌ಗೆ ಪರ್ಣವಿ ವಿರುದ್ಧ 11-5, 11-5, 11-4ರಲ್ಲಿ ಜಯ; ಸೆಮಿಫೈನಲ್‌: ತನಿಷ್ಕಾಗೆ ಹಿಮಾಂಶಿ ಚೌಧರಿ ಎದುರು 12-10, 2-11, 13-11, 8-11, 11-5ರಲ್ಲಿ, ಪರ್ಣವಿಗೆ ನೀತಿ ಅಗರವಾಲ್ ವಿರುದ್ಧ 6-11, 11-8, 11-9, 11-13, 11-8ರಲ್ಲಿ ಜಯ. 15 ವರ್ಷದೊಳಗಿನ ಬಾಲಕಿಯರ ಫೈನಲ್‌: ತನಿಷ್ಕಾಗೆ ಹಿಯಾ ಸಿಂಗ್ ವಿರುದ್ಧ 11-13, 6-11, 11-9, 11-4, 11-3ರಲ್ಲಿ ಗೆಲುವು. ಸೆಮಿಫೈನಲ್‌: ತನಿಷ್ಕಾಗೆ ಶಿವಾನಿ ಮಹೇಂದ್ರ ವಿರುದ್ಧ 8-11, 11-3, 11-8, 11-5ರಲ್ಲಿ, ಹಿಯಾ ಸಿಂಗ್‌ಗೆ ಕೈರಾ ಬಾಳಿಗಾ ವಿರುದ್ಧ 11-9, 11-5, 9-11, 11-5ರಲ್ಲಿ ಜಯ. ನಾನ್ ಮೆಡಲಿಸ್ಟ್‌ ಸಿಂಗಲ್ಸ್‌ ಫೈನಲ್‌: ಅನುಜ್ ಮಹಿಪಾಲ್‌ಗೆ ಅರ್ನಾಲ್ಡ್ ಜೋಸೆಫ್ ವಿರುದ್ಧ 11-5, 11-5, 11-4ರಲ್ಲಿ ಜಯ.

17 ಮತ್ತು 15 ವರ್ಷದೊಳಗಿನ ಬಾಲಕಿಯರ ಪ್ರಶಸ್ತಿ ಗೆದ್ದ ತನಿಷ್ಕಾ ಕಪಿಲ್‌ ಕಾಲಭೈರವ್‌ ಆಟದ ಶೈಲಿ -ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
17 ಮತ್ತು 15 ವರ್ಷದೊಳಗಿನ ಬಾಲಕಿಯರ ಪ್ರಶಸ್ತಿ ಗೆದ್ದ ತನಿಷ್ಕಾ ಕಪಿಲ್‌ ಕಾಲಭೈರವ್‌ ಆಟದ ಶೈಲಿ -ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT