ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈಕ್ವೆಸ್ಟ್ರಿಯನ್: ಭಾರತದ ಸೂರ್ಯಗೆ ಬೆಳ್ಳಿ

Published : 12 ಅಕ್ಟೋಬರ್ 2024, 13:52 IST
Last Updated : 12 ಅಕ್ಟೋಬರ್ 2024, 13:52 IST
ಫಾಲೋ ಮಾಡಿ
Comments

ಬೆಂಗಳೂರು: ಭಾರತದ ಯುವ ಅಶ್ವಾರೋಹಿ ಪಟು ಸೂರ್ಯ ಆದಿತ್ಯ ಅವರು ಏಷ್ಯನ್ ಯೂತ್‌ ಈಕ್ವೆಸ್ಟ್ರಿಯನ್ ಫೆಡರೇಷನ್ ಕಪ್ ಟೂರ್ನಿಯ‌ಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಈಕ್ವೆಸ್ಟ್ರಿಯನ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಬೆಂಗಳೂರಿನ ಸರ್ಜ್ ಸ್ಟೇಬಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಎರಡನೇ ದಿನವಾದ ಶನಿವಾರ 18 ವರ್ಷ ವಯಸ್ಸಿನ ಸೂರ್ಯ ಅಮೋಘ ಪ್ರದರ್ಶನ ನೀಡಿದರು. ಅವರು ಯಾವುದೇ ಪೆನಾಲ್ಟಿ ಪಾಯಿಂಟ್ಸ್‌ ಪಡೆಯದೆ 11 ಅಡೆತಡೆ ಮತ್ತು 1.15 ಮೀಟರ್‌ ಶೋ ಜಂಪಿಂಗ್‌ ಅನ್ನು 71.42 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದರು.

ಸೂರ್ಯ ಅವರಿಗಿಂತ 6.22 ಸೆಕೆಂಡ್‌ ಬೇಗ ಗುರಿ ಮುಟ್ಟಿದ ಇರಾನ್‌ನ ಮೊಲ್ಲಾಫ್ಜಲ್‌ ಚಿನ್ನದ ಪದಕ ಗೆದ್ದರೆ, ಹಾಂಗ್‌ಕಾಂಗ್‌ನ ಫ್ಯಾಬಿಯೊಲಾ ಚೊಂಗ್ (79.99 ಸೆ) ಕಂಚಿನ ಪದಕ ಜಯಿಸಿದರು. 

ಮ್ಯಾನ್ಮಾರ್‌ನ ಕ್ಯಾವ್ ಉನ್ನಾ ಆಂಗ್ (89.66 ಸೆ) ಮತ್ತು ಥಾಯ್ಲೆಂಡ್‌ನ ಪಪುಂಗ್‌ಕಾರ್ನ್ ಪಬ್ಬಮ್ನಾನ್ (92.50 ಸೆ) ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನ ಪಡೆದರು. ಒಟ್ಟು 12 ರೈಡರ್‌ಗಳಲ್ಲಿ ಎಂಟು ಮಂದಿ ಸರ್ಜ್ ಸ್ಟೇಬಲ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT