ಕೊಚ್ಚಿ: ಶಬರಿಮಲೆಗೆ ತೆರಳದಂತೆ ಪೊಲೀಸರು ಮಾಡಿದ ಮನವಿ ತಿರಸ್ಕರಿಸಿ ಮುನ್ನಡೆಯಲು ಯತ್ನಿಸಿದಹಿಂದೂ ಐಕ್ಯ ವೇದಿಕೆಯ ನಾಯಕಿ ಕೆ.ಪಿ. ಶಶಿಕಲಾ ಅವರನ್ನು ಬಂಧಿಸಲಾಗಿದೆ. ಅವರ ಬಂಧನ ವಿರೋಧಿಸಿರುವಬಲಪಂಥೀಯ ಸಂಘಟನೆಗಳು ಕೇರಳ ಬಂದ್‌ಗೆ ಕರೆ ನೀಡಿವೆ.

ಇದನ್ನೂ ಓದಿ:ಅಯ್ಯಪ್ಪ ದರ್ಶನ: ತೃಪ್ತಿ ದೇಸಾಯಿ ಯತ್ನ ವಿಫಲ

ಶಬರಿಮಲೆ ಸನ್ನಿಧಾನಂ ಸಮೀಪದ ಮರಕ್ಕುಟ್ಟಂ ಎಂಬಲ್ಲಿ ಶುಕ್ರವಾರ ಮಧ್ಯರಾತ್ರಿ 1.30ರ ವೇಳೆಗೆ ಅವರನ್ನು ಬಂಧಿಸಲಾಗಿದೆ. ಬಂಧನಕ್ಕೂ ಮೊದಲು ವಾಪಸ್ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ, ಪೊಲೀಸರ ಮನವಿಗೆ ಸೊಪ್ಪುಹಾಕದ ಅವರು, ಶನಿವಾರ ಬೆಳಿಗ್ಗೆ ದರ್ಶನ ಮಾಡದ ಹೊರತು ತಾವು ಹಿಂದಿರುಗುವುದಿಲ್ಲ ಎಂದು ಹಠ ಮಾಡಿದ್ದಾರೆ.

ಇದನ್ನೂ ಓದಿ: ದಿನಾಂಕ ಬಹಿರಂಗಪಡಿಸದೆ ಗೆರಿಲ್ಲಾ ತಂತ್ರ ಬಳಸಿ ಶಬರಿಮಲೆಗೆ ಭೇಟಿ ನೀಡುವೆ: ತೃಪ್ತಿದೇಸಾಯಿ

ಬಳಿಕ ಅವರನ್ನು ರನ್ನಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಬೆಂಬಲಿಗರು ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.

ಈ ವೇಳೆಹಿಂದೂ ಐಕ್ಯ ವೇದಿಕೆಯ ನಾಯಕ ಭಾರ್ಗವರಮ್, ಶಬರಿಮಲೆ ಆಚಾರ ಸಂರಕ್ಷಣಾ ಸಮಿತಿಯ ರಾಜ್ಯ ಕಾರ್ಯದರ್ಶಿ ಪೃಥ್ವಿಪಾಲ ಹಾಗೂ ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಮುಖ್ಯಸ್ಥ ಪಿ.ಸುಧೀರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆಗೆಬಿಜೆಪಿ ತನ್ನ ಬೆಂಬಲವನ್ನು ಘೋಷಿಸಿದೆ.ತಮ್ಮ ನಾಯಕರ ಬಂಧನವು ಪಕ್ಷದ ಮೇಲೆ ಯಾವುದೇ ಪ್ರಭಾವ ಉಂಟುಮಾಡುವುದಿಲ್ಲ ಎಂದು ಬಿಜೆಪಿ ಹೇಳಿದೆ.

ಪ್ರತಿಭಟನಾಕಾರರು ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಸಂಬಂಧಪಟ್ಟ ಲೇಖನಗಳು

ರಕ್ಷಣೆ ನೀಡದಿದ್ದರೂ ಶಬರಿಮಲೆ ತಲುಪುತ್ತೇನೆ ಎಂದಿದ್ದ ದೇಸಾಯಿಗೆ ಪ್ರತಿಭಟನೆಯ ಬಿಸಿ

ಶಬರಿಮಲೆ: ಮಹಿಳೆ ಪ್ರವೇಶ ತೀರ್ಪು ಅನುಷ್ಠಾನಕ್ಕೆ ಕಾಲಾವಕಾಶ ಕೇಳುತ್ತೇವೆ: ಟಿಡಿಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.