ಲಖನೌ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತಮ್ಮ ಮೇಲೆ ಆಧಾರರಹಿತವಾಗಿ ಆರೋಪ ಮಾಡಿದೆ ಎಂದು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.

‘ರವಿಶಂಕರ್ ಅವರು ಉಗ್ರರು ಮತ್ತು ಸಮಾಜ ವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ’ ಎಂದು ಎಐಎಂಪಿಎಲ್‌ಬಿ ಆರೋಪಿಸಿತ್ತು.

‘ಮಂಡಳಿಯ ಆರೋಪದಿಂದ ನನಗೆ ಆಘಾತವಾಗಿದೆ’ ಎಂದು ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲಿ ರೆಹ್ಮಾನಿ ಅವರಿಗೆ ಇದೇ 12ರಂದು ಬರೆದ ಪತ್ರದಲ್ಲಿ ರವಿಶಂಕರ್ ಹೇಳಿಕೊಂಡಿದ್ದಾರೆ.

‘ಯಾವುದೇ ಬಗೆಯ ಶಾಂತಿಭಂಗ ಎಲ್ಲೇ ನಡೆದಿದ್ದರೂ ನಾನು ಅದನ್ನು ಖಂಡಿಸಿದ್ದೇನೆ. ನನ್ನ 61 ವರ್ಷಗಳ ಬದುಕಿನದಲ್ಲಿ ಮಾತು ಅಥವಾ ಕೃತಿಯಿಂದ ನಾನು ಯಾರಿಗೂ ಕೇಡು ಬಯಸಿಲ್ಲ. 41 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಶಾಂತಿ, ಸೌಹಾರ್ದ ಮತ್ತು ಅಧ್ಯಾತ್ಮ ಉನ್ನತಿಗಾಗಿಯೇ ಶ್ರಮಿಸಿದ್ದೇನೆ’ ಎಂದು ಶ್ರೀ ಶ್ರೀ ಪತ್ರದಲ್ಲಿ ಹೇಳಿದ್ದಾರೆ.

‘ಭಾರತದ ಪರಿಸ್ಥಿತಿಯೂ ಸಿರಿಯಾದಂತೆಯೇ ಆಗಬಹುದು. ಮುಸ್ಲಿಮರು ಅಯೋಧ್ಯೆ ಮೇಲೆ ತಮ್ಮ ಹಕ್ಕು ಸಾಧಿಸುವುದನ್ನು ಬಿಟ್ಟುಕೊಡಬೇಕು ಎಂದು ರವಿಶಂಕರ್ ಹೇಳಿದ್ದಾರೆ. ಆದರೆ ಇದು ಮುಸ್ಲಿಮರು ಮತ್ತು ನ್ಯಾಯಾಲಯಗಳಿಗೆ ಒಡ್ಡುತ್ತಿರುವ ಬೆದರಿಕೆ. ಇದು ದೇಶದ ಒಳಿತಿಗೆ ಪೂರಕವಲ್ಲ’ ಎಂದು ರೆಹ್ಮಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.