ಹಿಂಸಾಚಾರದಲ್ಲಿ ಕರ್ನಾಟಕ, ರಾಮಮಂದಿರ ಸ್ತಬ್ಧಚಿತ್ರಕ್ಕೆ ಹಾನಿ
ಗಣರಾಜ್ಯೋ್ವದ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಸೇರಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತುಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭ ಕರ್ನಾಟಕದ ಸ್ತಬ್ದಚಿತ್ರ,ಕ್ಕೆ ಹೆಚ್ಚು ಹಾನಿಯಾಗಿದ್ದು, ಉತ್ತರ ಪ್ರದೇಶದ ರಾಮಮಂದಿರ ಸ್ತಬ್ಧಚಿತ್ರ, ಡಿಆರ್‌ಡಿಓ, ಆಯುಷ್ಮಾನ್ ಭಾರತ್ ಬಹುತೇಕ ಸ್ತಬ್ಧಚಿತ್ರಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.Last Updated 29 ಜನವರಿ 2021, 4:12 IST