ಸುಜಯ್ ಮತ್ತು ವೀಣಾ ಸುಶಿಕ್ಷಿತ ದಂಪತಿ. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಚಾರ್ಟಡ್ ಅಕೌಂಟೆಂಟ್ ಆಗಿರುವ ಸುಜಯ್ಗೆ ತಿಂಗಳು, ವರ್ಷಗಳು ಕ್ಷಣದಲ್ಲಿ ಮುಗಿದಂತೆ ಭಾಸವಾಗುತ್ತದೆ. ವಾರದ ರಜೆ ಹಾಗೆ ಬಂದು ಹೀಗೆ ಹೋಗಿರುತ್ತದೆ.

ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಪ್ರಾಧ್ಯಾಪಕಿ ಯಾಗಿರುವ ಅವರ ಪತ್ನಿ ವೀಣಾ ವರ್ಷದಲ್ಲಿ ಹಲವು ಬಾರಿ ವಿಚಾರಸಂಕಿರಣ, ಪ್ರಬಂಧ ಮಂಡನೆ ಎನ್ನುತ್ತ ಲಂಡನ್, ದೆಹಲಿ, ಹೈದರಾಬಾದ್ ಎನ್ನುತ್ತ ವಿಮಾನ ಹತ್ತುತ್ತಲೇ ಇರುತ್ತಾರೆ. ಈ ದಂಪತಿಯ ಒಬ್ಬಳೇ ಮಗಳು ಎಂಟು ವರ್ಷದ ಅದಿತಿಗೆ ಮನೆಯಲ್ಲಿರುವ ಅಕ್ಕ (ಮನೆಗೆಲಸದ ಹುಡುಗಿ) ಹೆಚ್ಚುಕಡಿಮೆ ಅಮ್ಮನಂತೆ ಆಗಿದ್ದಾಳೆ.

ಎರಡು ವರ್ಷದ ಹಿಂದಿನವರೆಗೆ ಎಲ್ಲವೂ ಸರಿಯಾಗಿ ಸಾಗಿತ್ತು. ತಮ್ಮ ಕೆಲಸದ ಒತ್ತಡದಿಂದಾಗಿ ಒಬ್ಬಳೇ ಮಗಳು ಸಾಕು ಎಂಬ ನಿರ್ಧಾರಕ್ಕೂ ಈ ದಂಪತಿ ಬಂದಿದ್ದರು. ಅದಿತಿ ಹುಟ್ಟಿದಾಗಿನಿಂದ ಆಕೆಯನ್ನು ಬೆಳೆಸಿದ್ದ ‘ಅಕ್ಕ’ ಮದುವೆಯ ಕಾರಣದಿಂದ ಊರಿಗೆ ಮರಳಿದಾಗಲೇ ಸಮಸ್ಯೆ ಆರಂಭವಾಗಿದ್ದು. ಆಕೆಯ ನಂತರ ಬಂದ ಮನೆಗೆಲಸದ ಹುಡುಗಿಯರಿಗೆ ಅದಿತಿ ಹೊಂದಿಕೊಳ್ಳಲೇ ಇಲ್ಲ.

ಓದಿನಲ್ಲಿ ಮುಂದಿದ್ದರೂ ಮನೆಯಲ್ಲಿ ಸಿಡುಕು, ಅಪ್ಪ–ಅಮ್ಮನಿಗೆ ಹೊಡೆಯುವುದು, ಗಂಟೆ ಗಟ್ಟಲೇ ಕಾರ್ಟೂನ್ ನೋಡುವುದು ಅದಿತಿಗೆ ರೂಢಿಯಾಯಿತು. ಮಕ್ಕಳ ಮನಃಶಾಸ್ತ್ರಜ್ಞರ ಬಳಿ ಸುಜಯ್, ವೀಣಾ ಹೋದಾಗ ಅವರು ಹೇಳಿದ್ದು– ‘ಮತ್ತೊಂದು ಮಗು ಮಾಡಿಕೊಳ್ಳಿ’ ಮತ್ತೊಂದು ಮಗುವಿಗೆ ಮಾನಸಿಕವಾಗಿ ಸಿದ್ಧವಾಗಿ, ಸಂತಾನ ನಿಯಂತ್ರಣ ಕ್ರಮಗಳನ್ನು ನಿಲ್ಲಿಸಿದ ವರ್ಷವಾದರೂ ಆಗಷ್ಟೇ 37 ದಾಟಿದ್ದ ವೀಣಾ ಮಡಿಲು ತುಂಬಲಿಲ್ಲ. ಗಾಬರಿಬಿದ್ದು ಈ ದಂಪತಿ ವೈದ್ಯರ ಬಳಿ ಧಾವಿಸಿದರು. ಅವರಲ್ಲಿ ಕಾಣಿಸಿಕೊಂಡಿದ್ದು ಎರಡನೇ ಬಂಜೆತನ (ಸೆಕೆಂಡರಿ ಇನ್ಫರ್ಟಿಲಿಟಿ).

ಎರಡನೇ ಬಂಜೆತನ ಅಂದರೇನು?
ಒಂದು ಅಥವಾ ಹೆಚ್ಚಿನ ಮಕ್ಕಳು ಜನಿಸಿದ ನಂತರ ಮಹಿಳೆ ಸಹಜವಾಗಿ ಗರ್ಭ ಧರಿಸಲು ವಿಫಲವಾದಲ್ಲಿ ಅದನ್ನು ಎರಡನೇ ಬಂಜೆತನ ಎಂದು ಕರೆಯಲಾಗುತ್ತದೆ. ಇಂತಹ ದಂಪತಿಗೆ ಮೊದಲ ಮಗು ಸಹಜವಾಗಿ ಜನಿಸಿರುತ್ತದೆ. ಯಾವುದೇ ಸಂತಾನೋತ್ಪತ್ತಿ ತಂತ್ರಜ್ಞಾನ ಬಳಸದೇ ಅಥವಾ ಫಲವತ್ತತೆಯ ಚಿಕಿತ್ಸೆ ಪಡೆಯದೇ ಅವರ ಮಡಿಲು ತುಂಬಿರುತ್ತದೆ.

ಈ ಸಮಸ್ಯೆ ಎದುರಿಸುವ ದಂಪತಿಗೆ ತಮ್ಮಲ್ಲಿ ‘ಬಂಜೆತನ’ವಿದೆ ಎಂಬ ಅಂಶ ಗೊತ್ತಿರುವುದಿಲ್ಲ. ಮೊದಲ ಮಗು ಹುಟ್ಟುವಾಗ ಯಾವುದೇ ಸಮಸ್ಯೆ ಎದುರಿಸದೇ ಇರುವುದರಿಂದ ಅದು ಅವರಿಗೆ ಆಘಾತ ನೀಡಬಹುದು.

‘ಭಾರತದಲ್ಲಿ ವರದಿಯಾಗುತ್ತಿರುವ ಬಂಜೆತನದ ಪ್ರಕರಣಗಳ ಪೈಕಿ ಶೇ 25ರಷ್ಟು ಎರಡನೇ ಬಂಜೆತನಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಎರಡನೇ ಬಂಜೆತನಕ್ಕೂ ಜೀವನಶೈಲಿಗೂ ನೇರ ಸಂಬಂಧವಿದೆ. ಬಹುತೇಕ ಉದ್ಯೋಗಸ್ಥ ದಂಪತಿಗಳು ಮೊದಲ ಮಗು ಹುಟ್ಟಿದ ಏಳೆಂಟು ವರ್ಷಗಳ ನಂತರ ಎರಡನೇ ಮಗುವಿಗೆ ಪ್ರಯತ್ನಿಸಿದಾಗ ಬಂಜೆತನ ಇರುವುದು ಕಂಡು ಬರುತ್ತದೆ’ ಎನ್ನುತ್ತಾರೆ ಬೆಂಗಳೂರಿನ ನೋವ ಐವಿಐ ಫರ್ಟಿಲಿಟಿ ಕೇಂದ್ರದ ಚಿಕಿತ್ಸಾ ನಿರ್ದೇಶಕ ಡಾ. ಸಿ.ಎಸ್. ಮಂಜುನಾಥ್.

‘ಮಕ್ಕಳಿರಲಮ್ಮ ಮನೆತುಂಬ’ ಎಂಬಂತೆ ನಮ್ಮ ಹಳ್ಳಿಗಾಡಿನ ಮಹಿಳೆಯರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ 35ರೊಳಗೆ ಎರಡು ಮೂರು ಮಕ್ಕಳನ್ನು ಹೆತ್ತಿರುವುದರಿಂದ ಅವರಿಗೆ ಎರಡನೇ ಬಂಜೆತನದ ಸಮಸ್ಯೆ ಅಷ್ಟಾಗಿ ಭಾದಿಸದು.

‘ದಂಪತಿ ಮೊದಲ ಮಗುವನ್ನು ಸಹಜವಾಗಿ ಪಡೆದಿರುವುದರಿಂದ ತಮಗೆ ಬಂಜೆತನವಿದೆ ಎಂಬ ಅಂಶ ಅವರನ್ನು ಧೃತಿಗೆಡಿಸುತ್ತದೆ. ಗೊಂದಲ, ಒತ್ತಡದಿಂದಾಗಿ ಸ್ವ ನಿಂದನೆಗೆ ಇಳಿಯುತ್ತಾರೆ. ಖಿನ್ನತೆಗೆ ಜಾರುತ್ತಾರೆ. ಅಂತಹ ದಂಪತಿಗೆ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆಯ ಅಗತ್ಯವಿರುತ್ತದೆ’ ಎನ್ನುತ್ತಾರೆ ಡಾ. ಮಂಜುನಾಥ್.

ಎರಡನೇ ಬಂಜೆತನಕ್ಕೆ ಕಾರಣಗಳು
ಮಹಿಳೆಯರಲ್ಲಿ....
ತಾಯಿಯ ವಯಸ್ಸು: ಎರಡನೇ ಮಗು ಪಡೆಯುವಾಗ ತಾಯಿಗೆ ಹೆಚ್ಚು ವಯಸ್ಸಾಗಿದ್ದು, ಆ ಕಾರಣದಿಂದಾಗಿ ಸ್ವಾಭಾವಿಕವಾಗಿ ಆಕೆಯಲ್ಲಿನ ಅಂಡಾಣು ಸಂಖ್ಯೆ ಕಡಿಮೆಯಾಗಿರುತ್ತದೆ. ವಯಸ್ಸು ಹೆಚ್ಚಾದಂತೆ ಅಂಡಾಣುಗಳ ಸಂಖ್ಯೆ ಹಾಗೂ ಗುಣಮಟ್ಟ ಕುಸಿಯುತ್ತದೆ. ಅಂತಹ ಸಂದರ್ಭಗಳಲ್ಲಿ ತಾಯಿ ಗರ್ಭ ಧರಿಸಿದರೂ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು.

ಕಿಬ್ಬೊಟ್ಟೆ/ನಾಳದ ಸಮಸ್ಯೆಗಳು: ಗರ್ಭಕೋಶದ ಹೊರಗೆ ಬೆಳೆಯುವ ಅಂಗಾಂಶಗಳು (endometriosis), ಹೊಟ್ಟೆಯ ಶಸ್ತ್ರಚಿಕಿತ್ಸೆ ಹಾಗೂ ಈ ಹಿಂದೆ ಮಾಡಿಸಿಕೊಂಡಿದ್ದ ಗರ್ಭಪಾತಗಳಿಂದ ಕಿಬ್ಬೊಟ್ಟೆ ಭಾಗದಲ್ಲಿ ಅಂಗಾಂಶಗಳು ಬೆಳೆಯುವುದು, ಡಿಂಭನಾಳ ಕಟ್ಟಿಕೊಂಡಿರುವುದು.

ಮೊದಲನೆ ಹೆರಿಗೆ ನಂತರ ಹಾರ್ಮೋನ್ಗಳ ಅಸಮತೋಲನ: ಜೀವನಶೈಲಿಯಲ್ಲಿ ಆಗುವ ವ್ಯತ್ಯಯದಿಂದಾಗಿ ಮಹಿಳೆ ಅತಿಯಾಗಿ ತೂಕ ಗಳಿಸಿಕೊಳ್ಳಬಹುದು ಅಥವಾ ಸಣ್ಣಗಾಗಬಹುದು. ಅತಿಯಾಗಿ ತೂಕ ಗಳಿಸಿಕೊಂಡಾಗ ಅದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಅದು ಮಹಿಳೆಯಲ್ಲಿ ಟೆಸ್ಟೊಸ್ಟರೋನ್ ಹಾರ್ಮೋನ್ ಪ್ರಮಾಣ ಹೆಚ್ಚಿಸುತ್ತದೆ. ಹಾಗಾದಾಗ ಅದು ಸಹಜ ಅಂಡೋತ್ಪತ್ತಿ(ovu*ation)ಯ ಮೇಲೆ ಪರಿಣಾಮ ಬೀರುತ್ತದೆ.

*ಮಹಿಳೆಯ ತೂಕ ಕಡಿಮೆಯಾದಾಗ ಋತುಚಕ್ರ ಅನಿಯಮಿತವಾಗುತ್ತದೆ. ಆಕೆಗೆ ತೂಕ ಹೆಚ್ಚಿಸಿಕೊಳ್ಳಲು ಆಪ್ತ ಸಮಾಲೋಚನೆ ಮಾಡಬೇಕಾಗುತ್ತದೆ.

ಪುರುಷರಲ್ಲಿ...
*ವಯಸ್ಸು, ಧೂಮಪಾನ, ಮಾದಕ ವಸ್ತು ಸೇವನೆ ಹಾಗೂ ವೈದ್ಯಕೀಯ ಚಿಕಿತ್ಸೆಯಿಂದಾಗಿ ವೀರ್ಯದ ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಇಳಿಕೆ

*ಪುರುಷರು ಅತಿಯಾಗಿ ತೂಕ ಗಳಿಸಿದ್ದಾಗ ಈಸ್ಟ್ರೋಜನ್ ಪ್ರಮಾಣ ಹೆಚ್ಚುತ್ತದೆ ಹಾಗೂ ವೀರ್ಯ ಉತ್ಪಾದನೆ ಕಡಿಮೆಯಾಗುತ್ತದೆ.

ಮರು ಶಸ್ತ್ರಚಿಕಿತ್ಸೆ
ಪತಿ ಅಥವಾ ಪತ್ನಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಕೆಲ ವರ್ಷಗಳ ನಂತರ ಎರಡನೇ ಮಗು ಹೊಂದಲು ಬಯಸಬಹುದು. ಆಗಲೂ ಈ ಸಮಸ್ಯೆ ಎದುರಾಗುತ್ತದೆ.

ಮಹಿಳೆಗೆ ಗರ್ಭ ಧರಿಸುವ ಸಾಮರ್ಥ್ಯ ಇರಬಹುದು. ಗರ್ಭಧಾರಣೆಯಾದರೂ 2–3 ತಿಂಗಳಿಗೆ ಗರ್ಭಪಾತವಾಗಿಬಿಡುತ್ತದೆ. ಮೇಲಿನ ಈ ಸಮಸ್ಯೆಗಳನ್ನು ಸಹ ವೈದ್ಯರು ಎರಡನೇ ಬಂಜೆತನದ ಪಟ್ಟಿಗೆ ಸೇರಿಸುತ್ತಾರೆ.

ಒಂದೇ ಮಗು ಸಾಕು ಎಂದು ನಿರ್ಧರಿಸಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ದಂಪತಿ ಕೆಲ ವರ್ಷಗಳ ನಂತರ ಮನಸ್ಸು ಬದಲಿಸಬಹುದು. ಟ್ಯೂಬೆಕ್ಟಮಿ (ಮಹಿಳೆಯರಿಗೆ ಮಾಡುವ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ), ವ್ಯಾಸೆಕ್ಟಮಿ (ಪುರುಷರಿಗೆ ಮಾಡುವ ಚಿಕಿತ್ಸೆ) ಮಾಡಿದಾಗ ಮತ್ತೆ ಶಸ್ತ್ರಚಿಕಿತ್ಸೆ ನಡೆಸಿದ ಅದನ್ನು ಸರಿಪಡಿಸಲಾಗುತ್ತದೆ.

‘ಅಪಘಾತ ಅಥವಾ ರೋಗ, ರುಜಿನದಿಂದ ಒಂದೇ ಮಗು ಮೃತಪಟ್ಟಂತಹ ದುರಂತದ ಸಂದರ್ಭದಲ್ಲಿ ಮಧ್ಯವಯಸ್ಕ ದಂಪತಿ ಮತ್ತೊಂದು ಮಗುವಿಗಾಗಿ ಹಾತೊರೆಯುತ್ತಾರೆ. ಫಲವತ್ತತೆ ಚಿಕಿತ್ಸಾ ಕೇಂದ್ರಗಳ ಬಾಗಿಲು ತಟ್ಟುತ್ತಾರೆ. ಆಗ ಮರು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ’ ಎಂದು ವಿವರಿಸುತ್ತಾರೆ ಡಾ. ಮಂಜುನಾಥ್.

ಚಿಕಿತ್ಸೆ ಹೇಗೆ...?
‘ಎರಡನೇ ಬಂಜೆತನದ ಸಮಸ್ಯೆಗೆ ಹೆಚ್ಚಾಗಿ ಮಹಿಳೆಯರಲ್ಲಿನ ತೊಂದರೆಗಳೇ ಕಾರಣ ವಾಗಿರುತ್ತವೆ. 35 ದಾಟಿದ ನಂತರ ಮಹಿಳೆಯರಲ್ಲಿ ಅಂಡಾಣು ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ. ಅಂಡಾಣುಗಳ ಗುಣಮಟ್ಟವೂ ಕುಸಿಯುತ್ತದೆ. ಎರಡನೇ ಮಗುವಿಗಾಗಿ ಪಯತ್ನಿಸಿದಾಗ ಈ ತೊಂದರೆ ಕಾಣುವುದರಿಂದ ಚಿಕಿತ್ಸೆಗಾಗಿ ಬರುವ ದಂಪತಿಗಳಲ್ಲಿ ಮಹಿಳೆಯರ ವಯಸ್ಸು 38 ದಾಟಿರುತ್ತದೆ.

‘ಅಂಡಾಣುಗಳ ಸಂಖ್ಯೆ ಹೆಚ್ಚಿಸುವಂತಹ ಹಾರ್ಮೋನ್ಗಳನ್ನು ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ‘ಅಂಡಾಣುಗಳ ಉತ್ಪಾದನೆ ಸಮರ್ಪಕವಾಗಿದ್ದರೂ ಮಹಿಳೆ ಗರ್ಭ ಧರಿಸಲು ವಿಫಲವಾಗಿದ್ದಾಗ ಪ್ರನಾಳ ಶಿಶು ತಂತ್ರಜ್ಞಾನ (In Vitro Ferti*ization) ಬಳಸಲಾಗುವುದು. ‘ಚಿಕಿತ್ಸೆ ಪಡೆದ ನಂತರವೂ ಮಹಿಳೆಯಲ್ಲಿ ಅಂಡಾಣು ಉತ್ಪಾದನೆ ಆಗದಿದ್ದ ಸಂದರ್ಭದಲ್ಲಿ ದಾನಿಗಳ ಅಂಡಾಣು ಬಳಸಲಾಗುವುದು’ ಎಂದು ಡಾ. ಮಂಜುನಾಥ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.