ವೆಲ್ಲಿಂಗ್ಟನ್: ಬಾಲ್ಯದಲ್ಲಿ ಅತಿಯಾದ ಟಿವಿ ವೀಕ್ಷಣೆಯೂ ಮಕ್ಕಳ ವಯಸ್ಕ ಹಂತದಲ್ಲಿ ಧೂಮಪಾನ ಹಾಗೂ ಜೂಜಾಟಕ್ಕೆ ಕಾರಣವಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.

ನ್ಯೂಜಿಲೆಂಡ್‌ನ ವೆಲ್ಲಿಂಗಟನ್‌ನ ಒಟಾಗೊ ವಿಶ್ವವಿದ್ಯಾಲಯದ ‘ಡುನೇಡಿನ್ ಹೆಲ್ತ್ ಆ್ಯಂಡ್ ಡೆವೆಲಪ್‌ಮೆಂಟ್ ಸ್ಟಡಿ’ ಈ ವರದಿ ನೀಡಿದೆ. ವರದಿಯು, ‘ಬಾಲ್ಯದಲ್ಲಿ ಮಕ್ಕಳ ಅತಿಯಾದ ಟಿವಿ ವೀಕ್ಷಣೆಯು ವಯಸ್ಕ ಹಂತದಲ್ಲಿ ಏನೆಲ್ಲಾ ಬದಲಾವಣೆ ತರುತ್ತದೆ’ ಎಂಬುದನ್ನು ಬಹಿರಂಗಪಡಿಸಿದೆ.

ವರದಿ ನೀಡಿರುವ ಡಾ. ಹೆಲೇನಾ ಮ್ಯಾಕ್‌ನಲ್ಲಿ ಅವರು, ‘ವಿರಾಮದ ಸಮಯದಲ್ಲಿ 5 ರಿಂದ 15 ನೇ ವಯಸ್ಸಿನ ಮಕ್ಕಳು ಅತಿಯಾದ ಟಿ.ವಿ ನೋಡುವ ಸ್ವಭಾವ ಹೊಂದಿದ್ದರೆ ಅಂತಹ ಮಕ್ಕಳು ಮುಂದೆ ದೊಡ್ಡವರಾದ ಮೇಲೆ ಅವರಿಗೆ ಕೆಲ ಮಾನಸಿಕ ಕ್ಷೋಭೆ ಹಾಗೂ ಅಸ್ವಸ್ಥತೆಗಳಿಗೆ ಕಾರಣವಾಗುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಮಕ್ಕಳು ದೊಡ್ಡವರಾದ ಮೇಲೆ ಜೂಜಾಟ ಹಾಗೂ ಧೂಮಪಾನಕ್ಕೆ ಅಂಟಿಕೊಂಡರೆ ಅದು ಅವರ ಲೈಂಗಿಕ ಜೀವನದ ಮೇಲೆ, ಆರ್ಥಿಕ ಸ್ಥಿತಿ ಮತ್ತು ಸ್ವಯಂ ನಿಯಂತ್ರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂಬುದನ್ನು ಅವರು ತಿಳಿಸಿದ್ದಾರೆ.

ವರದಿಯು ಮಕ್ಕಳಲ್ಲಿ ಡಿಜಿಟಲ್ ಆರೋಗ್ಯದ ಮಹತ್ವವನ್ನು ಒತ್ತುಕೊಟ್ಟು ಹೇಳಿದೆ.

Video: ಸಫಾರಿ ವೇಳೆ ನಟಿ ರವೀನಾ ಟಂಡನ್ಗೆ ಅತಿ ಸನಿಹ ಬಂದ ಹುಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.