ಕರಾಚಿ: ಪಾಕಿಸ್ತಾನದ ಅತಿದೊಡ್ಡ ನಗರ ಕರಾಚಿಯಲ್ಲಿ ಮಾರುಕಟ್ಟೆಗಳು, ಅಂಗಡಿಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ರಾತ್ರಿ 9 ಗಂಟೆಗೇ ಮುಚ್ಚಲು ಸೂಚಿಸಲಾಗಿದೆ. ಮದುವೆ ಮಂಟಪಗಳು ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 10.30ಕ್ಕೆ ಬಂದ್ ಮಾಡಲು ಹೇಳಲಾಗಿದೆ. ವಿದ್ಯುತ್ ಮತ್ತು ಇಂಧನ ಉಳಿಸುವ ಉದ್ದೇಶದಿಂದ ಸ್ಥಳೀಯ ಸರ್ಕಾರ ಈ ಆದೇಶ ಹೊರಡಿಸಿದೆ.

‘ನಾವು ಇಂಧನ ಕೊರತೆಯ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದೇವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ನಾವು ಜನಪ್ರಿಯವಲ್ಲದ, ಆದರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ‘ ಎಂದು ಗೃಹ ಕಾರ್ಯದರ್ಶಿ ಡಾ ಸಯೀದ್ ಅಹ್ಮದ್ ಮಂಗ್ನೆಜೊ ಹೇಳಿದರು.

ಇಂಧನ ಮತ್ತು ವಿದ್ಯುತ್ ಅಪವ್ಯಯವನ್ನು ಕಡಿಮೆ ಮಾಡುವುದು ಮಾತ್ರ ಈ ನಿರ್ಧಾರದ ಉದ್ದೇಶವಲ್ಲ. ವಿದ್ಯುತ್ ಕಡಿತ ಮತ್ತು ಲೋಡ್ ಶೆಡ್ಡಿಂಗ್‌ಗೆ ಪರಿಹಾರವನ್ನು ಕಂಡುಕೊಳ್ಳುವುದೂ ಕೂಡ ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ. ಹೀಗೆ ಮಾಡುವುದರಿಂದ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯ ನಡುವಿನ ಕೊರತೆಯನ್ನು ಕಡಿಮೆ ಮಾಡಬಹುದು ಎಂದು ಅಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.