ತಿರುವನಂತಪುರ:ತಾಲಿಬಾನ್ ಉಗ್ರರು ಸಂತೋಷ, ಸಂಭ್ರಮದಿಂದ ಭಾವುಕರಾದ ವಿಡಿಯೊವೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಆ ಗುಂಪಿನಲ್ಲಿ ಇದ್ದ ತಾಲಿಬಾನ್ ಉಗ್ರರು ಮಲಯಾಳಿ ಭಾಷಿಕರೇ ಎಂಬ ಸಂಶಯ ಮೂಡಿಸಿದೆ.

ಇಬ್ಬರು ಉಗ್ರರು ಮಲಯಾಳ ಭಾಷೆಯಲ್ಲಿ ಸಂವಹನ ನಡೆಸುತ್ತಿದ್ದಾರೆ ಎಂದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ವಿಡಿಯೊ ತುಣಕನ್ನು ಟ್ವೀಟ್ ಮಾಡಿದ್ದಾರೆ. ‘ಇಲ್ಲಿ ಕನಿಷ್ಠ ಇಬ್ಬರು ಮಲಯಾಳಿ ತಾಲಿಬಾನ್ಗಳಿರುವಂತೆ ತೋರುತ್ತದೆ. ಒಬ್ಬ ಮಲಯಾಳ ಭಾಷೆಯಲ್ಲಿ ‘ಸಂಸಾರಿಕ್ಕಟ್ಟೆ’ (ಅವರು ಮಾತನಾಡಲಿ) ಎನ್ನುತ್ತಾನೆ. ಮತ್ತೊಬ್ಬ ಆ ಮಾತು ಅರ್ಥವಾದಂತೆ ಪ್ರತಿಕ್ರಿಯಿಸುತ್ತಾನೆ’ ಎಂದು ಟ್ವೀಟ್ ಮಾಡಿದ್ದಾರೆ.

ಕೇರಳದ 100ಕ್ಕೂ ಹೆಚ್ಚು ಯುವಕರು ಕಳೆದ ಕೆಲವು ವರ್ಷಗಳಿಂದ ದೇಶ ತೊರೆದು ಐಎಸ್ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳನ್ನು ಸೇರಿರುವುದರಿಂದ, ತರೂರ್ ಅವರ ಈ ಟ್ವೀಟ್ ಗಮನ ಸೆಳೆದಿದೆ.

ಐಎಸ್ ಸಂಪರ್ಕದ ಆರೋಪದ ಮೇಲೆ ಕೇರಳದ ಇಬ್ಬರು ಮಹಿಳೆಯರನ್ನು ಎನ್ಐಎಮಂಗಳವಾರ ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.