ಪೆರು ದೇಶದಲ್ಲಿ ಸಾವಿರಾರು ವರ್ಷಗಳ ಆಂಡಿಯನ್ ಮೋಕ್ ಸಂಸ್ಕೃತಿಯು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಶಾಶ್ವತವಾದ ಹೆಜ್ಜೆಗಳನ್ನು ಉಳಿಸಿಹೋಗಿದೆ. ಇಂಕಾ ಸಾಮ್ರಾಜ್ಯದ ಅವನತಿಯೊಂದಿಗೆ ಈ ನಾಗರಿಕತೆಯೂ ನೇಪಥ್ಯ ಸೇರಿತು. ವಿಶ್ವದ ಈ ಪ್ರಖ್ಯಾತವಾದ ಕಾಲಘಟ್ಟದಲ್ಲಿ ಪಿಂಗಾಣಿ ಕಲೆಯೂ ಮಹತ್ವಪೂರ್ಣವಾಗಿ ಬೆಳೆದು ಬಂದಿದೆ.

ವಿವಿಧ ವಿಷಯಗಳ ದೃಶ್ಯಗಳನ್ನು ಪ್ರದರ್ಶಿಸುವ ಈ ಕಲೆ ಕ್ರಿಸ್ತಶಕ ನೂರರಿಂದ ಎಂಟುನೂರರ ತನಕ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಧರ್ಮ, ಸಂಸ್ಕೃತಿ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಈ ಪಿಂಗಾಣಿಗಳು ಒಂದು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇನ್ನೂ ಉಳಿದುಕೊಂಡಿರುವುದು ಅದರ ಅಗಾಧ ವ್ಯಾಪ್ತಿಯ ಬಗೆಗೆ ಕಲ್ಪನೆ ಮೂಡಿಸುತ್ತದೆ. ಇದರಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಐನೂರರಷ್ಟು ಪಿಂಗಾಣಿಗಳಿವೆ. ನೀರು ಮತ್ತಿತರ ಪಾನೀಯಗಳನ್ನು ಸೇವಿಸಲು ಬಳಕೆಯಾಗುತ್ತಿದ್ದ ಟೊಳ್ಳಾದ ಎಲ್ಲ ಪಿಂಗಾಣಿಗಳಲ್ಲೂ ಲೈಂಗಿಕ ದೃಶ್ಯಗಳ ರೋಚಕ ಚಿತ್ರಣವಿದೆ. ಜೊತೆಗೆ, ಆ ಕಾಲದ ಲೈಂಗಿಕ ರೀತಿ, ನೀತಿಗಳ ಒಂದು ಸ್ಪಷ್ಟ ಚಿತ್ರಣಕ್ಕೂ ಇವು ಗಮನಾರ್ಹ ಆಧಾರಗಳಾಗಿವೆ.

ಈ ಪಿಂಗಾಣಿಗಳು ಹಸ್ತಮೈಥುನ, ಗುದ ಸಂಭೋಗ, ಮುಖಮೈಥುನ, ಚುಂಬನ, ಮೃಗಮೈಥುನದಂತಹ ಶೃಂಗಾರ ದೃಶ್ಯಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ನಿರೂಪಿಸಿವೆ. ಸಲಿಂಗ ರತಿಯ ಚಿತ್ರಣಗಳು ಈ ಪಿಂಗಾಣಿಗಳಲ್ಲಿವೆ. ಇಂಕಾ ಸಾಮ್ರಾಜ್ಯದಲ್ಲಿ ಮದುವೆಗೆ ಮುಂಚೆ ಯುವತಿಯು ಸಂಭೋಗದಲ್ಲಿ ಭಾಗವಹಿಸುವುದು, ಅವಿವಾಹಿತೆ ಗರ್ಭಿಣಿಯಾಗುವುದು ಶಿಕ್ಷಾರ್ಹ ಅಪರಾಧವೆನಿಸಿತ್ತು. ಅದರಲ್ಲೂ ಕ್ರೈಸ್ತ ಪಾದ್ರಿಗಳು ಸ್ತ್ರೀಯರಿಗೆ ಸಂಭೋಗದಲ್ಲಿ ಸುಖ ಹೊಂದುವ ಹಕ್ಕನ್ನು ನಿರಾಕರಿಸಿ ಅದೇನಿದ್ದರೂ ಪುರುಷನ ಹಕ್ಕು ಎಂಬ ಕಾನೂನು ಮಾಡಿದ್ದರು.

ಸ್ತ್ರೀಯರು ರತಿಕೇಳಿಯ ಬಗ್ಗೆ ಮಾತನಾಡುವುದು ಕಾನೂನುಬಾಹಿರವಾಗಿತ್ತು. ವಿವಾಹಪೂರ್ವ ಲೈಂಗಿಕ ಸುಖ ಪಡೆದ ಹೆಣ್ಣಿಗೆ ನೂರು ಚಡಿಯೇಟುಗಳ ಶಿಕ್ಷೆ ವಿಧಿಸುವ ಕಾನೂನು ಕ್ರಿಸ್ತಶಕ 1569ರ ತನಕವೂ ಪೆರು ದೇಶದಲ್ಲಿತ್ತು. ಸಲಿಂಗಕಾಮಕ್ಕೆ ಸಜೀವ ದಹನದ ಶಿಕ್ಷೆ ಶತಮಾನಗಳಿಂದ ಜಾರಿಯಲ್ಲಿದ್ದುದನ್ನು 1837ರಲ್ಲಿ ರದ್ದುಗೊಳಿಸಿ ಅದಕ್ಕೆ ಅವಕಾಶ ನೀಡಲಾಯಿತು.

ಈ ಕಾರಣಗಳಿಂದಾಗಿ ಪಿಂಗಾಣಿ ಕಲೆಯಲ್ಲಿಸಂಭೋಗ ದೃಶ್ಯಗಳಿಗೆ ಹೆಚ್ಚು ಮಹತ್ವ ನೀಡಿಲ್ಲ. ಗಂಡು ಹೆಣ್ಣಿನೊಂದಿಗೆ ಸಂಭೋಗಿಸುವ ಮಿಷನರಿ ಆಸನದ ಒಂದು ದೃಶ್ಯದ ಹೊರತು ಸಂಭೋಗದ ವಿವಿಧ ಆಸನಗಳ ಬಗೆಗೆ ಹೆಚ್ಚು ಕಲೆಗಳನ್ನು ಸೃಷ್ಟಿಸಿಲ್ಲ. ಆದರೆ, ಹೆಣ್ಣು ಅವಿವಾಹಿತಳಾದರೂ ಹೇಗೆ ಕಾನೂನನ್ನು ಉಲ್ಲಂಘಿಸದೆ ರತಿ ಸುಖದಲ್ಲಿ ಭಾಗಿಯಾಗಬಹುದೆಂಬುದಕ್ಕೆ ಈ ಕಲೆಯಲ್ಲಿ ಹೇರಳ ವಿವರಗಳಿವೆ.

ಇಲಿ, ನಾಯಿ, ಮಂಗ, ಕಪ್ಪೆ ಮುಂತಾದ ಜೀವಿಗಳ ಸಂಭೋಗದ ವಿಧಾನಗಳೂ ಈ ಪಿಂಗಾಣಿಗಳಲ್ಲಿ ಮೂಡಿವೆ. ಪುರುಷರಿಗೆ ಭೌತಿಕ ಸಂತೋಷ ನೀಡುವ ಹಸ್ತಮೈಥುನದ ಮೂಲಕ ಸಂಸಾರ ನಿಯಂತ್ರಣದ ಸಂದೇಶವನ್ನೂ ಇವು ನೀಡಿವೆ. ಈ ಪಿಂಗಾಣಿ ಕಲೆಯನ್ನು ಅಧ್ಯಯನ ಮಾಡಿದ ನಾರ್ಥ್‌ವೆಸ್ಟನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮೇರಿ ವಿಸ್ಮಂಟೇಲ್ ಇವು ವಿಶ್ವದ ಅತಿದೊಡ್ಡ ಮಟ್ಟದ ಲೈಂಗಿಕ ಪದ್ಧತಿಯ ಸ್ಪಷ್ಟ ಚಿತ್ರಣ ನೀಡುತ್ತವೆ ಎಂದಿದ್ದಾರೆ. ಒಂದು ಪುರುಷ ಅಸ್ಥಿಪಂಜರವು ಸ್ತ್ರೀ ಅಸ್ಥಿಪಂಜರದ ಜೊತೆಗೆ ಸಂಭೋಗಿಸುವ ದೃಶ್ಯವಿದೆಯಾದರೂ ಇದರಲ್ಲಿ ಪುರುಷನ ಶಿಶ್ನವು ಉದ್ರೇಕದಿಂದ ನೆಟ್ಟಗಾಗಿಲ್ಲ. ಅದು ಪಿಂಗಾಣಿ ರಚಿಸಿದವರ ಸಿದ್ಧಹಸ್ತ ಕೌಶಲಕ್ಕೂ ಸಾಕ್ಷಿಯಾಗಿದೆ ಎನ್ನುವುದು ಅವರ ವಿಶ್ಲೇಷಣೆ.

ಅನೇಕ ಪಿಂಗಾಣಿಗಳಲ್ಲಿ ನೀರು ಕುಡಿಯುವ ನಳಿಕೆಯನ್ನು ದೈತ್ಯ ಶಿಶ್ನದ ಆಕಾರದಲ್ಲಿ ಸೃಜಿಸಲಾಗಿದೆ. ಬುಡಕಟ್ಟು ಜನಾಂಗದವರು ಲೈಂಗಿಕ ಕಲ್ಪನೆಯಲ್ಲಿ ಇಷ್ಟೊಂದು ಪ್ರಬುದ್ಧರಾಗಿರುವುದನ್ನು ಸಂಶೋಧಕರು ಹೊಗಳಿದ್ದಾರೆ. ಇವುಗಳು ಲೈಂಗಿಕ ಶಿಕ್ಷಣ ನೀಡಲು ಪ್ರಮುಖ ಆಕರವಾಗಬಲ್ಲುವು ಎಂದಿದ್ದಾರೆ ಸಮಾಜ ವಿಜ್ಞಾನಿಗಳು.

ಈ ಪಿಂಗಾಣಿಗಳಲ್ಲಿ ಬಹಳಷ್ಟು ಕಳ್ಳ ಸಾಗಾಣಿಕೆಯಾಗಿ ವಿದೇಶಗಳಲ್ಲಿ ಭಾರೀ ಬೆಲೆಗೂ ಮಾರಾಟವಾಗಿರಬಹುದು, ಮ್ಯೂಸಿಯಂಗಳಲ್ಲಿ ಸೇರಿರಬಹುದೆಂದು ಕಲ್ಪಿಸಲಾಗಿದೆ.

ಪುರಾತತ್ವ ಶಾಸ್ತ್ರಜ್ಞರು ಎಚ್ಚೆತ್ತು ಸಂಗ್ರಹಿಸಿದ ಐದುನೂರು ಪಿಂಗಾಣಿಗಳು ರಫೆಲ್ ಲಾರ್ಕೊ ಹೆರೆರಾ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿದ್ದು ಅತಿದೊಡ್ಡ ಪ್ರವಾಸಿ ಆಕರ್ಷಣೆ ಎನಿಸಿವೆ. ಕೆಂಪು ಮತ್ತು ಬಿಳಿವರ್ಣದಲ್ಲಿ ಶೋಭಿಸುವ ಅವು ಎರಡು ಸಾವಿರ ವರ್ಷಗಳಿಂದ ಆಳಿ ಅಳಿದುಹೋದ ಇಂಕಾ ಸಾಮ್ರಾಜ್ಯದ ನೀತಿ, ನಿಯಮಗಳ ಅಧ್ಯಯನಕ್ಕೂ ಆಧಾರವೆನಿಸುತ್ತವೆ.ಹಾಗೆಯೇ ಒಂದು ಕಾಲದ ಲೈಂಗಿಕ ಸ್ಥಿತಿಗತಿಯ ದಾಖಲೆಯೂ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.