ಪುಟ್ಟಿಗೆ ತುಂಬಾ ಇಷ್ಟವು ಎಂದು
ತಂದರು ಚಂದದ ನಾಯಿಮರಿ.
ಮುಷ್ಠಿಯ ಒಳಗೆ ಸ್ವರ್ಗವೇ ಸಿಕ್ಕಿತು!
ಪುಟ್ಟಿಯು ಚೆಲ್ಲಿದಳು ನಗೆಯನ್ನು,
‘ನನ್ನಯ ಮುದ್ದಿನ ನೀನೇ ಚಿನ್ನು’
ಇಟ್ಟೇ ಬಿಟ್ಟಳು ಹೆಸರನ್ನು.
ಜೋಗುಳ ಹಾಡುತ ಮಲಗಿಸಿ ತಟ್ಟಿ
ನೆಟಿಕೆಯ ಮುರಿಯುತ ತೆಗೆದಳು ದೃಷ್ಟಿ!
ಕತ್ತಿಗೆ ಗೆಜ್ಜೆ, ಮೆತ್ತನೆ ಹಾಸಿಗೆ,
ಮುತ್ತಿನ ಹಾರವು ಪ್ರತಿ ಗಳಿಗೆ
ಆಟವೂ ಊಟವೂ ನೋಟವೂ ಕೂಟವೂ
ಸಾಗಿತು ಪುಟ್ಟಿಗೆ ಮರಿ ಜೊತೆಗೆ.

ತಿಂಗಳು ಕಳೆಯಿತು ವೈದ್ಯರು ಬಂದರು
‘ನಾಯಿಯ ಮರಿಯನು ತನ್ನಿರಿ’ ಎಂದರು
ಪುಟ್ಟಿಗೆ ಹೆದರಿಕೆ ಕಣ್ಣಲಿ ನೀರು
‘ಕೊಡುವುದೇ ಇಲ್ಲ’ – ಅತ್ತಳು ಜೋರು!
ಅಪ್ಪನೂ ಅಮ್ಮನೂ ಕ್ಯಾಡ್ಬರಿ ಕೊಟ್ಟರೂ
ಮುಟ್ಟದೆ ದೂರಕೆ ಓಡಿದಳು.
ಗಪ್ಪನೆ ಅಪ್ಪಿ ತೋಳಲಿ ಚಿನ್ನುವ,
ಮುಟ್ಟಲು ಬಿಡದೆ ಚೀರುವಳು.
ಗಂಟೆಯೂ ಹೀಗೇ ಕಳೆಯಲು
ಅಪ್ಪನು ಪುಟ್ಟಿಗೆ ಹೇಳಿದ ಕಥೆಯೊಂದ
‘ಚುಚ್ಚದೆ ಔಷಧಿ ನಾಯಿಯು ಸತ್ತಿತು’ ಅವನೆಂದ.

ಅಯ್ಯೋ ಎಂದಳು ಪುಟ್ಟಿ ಅರಳಿಸಿ ಕಣ್ಣು.
‘ಸಾಯಲೇ ಬಾರದು ನನ್ನೀ ಚಿನ್ನು’
ಎನ್ನುತ ಬಿಟ್ಟಳು ಮರಿಯನ್ನು.
ಅಬ್ಬಾ..! ಎನ್ನುತ ನಿಟ್ಟುಸಿರಿಟ್ಟು
ವೈದ್ಯರು ಕೊಟ್ಟರು ಇಂಜೆಕ್ಷನ್ನು.
ಪುಟ್ಟಿಗೆ ಅಳುವೂ ನಗುವೂ ಒಟ್ಟಿಗೆ
ಮೆತ್ತಗೆ ಮುತ್ತನು ಕೊಟ್ಟಳು ಮರಿಗೆ
‘ಅಯ್ಯೋ ಅಬ್ಬೂ ಆಯಿತೇ ನಿನಗೆ’
ಎನ್ನುತ ಮೆಲ್ಲಗೆ ಸವರಿದಳು.
‘ಡಾಕ್ಟರ್ ಮಾಮಾ ಥ್ಯಾಂಕ್ಯೂ’
ಎನ್ನುತ ಚಿನ್ನುವ ತಬ್ಬಿದಳು!!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಪುಟ್ಟಿಗೆ ತುಂಬಾ ಇಷ್ಟವು ಎಂದು
ತಂದರು ಚಂದದ ನಾಯಿಮರಿ.
ಮುಷ್ಠಿಯ ಒಳಗೆ ಸ್ವರ್ಗವೇ ಸಿಕ್ಕಿತು!
ಪುಟ್ಟಿಯು ಚೆಲ್ಲಿದಳು ನಗೆಯನ್ನು,
‘ನನ್ನಯ ಮುದ್ದಿನ ನೀನೇ ಚಿನ್ನು’
ಇಟ್ಟೇ ಬಿಟ್ಟಳು ಹೆಸರನ್ನು.
ಜೋಗುಳ ಹಾಡುತ ಮಲಗಿಸಿ ತಟ್ಟಿ
ನೆಟಿಕೆಯ ಮುರಿಯುತ ತೆಗೆದಳು ದೃಷ್ಟಿ!
ಕತ್ತಿಗೆ ಗೆಜ್ಜೆ, ಮೆತ್ತನೆ ಹಾಸಿಗೆ,
ಮುತ್ತಿನ ಹಾರವು ಪ್ರತಿ ಗಳಿಗೆ
ಆಟವೂ ಊಟವೂ ನೋಟವೂ ಕೂಟವೂ
ಸಾಗಿತು ಪುಟ್ಟಿಗೆ ಮರಿ ಜೊತೆಗೆ.

ತಿಂಗಳು ಕಳೆಯಿತು ವೈದ್ಯರು ಬಂದರು
‘ನಾಯಿಯ ಮರಿಯನು ತನ್ನಿರಿ’ ಎಂದರು
ಪುಟ್ಟಿಗೆ ಹೆದರಿಕೆ ಕಣ್ಣಲಿ ನೀರು
‘ಕೊಡುವುದೇ ಇಲ್ಲ’ – ಅತ್ತಳು ಜೋರು!
ಅಪ್ಪನೂ ಅಮ್ಮನೂ ಕ್ಯಾಡ್ಬರಿ ಕೊಟ್ಟರೂ
ಮುಟ್ಟದೆ ದೂರಕೆ ಓಡಿದಳು.
ಗಪ್ಪನೆ ಅಪ್ಪಿ ತೋಳಲಿ ಚಿನ್ನುವ,
ಮುಟ್ಟಲು ಬಿಡದೆ ಚೀರುವಳು.
ಗಂಟೆಯೂ ಹೀಗೇ ಕಳೆಯಲು
ಅಪ್ಪನು ಪುಟ್ಟಿಗೆ ಹೇಳಿದ ಕಥೆಯೊಂದ
‘ಚುಚ್ಚದೆ ಔಷಧಿ ನಾಯಿಯು ಸತ್ತಿತು’ ಅವನೆಂದ.

ಅಯ್ಯೋ ಎಂದಳು ಪುಟ್ಟಿ ಅರಳಿಸಿ ಕಣ್ಣು.
‘ಸಾಯಲೇ ಬಾರದು ನನ್ನೀ ಚಿನ್ನು’
ಎನ್ನುತ ಬಿಟ್ಟಳು ಮರಿಯನ್ನು.
ಅಬ್ಬಾ..! ಎನ್ನುತ ನಿಟ್ಟುಸಿರಿಟ್ಟು
ವೈದ್ಯರು ಕೊಟ್ಟರು ಇಂಜೆಕ್ಷನ್ನು.
ಪುಟ್ಟಿಗೆ ಅಳುವೂ ನಗುವೂ ಒಟ್ಟಿಗೆ
ಮೆತ್ತಗೆ ಮುತ್ತನು ಕೊಟ್ಟಳು ಮರಿಗೆ
‘ಅಯ್ಯೋ ಅಬ್ಬೂ ಆಯಿತೇ ನಿನಗೆ’
ಎನ್ನುತ ಮೆಲ್ಲಗೆ ಸವರಿದಳು.
‘ಡಾಕ್ಟರ್ ಮಾಮಾ ಥ್ಯಾಂಕ್ಯೂ’
ಎನ್ನುತ ಚಿನ್ನುವ ತಬ್ಬಿದಳು!!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.