ದ ಕ್ಷಿಣ ಕನ್ನಡ ಜಿಲ್ಲೆಯ ಕ್ಷಿತಿಜ ನೇಸರಧಾಮ ಹೆಚ್ಚು ಜನಪ್ರಿಯಗೊಳ್ಳದ ರಮಣೀಯ ತಾಣ. ಇದು ಬೈಂದೂರು–ಭಟ್ಕಳ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿದೆ. ಬೈಂದೂರಿನಿಂದ ೨ ಕಿಮೀ ಮುಂದೆ ಹೋಗಿ ಎಡಕ್ಕೆ ತಿರುಗಿ, ಅಲ್ಲಿಂದ ಸುಮಾರು ಎರಡು ಕಿಮೀ. ಒಳಕ್ಕೆ ಹೋಗಬೇಕು. ಒಳಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಅಲ್ಲಲ್ಲಿ ಕೊರಕಲು, ಕಲ್ಲುಗಳಿವೆ. ಮಳೆಬಂದು ಮಣ್ಣು ಕೊಚ್ಚಿ ಹೋದ ರಸ್ತೆಯಲ್ಲಿ ನಿಧಾನವಾಗಿ ಸುಮಾರು ೧ ಕಿ.ಮೀ. ದಾರಿ ಸವೆಸಿದ ಮೇಲೆ ಒಂದು ಪುಟ್ಟ ಕಮಾನು ಸಿಗುತ್ತದೆ. ಅಲ್ಲಿ ಗುಂಪು ಗುಂಪಾಗಿ ಹರಡಿಕೊಂಡಿರುವ ಗಿಡಗಳ ಮಧ್ಯೆ ಕುಟೀರಗಳು ಕಾಣಿಸುತ್ತವೆ. ಅದುವೇ ‘ಕ್ಷಿತಿಜ ನೇಸರಧಾಮ’.

ಈ ನೇಸರಧಾಮದಲ್ಲಿ ಅರಣ್ಯ ಇಲಾಖೆ ಕುಟೀರಗಳನ್ನು ನಿರ್ಮಿಸಿದೆ. ಕುಟೀರದ ಮುಂದೆ ಕುಳಿತು ಸಮುದ್ರದಲ್ಲಿ ಸೂರ್ಯ ಲೀನವಾಗುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಹಗಲೆಲ್ಲ ಪ್ರಖರ ಜ್ವಾಲೆಯಿಂದ ಇರುವ ಸೂರ್ಯ ಸಂಜೆಯಾಗುತ್ತಿದ್ದಂತೆಯೇ ತನ್ನ ಪ್ರಖರತೆಯನ್ನು ಕಡಿಮೆ ಮಾಡಿಕೊಳ್ಳುತ್ತ, ತನ್ನ ಬಣ್ಣವನ್ನು ಹೊಂಬಣ್ಣಕ್ಕೆ ಬದಲಾಯಿಸಿಕೊಳ್ಳುತ್ತ, ನೋಡುಗರ ಮನ ಸೂರೆಗೊಳ್ಳುತ್ತಾನೆ.

ಕತ್ತಲಾಗುತ್ತಿದ್ದಂತೆ ಬೆಳದಿಂಗಳ ಬೆಳಕಿನಲ್ಲಿ ಸುತ್ತಲಿನ ಕತ್ತಲೆಯಲ್ಲಿ ಕಾಣುವ ಗಿಡಮರಗಳಿಂದ ಸೂಸುವ ತಂಗಾಳಿ, ಆಕಾಶದಲ್ಲಿ ನಕ್ಷತ್ರಗಳ ನಡುವೆ ಚಂದ್ರನ ನಗು, ಅತ್ತ ಸಮುದ್ರದ ಅಲೆಗಳ ನಿನಾದ– ಸಮಯ ಸರಿಯುವುದೇ ತಿಳಿಯುವುದಿಲ್ಲ. ರಾತ್ರಿ ಕುಟೀರದಲ್ಲೇ ಊಟಕ್ಕೆ ವ್ಯವಸ್ಥೆಯಿದೆ.

ಬೆಳಗಿನ ಸೂರ್ಯೋದಯದ ಸೊಬಗು ಮತ್ತೊಂದು ಅದ್ಭುತ. ಕಣ್ಣು ಹಾಯಿಸಿದಲ್ಲೆಲ್ಲ ಹಚ್ಚ ಹಸಿರು. ವಿಶಾಲವಾದ ಮೈದಾನದಲ್ಲಿ ಮೈಚಾಚಿಕೊಂಡಿರುವ ಬೆಟ್ಟಗಳ ಸಾಲು. ಕ್ಷಣ ಕ್ಷಣಕ್ಕೂ ಬೆಟ್ಟಗಳ ಹಿಂಬದಿಯಿಂದ ಹೊರಬರುವ ಬಣ್ಣಗಳನ್ನು ನೋಡುವುದೇ ಒಂದು ಅವಿಸ್ಮರಣೀಯ ಅನುಭವ.

ಸೂರ್ಯನು ಬೆಳಗಿನ ಶುಭೋದಯ ಸಾರಲು ಕೆಂಬಣ್ಣದಿಂದ ನಿಧಾನವಾಗಿ ಮೇಲೆ ಬರುತ್ತಾನೆ. ಆ ಕ್ಷಣದ ಹೊಂಬಣ್ಣದ ಕಿರಣಗಳು ನಿಸರ್ಗದ ಮೇಲೆ ಬಿದ್ದು ಅಲ್ಲಿನ ಪರಿಸರವೆಲ್ಲ ಕಿತ್ತಳೆ ಬಣ್ಣದಿಂದ ಆವೃತವಾಗುತ್ತದೆ. ಬೆಟ್ಟ ಗುಡ್ಡಗಳ ಮೇಲೆ ಮಂಜಿನ ತೆಳು ಹೊದಿಕೆ, ಹಕ್ಕಿಗಳ ಚಿಲಿಪಿಲಿ ನಾದ. ಆ ಕ್ಷಣ ಅಲ್ಲೊಂದು ಗಂಧರ್ವಲೋಕ ಅನಾವರಣಗೊಳ್ಳುತ್ತದೆ.

ಕುಟೀರದ ಮತ್ತೊಂದು ತುದಿಯಿಂದ ಕಾಣುವ ಕುಸುಮನದಿಯು (ಬೈಂದೂರು ಹೊಳೆ) ವೈಯಾರದಿಂದ ಬಳಕುತ್ತ, ಬೆಟ್ಟಗುಡ್ಡ ಕಾಡುಮೇಡುಗಳ ಮಧ್ಯೆ ಹರಿದು ಬಂದು ಸಮುದ್ರವನ್ನು ಅಪ್ಪಿಕೊಂಡು ಚುಂಬಿಸುವ ಹಾಗೆ ನಮಗೆ ಭಾಸವಾಗುತ್ತದೆ. ‘ಕ್ಷಿತಿಜ ನೇಸರಧಾಮ’ವನ್ನು ಹೊರತುಪಡಿಸಿದರೆ, ಕರ್ನಾಟಕದ ಯಾವ ಭಾಗದಲ್ಲಿಯೂ ಒಂದೇ ಕಡೆ ಕುಳಿತು, ಸೂರ್ಯೋದಯ, ಸೂರ್ಯಾಸ್ತ ಹಾಗೂ ನದಿ–ಸಮುದ್ರಗಳ ಸಂಗಮದ ದೃಶ್ಯಗಳನ್ನು ವೀಕ್ಷಿಸುವ ಅವಕಾಶವಿಲ್ಲ.

ಈ ನೇಸರಧಾಮಕ್ಕೆ ಹೋಗಬೇಕಾದರೆ ಕುಂದಾಪುರ ಡಿಎಫ್ಒ ಕಚೆೇರಿ, ಬೈಂದೂರು ಅರ್.ಎಫ್.ಒ. ಕಚೇರಿ ಅಥವಾ ಬೆಂಗಳೂರಿನ ಅರಣ್ಯ ಭವನದಲ್ಲಿ ಮುಂಗಡ ಬುಕ್ ಮಾಡಿ ಹೋಗಬಹುದು. ಅಲ್ಲಿ ಊಟವನ್ನು ನಮಗೆ ಬೇಕಾದ ರೀತಿಯಲ್ಲಿ (ಸಸ್ಯಾಹಾರ ಅಥವಾ ಮಾಂಸಾಹಾರ) ಮಾಡಿಕೊಡುವ ಸಹಾಯಕರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.