ಕಿಲಿಗ್ ಕಾದಂಬರಿಯು ನಗರ ಕೇಂದ್ರಿತ ಬದುಕನ್ನು ಅನಾವರಣಗೊಳಿಸುತ್ತದೆ. ಮೆಟ್ರೊ ನಿಲ್ದಾಣಗಳು, ಪ್ರಯಾಣಗಳೆಲ್ಲವೂ ಇಲ್ಲಿ ಚಿತ್ರಣಗಳಾಗಿವೆ. ಮೆಟ್ರೊ ಹಳಿಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡವನ ಕಥೆಯ ಬಗ್ಗೆ ಲೋಕ ಯೋಚಿಸುವಾಗ, ಆತ್ಮಹತ್ಯೆಯನ್ನು ಕಣ್ಣಾರೆ ಕಂಡ ಮೆಟ್ರೊ ಚಾಲಕನ ಮನಸ್ಸಿನ ಮೇಲೆ ಎಂಥ ಗಾಢ ಪರಿಣಾಮ ಬೀರಬಲ್ಲದು ಎಂಬುದನ್ನು ಕಾದಂಬರಿಕಾರ ಸಣ್ಣ ಎಳೆಯಲ್ಲಿ ಹೇಳಿದ್ದಾರೆ.

ಒಂದೇ ಗುಟುಕಿನಲ್ಲಿ ಓದಿ ಮುಗಿಸಬಹುದಾದ ಕಾದಂಬರಿ ಇದಾಗಿದ್ದು, ಪಾತ್ರಗಳೆಲ್ಲವೂ ನಮ್ಮ ನಡುವೆಯೇ ಇರಬಹುದಾದ ಚದುರಿದ ಬಿಂಬದಂತೆ ಭಾಸವಾಗುತ್ತದೆ.

ಕಿಲಿಗ್ ಎನ್ನುವ ಕಾದಂಬರಿಯ ಹೆಸರು ಕುತೂಹಲ ಹುಟ್ಟಿಸುತ್ತಾದರೂ, ಕಾದಂಬರಿಯ ಹೂರಣ ಅಷ್ಟೇನೂ ರುಚಿಸುವುದಿಲ್ಲ. ಒಂದು ಕಾದಂಬರಿಯ ಕೇಂದ್ರವಸ್ತು ಯಾವುದು ಎಂಬ ಪ್ರಶ್ನೆಗೆ ಸರಿಯಾದ ಉತ್ತರವೇನೂ ಸಿಗುವುದಿಲ್ಲ.

ಮನುಷ್ಯ ಲೋಕದ ಸಹಜ ವಾಂಛೆಗಳಾದ ಪ್ರೀತಿ, ಪ್ರೇಮ, ಕಾಮಗಳೆಲ್ಲವೂ ಈ ಕಾದಂಬರಿಯ ಚೌಕಟ್ಟಾಗಿದ್ದು, ಇವುಗಳ ಸುತ್ತ ಸುತ್ತುವ ಪಾತ್ರಗಳು ಗಟ್ಟಿತನದಿಂದ ಕೂಡಿಲ್ಲ. ಓದುಗರನ್ನು ಹಿಡಿದಿಡುವ ಭಾಷೆ ಕಾದಂಬರಿಕಾರರಿಗೆ ದಕ್ಕಿರುವುದರಿಂದ ಇನ್ನಷ್ಟು ಪ್ರಯೋಗಗಳನ್ನು ಮಾಡಲಡ್ಡಿಯಿಲ್ಲ.

ಕೃತಿ: ಕಿಲಿಗ್

ಕಾದಂಬರಿಕಾರ: ಜಯರಾಮಚಾರಿ

ಪ್ರಕಾಶನ: ಸಸಿ

ಪುಟಗಳು 120

ದರ: ₹ 145

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.