ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎ.ವಿ. ನಾವಡ ಅವರ ಈ ಸಂಶೋಧನಾತ್ಮಕ ಕೃತಿ, ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಉತ್ತಮ ಮಾರ್ಗಸೂಚಿ. ಶೋಧಬಿಂಬ, ಭಾವಬಿಂಬ ಹಾಗೂ ಕೃತಿಬಿಂಬ ಎಂಬ ಮೂರು ಭಾಗಗಳಿದ್ದು, 41 ಲೇಖನಗಳು ಸಾಹಿತ್ಯಾಸಕ್ತರಿಗೆ ರಸಗವಳ. ತಮ್ಮ ಸಂಶೋಧನೆಗೆ ದಕ್ಕಿದ ಫಲಿತಾಂಶಗಳಿಗೆ ಅಭಿಪ್ರಾಯವನ್ನೂ ದಾಖಲಿಸಿ ಓದುಗರ ಮುಂದಿಟ್ಟಿದ್ದಾರೆ. ಬಿಡಿಬಿಡಿಯಾಗಿದ್ದ ತಮ್ಮದೇ ಲೇಖನಗಳಿಗೆ ಪುಸ್ತಕದ ರೂಪ ಕೊಟ್ಟಿದ್ದಾರೆ.

ಮೊದಲ ಭಾಗದಲ್ಲಿ ಸಂಶೋಧನ ಲೇಖಕ, ಲೇಖನಗಳ ಪರಿಚಯವಿದೆ. ಎರಡನೇ ಭಾಗದಲ್ಲಿ 9 ಮಹನೀಯರ ವ್ಯಕ್ತಿ ಪರಿಚಯವಿದೆ. ಮೂರನೇ ಭಾಗದಲ್ಲಿ ಪುಸ್ತಕಗಳಿಗೆ ಬರೆದ ಮುನ್ನುಡಿಗಳಿದ್ದು, ಲೇಖಕರ ತೆರೆದ ಮನಸಿನ ಪ್ರತಿಬಿಂಬದಂತಿದೆ.

ಕ್ರೈಸ್ತ ಧರ್ಮಪ್ರಚಾರಕ್ಕೆಂದು ಜರ್ಮನಿಯಿಂದ ಬಂದ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಅವರು ಕನ್ನಡ ಕಲಿತು, ಕನ್ನಡ ತಪಸ್ವಿಯಾಗಿ, ಕನ್ನಡದ ಸೇವೆ ವೇಳೆ ಎದುರಿಸಿದ ಸಂಕಷ್ಟಗಳು, ಮುಂದೆ ನಿಘಂಟು ರಚಿಸಿರುವ ಘಟನೆಗಳು ಆಧಾರಸಹಿತ ದಾಖಲಾಗಿವೆ. ಕಿಟೆಲ್ರ ಗ್ರಂಥಗಳ ಆಶಯಗಳನ್ನು ಸಕಾರಣಗಳಿಂದ ವಿವರಿಸಿದ್ದು, ಲೇಖಕರ ಸಂಶೋಧನೆಯ ಆಳಕ್ಕೆ ಕನ್ನಡಿ ಹಿಡಿದಂತಿದೆ. ಕನ್ನಡಕ್ಕೆ ಕಿಟೆಲರ ಕೊಡುಗೆಯನ್ನು ವಿಭಿನ್ನರೂಪದಲ್ಲಿ ಓದುಗನ ಕೈಗಿಟ್ಟಿರುವುದು ಕೃತಿಯ ವಿಶೇಷ.

ದಾಸ ಸಾಹಿತ್ಯ, ವಚನ ಸಾಹಿತ್ಯ, ಜಾನಪದ ಸಾಹಿತ್ಯ, ಕಾದಂಬರಿ, ಕೀರ್ತನೆ, ಮಹಾಕಾವ್ಯ, ವ್ಯಾಕರಣ, ಅನುವಾದ, ವಿಮರ್ಶೆ–ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಪ್ರಕಾರಗಳ ಹದವಾದ ಹೂರಣವಿದೆ. ವ್ಯಕ್ತಿಚಿತ್ರ, ಸಂಶೋಧನೆ, ವ್ಯಾಖ್ಯಾನಗಳ ಮಿಳಿತವೂ ಇದೆ.

ಒಂದು ವಿಷಯವನ್ನು ಚರ್ಚಿಸುವಾಗ ಅವುಗಳಿಗೆ ಸಂಬಂಧಿಸಿದ ವಿದ್ವಾಂಸರ ಅಭಿಪ್ರಾಯ, ಚರ್ಚೆ, ಟಿಪ್ಪಣಿಗಳನ್ನು ಪುಸ್ತಕದಲ್ಲಿ ಕಾಣಬಹುದು. ಹಳೆಯ ಪದ ಪ್ರಯೋಗಗಳು ಪುಸ್ತಕವನ್ನು ಮತ್ತಷ್ಟು ಸಮೃದ್ಧಗೊಳಿಸಿದೆ. ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಲು ಲೇಖಕರು ವ್ಯಕ್ತಪಡಿಸುವ ಕಾಳಜಿ, ಉತ್ಸಾಹ, ಕಳಕಳಿ ಸಾಹಿತ್ಯ ಕೃಷಿಗೆ ದಿಕ್ಸೂಚಿಯಂತಿದೆ. ಕನ್ನಡ ಸಾಹಿತ್ಯ ಸಂಶೋಧಕರಿಗೆ ಈ ಕೃತಿ ಕೈಪಿಡಿಯಾಗಬಲ್ಲದು.

ನೋಟಕ್ಕೆ ದಕ್ಕಿದ ಲೋಕ

ಲೇ: ಪ್ರೊ. ಎ.ವಿ. ನಾವಡ

ಪ್ರ: ರೂಪ

ಸಂ: 9342274331

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.