ಅಹಮದಾಬಾದ್: ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ ಸ್ಮೃತಿ ಮಂದಾನ ಅವರ ಶತಕದ ಬಲದಿಂದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಯನ್ನು ಗೆದ್ದುಕೊಂಡಿತು.

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್ಗಳಿಂದ ಜಯಿಸಿತು. ಇದರೊಂದಿಗೆ ಸರಣಿಯನ್ನು 2–1ರಿಂದ ತನ್ನದಾಗಿಸಿಕೊಂಡಿತು.

ಕಳೆದ ಕೆಲವು ಪಂದ್ಯಗಳಿಂದ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದ ಸ್ಮೃತಿ ಈ ಪಂದ್ಯದಲ್ಲಿ ಲಯ ಕಂಡುಕೊಂಡರು. 122 ಎಸೆತಗಳಲ್ಲಿ 100 ರನ್ ಗಳಿಸಿದರು. ಅದರಲ್ಲಿ 10 ಬೌಂಡರಿಗಳಿದ್ದವು. ಏಕದಿನ ಕ್ರಿಕೆಟ್ನಲ್ಲಿ ಸ್ಮೃತಿ ಗಳಿಸಿದ 8ನೇ ಶತಕ ಇದಾಗಿದೆ. ನಾಯಕಿ ಹರ್ಮನ್ಪ್ರೀತ್ ಕೌರ್ (59; 63ಎ, 4X6) ಕೂಡ ಅರ್ಧಶತಕದ ಕಾಣಿಕೆ ನೀಡಿದರು. ಅವರು ಸ್ಮೃತಿ ಜೊತೆಗೂಡಿ 117 ರನ್ ಸೇರಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಮಧ್ಯಮ ಕ್ರಮಾಂಕದ ಬ್ಯಾಟರ್ ಬ್ರೂಕ್ ಹ್ಯಾಲಿಡೇ (86; 96ಎ, 4X9, 6X3) ಅವರ ಆಟದ ಬಲದಿಂದ 49.5 ಓವರ್ಗಳಲ್ಲಿ 232 ರನ್ ಗಳಿಸಿತು. ಇದಕ್ಕುತ್ತರವಾಗಿ ಆತಿಥೇಯ ತಂಡವು 44.2 ಓವರ್ಗಳಲ್ಲಿ 4 ವಿಕೆಟ್ಗಳಿಗೆ 236 ರನ್ ಗಳಿಸಿತು.

ಸರಣಿಯ ಎರಡನೇ ಪಂದ್ಯದಲ್ಲಿ ಹರ್ಮನ್ಪ್ರೀತ್ ಬಳಗವು ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಬೌಲರ್ಗಳು ಭಾರತ ತಂಡಕ್ಕೆ ಆರಂಭದಲ್ಲಿಯೇ ಯಶಸ್ಸು ತಂದಕೊಟ್ಟರು. ಅದರಲ್ಲೂ ಪ್ರಿಯಾ ಮಿಶ್ರಾ (41ಕ್ಕೆ2) ಮತ್ತು ದೀಪ್ತಿ ಶರ್ಮಾ (39ಕ್ಕೆ3) ಅವರು ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 49.5 ಓವರ್ಗಳಲ್ಲಿ 232 (ಜಾರ್ಜಿಯಾ ಪಿಮರ್ 39, ಬ್ರೂಕ್ ಹ್ಯಾಲಿಡೇ 86, ಇಸಾಬೆಲಾ ಗೇಜ್ 25, ಲಿಯಾ ತಹುಹು ಔಟಾಗದೆ 24, ಪ್ರಿಯಾ ಮಿಶ್ರಾ 41ಕ್ಕೆ2, ದೀಪ್ತಿ ಶರ್ಮಾ 39ಕ್ಕೆ3) ಭಾರತ: 44.2 ಓವರ್ಗಳಲ್ಲಿ 4 ವಿಕೆಟ್ಗಳಿಗೆ 236 (ಸ್ಮೃತಿ ಮಂದಾನ 100, ಯಷ್ಟಿಕಾ ಭಾಟಿಯಾ 35, ಹರ್ಮನ್ಪ್ರೀತ್ ಕೌರ್ ಔಟಾಗದೆ 59, ಜೆಮಿಮಾ ರಾಡ್ರಿಗಸ್ 22, ಹೆನಾ ರೋವ್ 47ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 6 ವಿಕೆಟ್ಗಳ ಜಯ. 2–1ರಿಂದ ಸರಣಿ ಗೆಲುವು. ಪಂದ್ಯದ ಆಟಗಾರ್ತಿ: ಸ್ಮೃತಿ ಮಂದಾನ, ಸರಣಿ ಆಟಗಾರ್ತಿ: ದೀಪ್ತಿ ಶರ್ಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.