ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳ ಗುಚ್ಛ ‘ಒಂದರ್ಧ ಗುಟುಕು ಚಾ’ ಎಂಬ ಕೃತಿಯಾಗಿ ಮೂಡಿ ಬಂದಿದೆ.

‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ‘ಘಾತ’ ಕಾದಂಬರಿಯ ಲೇಖಕ ಎಸ್. ರಮೇಶ್ ನಾಯಕ್ ಅವರ ವಿವಿಧ ಕಥೆಗಳನ್ನು ಸಂಕಲನದ ರೂಪದಲ್ಲಿ ಹೊರತರುವ ಕೆಲಸ ಮಾಡಿರುವುದು ಹುಬ್ಬಳ್ಳಿಯ ನಿಹೀರಾ ಪ್ರಕಾಶನ.

ಒಟ್ಟು 20 ಕಥೆಗಳು ಇಲ್ಲಿವೆ. ಎಲ್ಲವೂ ವಿಷಯ ವೈವಿಧ್ಯದಿಂದ ಗಮನ ಸೆಳೆಯುತ್ತವೆ. ಅಂತ್ಯ ಏನಾಗಬಹುದು ಎಂಬ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತವೆ. ಊಹಿಸಲಾಗದ ಅಂತ್ಯವೂ ಹಲವು ಕಥೆಗಳಿಗೆ ಇದೆ. ಮಾನವೀಯ ಅಂತಃಕರಣ ಕಥೆಗಳಾದ್ಯಂತ ಮಿಡಿಯುತ್ತದೆ.

ಬಡತನದ ಹೊಡೆತಕ್ಕೆ ವಂಚಕನಾಗುವ ಚಂದ್ರಪ್ಪನಿಗೆ ಅಮ್ಮನ ಭಾವಚಿತ್ರ ಕಂಡೊಡನೆ ಮನಃಪರಿವರ್ತನೆಯಾಗುವ ಕಥೆಯುಳ್ಳ ‘ಒಂದರ್ಧ ಗುಟುಕು ಚಾ’ ಈ ಕೃತಿಯ ಜೀವಾಳ. ನಿರುದ್ಯೋಗದ ಕರಾಳತೆ ದರ್ಶೀಸುವ ‘ಕೊಲ್ಲುವ ಕಾಯಕ’, ಪತ್ತೆದಾರಿ ಕಥೆ ‘ಕಾಣೆಯಾದ ಕ್ಯಾಷ್’ನ ರಹಸ್ಯ, ಇಂದಿನ ಮಕ್ಕಳ ಮನಸ್ಥಿತಿ ಹಾಗೂ ಅಂಕಗಳ ಬೆನ್ನುಹತ್ತುವ ಪೋಷಕರ ಸಂಬಂಧದ ಚಿತ್ರಣ ನೀಡುವ ‘ಈ ಹುಡುಗಿಗೆ ಏನಾಗಿದೆ?’ ಕಥೆ, ಕೌಟುಂಬಿಕ ಸಂಬಂಧಗಳಲ್ಲಿ ಮೂಡುವ ವಾತ್ಸಲ್ಯದ ಸೆಲೆಯ ‘ಕ್ಷಣ ಭಂಗುರ’, ಭ್ರಮಾಲೋಕದಲ್ಲಿ ಬದುಕದೇ ಜೀವನದ ವಾಸ್ತವಗಳನ್ನು ಎದುರಿಸಿ ಬದುಕಬೇಕೆಂಬ ಆಶಯ ವ್ಯಕ್ತಪಡಿಸುವ ‘ಆ ಒಂದು ಕ್ಷಣ’, ಮಾನವೀಯತೆಯ ಮೇಲ್ಮೆ ಸಾರುವ ‘ಹೊಟ್ಟೆ ಉರಿಸಿದ ಹುಡುಗ’, ಹೆಣ್ಣು ಭ್ರೂಣ ಹತ್ಯೆಯ ದಾರುಣತೆ ದರ್ಶಿಸುವ ‘ಗಗನ ಚುಂಬನ’... ಹೀಗೆ ಇಲ್ಲಿರುವ ಬಹುತೇಕ ಕಥೆಗಳು ನಮ್ಮ ಸುತ್ತಲೂ ನಡೆಯುವ ಘಟನೆಗಳಂತೆ ಭಾಸವಾಗುತ್ತವೆ.

ಲೇ: ಎಸ್. ರಮೇಶ್ ನಾಯಕ್
ಪ್ರ: ನಿಹೀರಾ ಪ್ರಕಾಶನ, ಹುಬ್ಬಳ್ಳಿ
ಪು: 170
ಬೆ: ₹ 265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.