ಜೆದ್ದಾ: ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವು ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ₹ 14 ಕೋಟಿ ನೀಡಿ ಖರೀದಿಸಿದೆ.

ಕಳೆದ ಬಾರಿ ತಂಡ ಮುನ್ನಡೆಸಿದ್ದ ರಿಷಭ್ ಪಂತ್ ಅವರನ್ನು ಬಿಡುಗಡೆ ಮಾಡಿದ್ದ ಡೆಲ್ಲಿ, ಈ ಬಾರಿ ರಾಹುಲ್ಗೆ ನಾಯಕತ್ವದ ಹೊಣೆ ನೀಡುವ ಸಾಧ್ಯತೆ ಇದೆ.

₹ 2 ಕೋಟಿ ಮೂಲ ಬೆಲೆ ಹೊಂದಿದ್ದ ರಾಹುಲ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಆರಂಭದಲ್ಲಿ ಉತ್ಸಾಹ ತೋರಿದವು. ಅಂತಿಮವಾಗಿ ಅವರನ್ನು ಡೆಲ್ಲಿ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.

ಸೌದಿ ಅರೇಬಿಯಾದ ಜೆದ್ದಾದಲ್ಲಿ ಹರಾಜು ನಡೆಯುತ್ತಿದೆ.

ರಿಷಭ್ ಪಂತ್ ಈ ಬಾರಿಯ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಜೇಬಿಗಿಳಿಸಿದ್ದಾರೆ. ಅವರನ್ನು ಲಖನೌ ಸೂಪರ್ಜೈಂಟ್ಸ್ ಫ್ರಾಂಚೈಸಿ ಬರೋಬ್ಬರಿ ₹ 27 ಕೋಟಿ ನೀಡಿ ಖರೀದಿಸಿದೆ.
.IPL Auction: ಪಂತ್ಗೆ ಜಾಕ್ಪಾಟ್; ₹27 ಕೋಟಿಗೆ ಲಖನೌ ತೆಕ್ಕೆಗೆ.IPL Auction: ಪಂತ್ಗೆ ಜಾಕ್ಪಾಟ್; ₹27 ಕೋಟಿಗೆ ಲಖನೌ ತೆಕ್ಕೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.