ಜೆದ್ದಾ: ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಸಕ್ತಿ ತೋರಲಿಲ್ಲ.

ಪರಿಣಾಮ ಮ್ಯಾಕ್ಸ್ವೆಲ್ ₹4.20 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.

ಈ ಮೊದಲು ಮೊಹಮ್ಮದ್ ಸಿರಾಜ್ ಅವರನ್ನು ಖರೀದಿಸಲು ಆರ್ಸಿಬಿ ಮನಸ್ಸು ಮಾಡಿರಲಿಲ್ಲ. ಮೊಹಮ್ಮದ್ ಸಿರಾಜ್ ಅವರನ್ನು ಬರೋಬ್ಬರಿ ₹12.2ಕೋಟಿಗೆ ಗುಜರಾತ್ ಟೈಟನ್ಸ್ ಖರೀದಿಸಿದೆ.

ಮತ್ತೊಂದೆಡೆ ₹12.2ಕೋಟಿ ನೀಡಿ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಆರ್ಸಿಬಿ ಖರೀದಿಸಿದೆ.

ವೆಂಕಟೇಶ್ ಅಯ್ಯರ್ಗೆ ಜಾಕ್ಪಾಟ್...

ಏತನ್ಮಧ್ಯೆ ಬರೋಬ್ಬರಿ ₹23.75 ಕೋಟಿ ನೀಡಿ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ್ತ ರೈಡ್ ರೈಡರ್ಸ್ ತಂಡ ಖರೀದಿಸಿದೆ.

ಇದರೊಂದಿಗೆ ಹರಾಜಿನಲ್ಲಿ ತವರು ತಂಡಕ್ಕೆ ಮರಳುವಲ್ಲಿ ವೆಂಕಟೇಶ್ ಅಯ್ಯರ್ ಯಶಸ್ವಿಯಾಗಿದ್ದಾರೆ.

ಅಲ್ಲದೆ ಮೊದಲ ದಿನದ ಹರಾಜಿನಲ್ಲಿ ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಬಳಿಕ ಅತಿ ಹೆಚ್ಚು ಮೊತ್ತ ಗಳಿಸುವಲ್ಲಿ ವೆಂಕಟೇಶ್ ಅಯ್ಯರ್ ಯಶಸ್ವಿಯಾಗಿದ್ದಾರೆ.
.IPL: ಬೆಂಗಳೂರಿಗೆ ಗುಡ್ ಬೈ ಹೇಳಿದ ಮೊಹಮ್ಮದ್ ಸಿರಾಜ್, RCBಗೆ ಲಿವಿಂಗ್ಸ್ಟೋನ್.IPL Mega Auction Highlights: ಪಂತ್, ಶ್ರೇಯಸ್, ವೆಂಕಟೇಶ್ಗೆ ಜಾಕ್ಪಾಟ್!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.