ವಿಜ್ಞಾನ ದೀಪಗಳು –ಇದು ನೊಬೆಲ್ ಪ್ರಶಸ್ತಿಗೆ ಪಾತ್ರರಾದ ಮತ್ತು ಪಾತ್ರರಾಗದ 65 ಶ್ರೇಷ್ಠ ವಿಜ್ಞಾನಿಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಇವರಲ್ಲಿ ಭಾರತದ ವಿಜ್ಞಾನಿಗಳೂ ಒಳಗೊಂಡಿದ್ದಾರೆ. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಮೂರೂವರೆ ದಶಕಗಳ ಕಾಲ ರಸಾಯನ ಶಾಸ್ತ್ರ ಬೋಧಿಸಿದ್ದ ಪ್ರೊ.ಕೆ.ವಿ. ಘನಶ್ಯಾಮ ಅವರು ಈ ಕೃತಿಯನ್ನು ಆಸಕ್ತಿದಾಯಕವಾಗಿ ಬರೆದಿದ್ದಾರೆ. ಕೋವಿಡ್ ಕಾಲದಲ್ಲಿ (2021ರ ಫೆಬ್ರುವರಿಯಿಂದ) ಅವರು ಮಾಡಿದ್ದ ಸರಣಿ ಪಾಡ್ಕಾಸ್ಟ್ಗಳನ್ನು ಈಗ ಪುಸ್ತಕ ರೂಪದಲ್ಲಿ ತಂದಿದ್ದಾರೆ.

ನೊಬೆಲ್ ಪ್ರಶಸ್ತಿ ಸ್ಥಾಪನೆಯಾಗುವುದಕ್ಕಿಂತ ಮೊದಲೇ ಮಹತ್ವದ ಕೆಲಸ ಮಾಡಿದ ವಿಜ್ಞಾನಿಗಳ ಪರಿಚಯವೂ ಕೃತಿಯಲ್ಲಿದೆ. ವಿಜ್ಞಾನಿಗಳ ಸಂಶೋಧನೆಯ ವಿವರಗಳನ್ನು ಇಲ್ಲಿ ಹೆಚ್ಚಾಗಿ ನೀಡಿಲ್ಲ. ಸಂಶೋಧನೆಯಷ್ಟೇ ಮಹತ್ವವನ್ನು ಅವರ ವ್ಯಕ್ತಿತ್ವ ಕಟ್ಟಿಕೊಡುವುದಕ್ಕೆ ನೀಡಿದ್ದಾರೆ ಎಂದು ಎಚ್.ಎಸ್.ರಾಘವೇಂದ್ರ ರಾವ್ ಮುನ್ನುಡಿಯಲ್ಲಿ ಬರೆದಿರುವುದರಲ್ಲಿ ಅತಿಶಯೋಕ್ತಿ ಕಾಣುತ್ತಿಲ್ಲ. ಹೀಗಾಗಿ ವಿಜ್ಞಾನಿಗಳ ಜೀವನದ ಲಘು ಪ್ರಸಂಗಗಳೂ ಧಾರಾಳವಾಗಿ ಕಾಣಸಿಗುತ್ತವೆ.

ಆರಂಭದಲ್ಲಿ ನೊಬೆಲ್ ಪ್ರಶಸ್ತಿಗೆ ಸಂಬಂಧಿಸಿ ಕುತೂಹಲಕರ ಮಾಹಿತಿಗಳಿವೆ. 1915ರಲ್ಲಿ ಅಪ್ಪ–ಮಗ ಒಂದೇ ವರ್ಷ ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದು (ವಿಲಿಯಂ ಹೆನ್ರಿ ಬ್ರ್ಯಾಗ್– ವಿಲಿಯಂ ಲಾರೆನ್ಸ್ ಬ್ರ್ಯಾಗ್), ಎರಡು ಬಾರಿ ಬೇರೆ ಬೇರೆ ಕ್ಷೇತ್ರಗಳಲ್ಲಿ ನೊಬೆಲ್ ಪಡೆದ ಲೈನಸ್ ಪೌಲಿಂಗ್ ... ಹೀಗೆ ಪರಿಚಯದ ಜೊತೆ ಸ್ವಾರಸ್ಯಕರ ವಿವರಗಳಿವೆ. ಪ್ರತಿ ಲೇಖನದ ಜೊತೆ ಅವರ ಭಾವಚಿತ್ರಗಳೂ ಇವೆ. ಹೀಗಾಗಿಯೇ ಈ ಕೃತಿಯನ್ನು ಸಾಮಾನ್ಯ ಓದುಗರೂ ಓದುವಂತಿದೆ.

ವಿಜ್ಞಾನ ದೀಪಗಳು

ಲೇ: ಪ್ರೊ. ಕೆ.ವಿ. ಘನಶ್ಯಾಮ

ಪ್ರ: ಕೊಳವಳ್ಳಿ ಪ್ರಕಾಶನ

ಸಂ: 9886023439

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.