ಮಕ್ಕಳೇ ಒಕ್ಕೊರಲಿನಲ್ಲಿ ಹಾಡಿ ಹೇಳಬಹುದಾದ ಕವಿತೆಗಳು ಈ ಸಂಕಲನದಲ್ಲಿವೆ. ಓದಲು ಕುಳಿತರೆ ಆಕರ್ಷಕವಾದ ಚಿತ್ರಗಳು ಅವರಲ್ಲಿಯೂ ಕಲ್ಪನಾ ಹಕ್ಕಿ ಗರಿಗೆದರುವಂತೆ ಮಾಡುತ್ತವೆ. ಕಪ್ಪುಬಿಳುಪಿನ ಈ ಚಿತ್ರಗಳು, ಮಕ್ಕಳು ತಾವೂ ಸೀಸಕಡ್ಡಿಯಲ್ಲಿಯೇ ಚಿತ್ರ ಬರೆಯಬಹುದು ಎಂಬ ವಿಶ್ವಾಸ ಮೂಡಿಸುತ್ತವೆ. ಆದಿ ಅಂತ್ಯಪ್ರಾಸ ಇರುವ ಈ ಕವಿತೆಗಳು ಸರಾಗವಾಗಿ ಬಾಯಿಪಾಠವಾಗುವಂಥವು.

ಕಾವ್ಯದ ರಸಾಸ್ವಾದವನ್ನು ಕಲಿಸುವಂಥ ಈ ಕವಿತೆಗಳು ಎಳೆ ಓದುಗರನ್ನು ಕನ್ನಡ ಸಾಹಿತ್ಯದತ್ತ ಸೆಳೆಯುವ ಕೆಲಸವನ್ನಂತೂ ಮಾಡಬಲ್ಲವು. ಮನೆ, ಪರಿಸರ, ಹತ್ತಿರದ ವ್ಯಕ್ತಿಗಳು, ವೃತ್ತಿಗಳು ಎಲ್ಲವೂ ಈ ಸಂಕಲನದಲ್ಲಿ ಹಾದು ಹೋಗುತ್ತವೆ. ಓಹೊ.. ನಾನೂ ಹೀಗೆ ಹೇಳಬಹುದಲ್ಲ ಎನ್ನುವಂತನಿಸುವ ವಾಕ್ಯಗಳು ಹಲವಾರು ಈ ಕವನದಲ್ಲಿವೆ. ಬಿಸಿಬಿಸಿ ಭಾತು ಕವಿತೆಯಲ್ಲಿಯ ಗಪ್ಚುಪ್ ತಿನ್ನು ಎಂಬ ವಾಕ್ಯ ಎಲ್ಲ ತಾಯಂದಿರು ಹೇಳುವ ಮಾತೇ ಆಗಿದೆ. ಪ್ರತಿ ಕವನವೂ ಓದುಗರೊಂದಿಗೆ ಆಪ್ತ ಬಾಂಧವ್ಯ ಬೆಸೆಯುತ್ತದೆ. ಕನ್ನಡದ ಪದ್ಯಗಳನ್ನು ಹೇಳುವುದೇ ಕಡಿಮೆ ಆಗಿರುವ ಈ ದಿನಗಳಲ್ಲಿ ಈ ಪದ್ಯಗಳು ಮಕ್ಕಳ ನಾಲಗೆಯನ್ನು ಹೊರಳಿಸುತ್ತವೆ. ಮನವನ್ನು ಅರಳಿಸುತ್ತವೆ. ಸಂಗೀತ ನಿರ್ದೇಶಕ ವಿ.ಮನೋಹರ್ ಅವರ ಗೆರೆಗಳು ಪ್ರತಿ ಕವನವನ್ನೂ ಸಶಕ್ತವಾಗಿ ಹಿಡಿದಿಟ್ಟಿವೆ. ಕಪ್ಪುಬಿಳುಪಿನ ಚಿತ್ರಗಳಲ್ಲಿಯೂ ಕಲ್ಪನೆ ಗರಿಗೆದರುವ ಅಂದ ಇಲ್ಲಿ ಅನಾವರಣವಾಗಿದೆ. ಪದ್ಯಗಳ ಲಯ, ಮಕ್ಕಳನ್ನು ಹಿಡಿದಿಡುತ್ತವೆ. ದೊಡ್ಡವರು ಓದುತ್ತಿದ್ದರೆ ಅವರೂ ಮಕ್ಕಳಾಗಿ ನಲಿಯುವಂತಿವೆ.

ಬಿಸಿಬಿಸಿ ಬಾತು
(ಮಕ್ಕಳ ಪದ್ಯಗಳು)

ಲೇ: ರಾಜಶೇಖರ ಕುಕ್ಕುಂದಾ

ಪ್ರ: ಅವ್ಯಕ್ತ ಪ್ರಕಾಶನ

ಸಂ: 8792693438

ಮಹಿ

ಪುಟ್ಟದೊಂದು ಆನೆ, ತನ್ನ ಅಪ್ಪ–ಅಮ್ಮನನ್ನು ಬಿಟ್ಟು ಬೆಟ್ಟಗಳ ಮೇಲೆ ಹಾರಲು ಹೊರಡುತ್ತದೆ. ಪುಟ್ಟ ಪುಟಾಣಿ ಹಕ್ಕಿಯೊಂದು ಸ್ನೇಹಿತನಾಗುತ್ತದೆ. ಮಹಿಯ ಆಸೆ, ಕನಸು, ಸಾಹಸ ಹಾಗೂ ಕಾಡಿನ ರಾಜಕೀಯ ಎಲ್ಲವೂ ಕತೆಯ ರೋಚಕತನವನ್ನು ಹೆಚ್ಚಿಸುತ್ತ ಹೋಗುತ್ತದೆ. ಸುಭದೀಪ್ರಾಯ್, ಶಿಲಾದಿತ್ಯ ಬೋಸ್ ಅವರು ತೆಗೆದಿರುವ ಆಕರ್ಷಕ ಚಿತ್ರಗಳು, ಮಹಿಯ ರೂಪವನ್ನೂ, ಕಾಡಿನ ಸಾಹಸಗಳನ್ನೂ ಚಿತ್ರಿಸಿಕೊಳ್ಳಲು ಸಹಾಯ ಮಾಡುತ್ತವೆ.

ವಾನರ, ಅಸುರ, ಅಜಯ ಪುಸ್ತಕಗಳ ಖ್ಯಾತಿಯ ಆನಂದ್ ನೀಲಕಂಠನ್ ಮಕ್ಕಳಿಗಾಗಿ ಈ ಕತೆ ಪುಸ್ತಕ ಎಂದು ಹೇಳಿಕೊಂಡಿದ್ದಾರೆ. 200 ಪುಟಗಳನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂಥ ಸಾಹಸ ಮಕ್ಕಳಿಂದಾಗದು. ಓದಬಹುದಾದ ಮಕ್ಕಳಿಗೆ ಈ ಆನೆಯ ಕತೆ ರುಚಿಸಲಿಕ್ಕಿಲ್ಲ. ಆದರೂ ರುಡ್ಯಾರ್ಡ್ ಕಿಪ್ಲಿಂಗ್ ಅವರ ಜಂಗಲ್ಬುಕ್ನಂಥ ಒಂದೇ ಒಂದು ಕಾದಂಬರಿ ಭಾರತೀಯ ಭಾಷೆಯಲ್ಲಿಲ್ಲ ಎಂಬ ಹಳಹಳಿಕೆಯೊಂದಿಗೇ ಈ ಕತೆ ಆರಂಭಿಸಿದ್ದಾರೆ. ಭಾರತೀಯ ಜಾಯಮಾನಕ್ಕೆ ಹೊಂದುವಂಥ ಹೆಸರುಗಳನ್ನು ಪಾತ್ರಗಳಿಗೆ ನೀಡಿದ್ದರೆ ಇನ್ನೂ ಆತ್ಮೀಯವೆನಿಸುತ್ತಿತ್ತು. ಡಿಮಿಟ್ರಿ, ಟ್ರಂಪು, ಮುಂಚುರು ಎಂಬಂಥ ಹೆಸರುಗಳು ನೆನಪಿಡಲು ಕಷ್ಟವೆನಿಸುತ್ತವೆ. ಓದಿನ ಓಘಕ್ಕೆ ತಡೆ ಒಡ್ಡುತ್ತವೆ. ಮಹಿ, ಇಳಾರಂತೆ ಸರಳವಾದ ಹೆಸರುಗಳನ್ನಿಟ್ಟರೆ ಇನ್ನಷ್ಟು ಆಪ್ತವೆನಿಸುತ್ತಿತ್ತು.

ರೋಚಕ ಮನರಂಜನೆಗೆ ಓದಬಹುದಾದ, ಓದಿಸಬಹುದಾದ ಪುಸ್ತಕ ಇದಾಗಿದೆ. ಕಿಶೋರಾವಸ್ಥೆ ದಾಟಿದ, ಹದಿಹರೆಯಕ್ಕೆ ಕಾಲಿಡದ ಮಕ್ಕಳು ಆನಂದಿಸಬಹುದು. ಉಳಿದ ಮಕ್ಕಳಿಗೆ ಪಾಲಕರು ಓದಿ ಹೇಳಲು, ಕತೆ ಕಟ್ಟಲು ಚಂದದ ಪುಸ್ತಕ ಇದಾಗಿದೆ.

ಮಹಿ, ನೀಲಿ ಬೆಟ್ಟಗಳ ಮೇಲೆ ಹಾರಿದ ಆನೆ

ಲೇ: ಆನಂದ್ ನೀಲಕಂಠನ್

ಅನುವಾದ: ರತೀಶ್ ಬಿ.ಆರ್.

ಪ್ರ: ಹರಿವು ಬುಕ್ಸ್

ಸಂ: 808882217

ಹಳದಿ ಜೀರುಂಡೆ

ಮಕ್ಕಳಿಗೆ ಕನ್ನಡ ಕಲಿಸಲು, ಕತೆಗಳಲ್ಲಿ ಆಸಕ್ತಿ ಮೂಡಿಸಲು ಪೂರಕವಾಗಿದೆ ಹಳದಿ ಜೀರುಂಡೆ ಲಾರಾ ಎಂಬ ಪುಸ್ತಕ. ಕನ್ನಡದ ಅಕ್ಷರಗಳನ್ನು ಜೋಡಿಸಿ, ಓದಲು ಕಲಿಯುತ್ತಿರುವ ಯಾವುದೇ ವಯೋಮಾನದ ಮಕ್ಕಳಿಗೆ ಇದು ಖುಷಿ ಕೊಡುತ್ತದೆ. ಚಂದದಚಿತ್ರಗಳು, ಪುಟ್ಟಪುಟ್ಟ ವಾಕ್ಯಗಳ ಪುಟಗಳು. ಒಂದು ಪುಸ್ತಕ ಮುಗಿಸಿದೆ ಎಂಬ ಆತ್ಮವಿಶ್ವಾಸ ನೀಡುವ ಇದು ಹೆಚ್ಚಿನ ಪುಸ್ತಕಗಳನ್ನು ಓದಲು ಪ್ರೇರೇಪಿಸುತ್ತದೆ. ಕೆಂಪು ಜೀರುಂಡೆಗಳ ಗುಂಪಿನಲ್ಲಿರುವ ಲಾರಾ ಎಂಬ ಹಳದಿ ಜೀರುಂಡೆಯ ಕತೆ ಇದು. ತಾನೂ ಎಲ್ಲರಂತಾಗಬೇಕು ಎಂದು ಬಯಸುವ ಲಾರಾ ಒಂದಿನ ಬಣ್ಣ ಬಳಿದುಕೊಳ್ಳುತ್ತಾಳೆ. ತಾನಲ್ಲದ ತನ್ನನ್ನು ಎಲ್ಲರೂ ಗುರುತಿಸುತ್ತಾರೆಯೇ? ಲಾರಾಗೆ ಖುಷಿ ಆಯಿತೇ? ಉಳಿದವರು ಏನೆಂದರು? ಎಲ್ಲರಂತಾಗಬೇಕು ಎಂದು ಬಯಸುತ್ತಲೇ ತನ್ನನ್ನೇ ಇಷ್ಟಪಡದ ಲಾರಾಳ ಕತೆ ಮುಂದೇನಾಯಿತು? ಮಕ್ಕಳೊಂದಿಗೆ ನೀವೂ ಪುಸ್ತಕವನ್ನು ಓದಿ.

ಹಳದಿ ಜೀರುಂಡೆ

ಲೇ: ಲಾರಾ ಮಾರ್ತಾ ಇವಾನ್ಸ್

ಅನುವಾದ: ಶ್ವೇತಾರಾಣಿ ಎಚ್.ಕೆ

ಪ್ರ: ಮೊಗ್ಗು, ಋತುಮಾನ ಪುಸ್ತಕ

ಸಂ: 9480035877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.