‘ನೋಡು ಅಣ್ತಮ್ಮ, ಭೂಮಂಡಲದೇಲಿ ಏನೇನು ಕೆಟ್ಟವು ಅದಾವೋ ಅವೆಲ್ಲಾ ಮಾಡದಿದ್ರೂ ಮಟ್ಟದಿದ್ರೂ ಬಂದೂ ಬಂದೂ ನಮಗೇ ತಲೆಗೆ ಹೊಡಿತವಲ್ಲೋ. ರಾಜಕಾರಣಿಗಳಿಗೆ ಇವ್ಯಾವುದೂ ತಟ್ಟಕುಲ್ವಾ?’ ಅಂದ ನಮ್ಮೂರ ಗಾಬರಿ.

‘ಅದೇನು ಅಣ್ತಮ್ಮ, ನಿನಗೆ ಗಾಬರಿ ತಂದಿರೋ ನೋವು?’ ಅಂತ ಕೇಳಿದೆ.

‘ರೈತರ ಜಮೀನೆಲ್ಲಾ ಅವರದ್ದಂತೆ. ನಾವು ದಾಕಲ್ಮೆಂಟು ತಕ್ಕಂದು ಅವರತಕ್ಕೋಗಿ ಮೆಹನತ್ತು ಮಾಡಬೇಕಂತೆ. ಅವರು ಯಾಕೆ ಯಾವುದೇ ರಾಜಕಾರಣಿಗಳ ಜಮೀನಿಗೆ ಪಹಣಿ ಬರೆಸಿಕ್ಯಂದುಲ್ಲ? ರೈತರು ಸಾಲ-ಸೋಲ ಅಂತ ಸಾಯ್ತಲೇ ಇರತರೆ. ರಾಜಕೀಯದೋರು ಎಲೆಕ್ಷನ್ನಿಗೆ ಅಪಿಡವಿಟ್ಟು ಕೊಡುವಾಗ ಕೋಟಿಗಟ್ಲೆ ಸಾಲ ಅದೆ ಅಂತ ಲೆಕ್ಕ ತೋರಿಸ್ತರೆ. ಇಲ್ಲೀಗಂಟ ಯಾಕೆ ಯಾವ ರಾಜಕಾರಣೀನೂ ಸಾಲ ತೀರಿಸಕ್ಕಾಗಲಿಲ್ಲ ಅಂತ ಆತ್ಮಹತ್ಯೆ ಮಾಡಿಕ್ಯಂದುಲ್ಲ?’

‘ದಿಟ ಕಪ್ಪಾ’.

‘ಸರ್ಕಾರದ್ದು ಐದೂವರೆ ಲಕ್ಷ ಕೋಟಿ ಸಾಲ ನಮ್ಮ ತಲೆ ಮ್ಯಾಲೆ ಕೂತದೆ. ಹೊಟ್ಟುರಿತದೆ ಕಯ್ಯಾ. ಮನೇಲಿ ಒಂದು ಚಮಚ ಕಾಣದೇ ಹೋದ್ರೂ ಹೆಂಡ್ರಿಗೆ ಗೊತ್ತಾತದೆ. ಬೇಲೆಕೇರೀಲಿ ಲಕ್ಷಗಟ್ಟಲೇ ಟನ್ ಅದಿರು ಹೊತ್ತುಕೋದ್ರೂ ಯಾಕೆ ಯಾರಿಗೂ ಗೊತ್ತಾಗನಿಲ್ಲ?’ ಅಂತ ಪ್ರಶ್ನೆಗಳ ಮಳೆ ಸುರಿಸಿದ.

‘ಅಮೇಲೆ?’ ಅಂದೆ.

‘ನಿನಗೇನ್ಲಾ ಯಾಸೆಟ್ಗ ಆಮೇಲೆ ಅಂದುಬುಡ್ತೀಯ. ರಾಜಕಾರಣಿಗಳಿಗೆ ತಿಮಿರು ಜಾಸ್ತಿಯಾದಾಗ ಒಂದ್ಕಡೆ ರಾಜೀನಾಮೆ ಕೊಟ್ಟು ಇನ್ನೊಂದ್ಕಡೆ ಎಲೆಕ್ಷನ್ನಿಗೆ ನಿಂತುಗತ್ತರೆ. ಎರಡೂ ಎಲೆಕ್ಷನ್ ಕಾಸು ಜನರದ್ದೇ ತಾನೆ?’.

‘ಸೋತರೆ ರಾಜೀನಾಮೆ ಕೊಡ್ತೀರಾ ಅಂತ ಕೇಳ್ತವ್ರೆ. ಇಲ್ಲೀಗಂಟ ಯಾವ ರಾಜಕಾರಣಿ ನೈತಿಕ ಹೊಣೆ ಹೊತಗಂದು ರಾಜೀನಾಮೆ ಕೊಟ್ಟವ್ನೆ?’

‘ಅಲ್ಲ ಕಲಾ, ನಿಂದೊಳ್ಳೆ ರಾಮಾಣ್ಯಾತಲ್ಲೋ. ನೀನು ಕಾಣಾ ಸರ್ಕಾರಕ್ಕೆ ಸರ್ಕಾರವೇ ಚಂಪಟ್ನದೇಲಿ ಮೊಕ್ಕಾಂ ಹಾಕಿ ಪೋಟಾಪೋಟಿಗೆ ಬಿದ್ದದೆ. ಅಕ್ಕಡೆ ಗೌಡಗೋಳ ಕಣ್ಣಗೆ ನೀರು ತುಂಬಿ ಕೋಡಿ ಬೀಳ್ತಾದೆ’.

‘ದಿಟ ಅಣ್ತಮ್ಮ, ಈವತ್ತು ರಾತ್ರಿ ಯಾವ್ಯಾವ ಬೂತಚೇಷ್ಟೆ ನಡಿತದೋ ನಮ್ಮವ್ವ ಮುಳಕಟ್ಟಮ್ಮನಿಗೇ ಗೊತ್ತು’ ಅಂತ ನನಗೇ ಸಮಾಧಾನಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.