ಮೈಸೂರು: ಶ್ರೇಯಾಂಕರಹಿತ ಆಟಗಾರ ಅಮಿತ್ ಶರ್ಮ ಅವರು ಎರಡನೇ ಶ್ರೇಯಾಂಕದ ಅಂಕಿತ್ ಮಲ್ಲಿಕ್ ಅವರಿಗೆ ಆಘಾತ ನೀಡುವ ಮೂಲಕ ಅಂಚೆ ನೌಕರರ 38ನೇ ಅಖಿಲ ಭಾರತ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪ್ರವೇಶಿಸಿದರು.

ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೆಮಿಫೈನಲ್ನಲ್ಲಿ ಉತ್ತರಪ್ರದೇಶದ ಅಮಿತ್ 21-23, 21-16, 21-14 ರಿಂದ ಹರಿಯಾಣದ ಮಲ್ಲಿಕ್ ಎದುರು ಅಚ್ಚರಿಯ ಗೆಲುವು ದಾಖಲಿಸಿದರು. ಮತ್ತೊಂದು ಸೆಮಿಫೈನಲ್ನಲ್ಲಿ ಹಿಮಾಚಲ ಪ್ರದೇಶದ ಅಜಯ್ ಕೈತ್ 21–19, 11–5ರಿಂದ ಮುಂದಿದ್ದ ವೇಳೆ ಕೇರಳದ ರಂಜಿತ್ ಸನ್ನಿ ಗಾಯದ ಕಾರಣಕ್ಕೆ ಪಂದ್ಯದಿಂದ ಹೊರ ನಡೆದರು.

ಮಹಿಳೆಯರ ಸಿಂಗಲ್ಸ್ನಲ್ಲಿ ಗುಜರಾತ್ನ ವೈಷ್ಣವಿ ಬರಿಯಾ ಪಶ್ಚಿಮ ಬಂಗಾಳದ ಅನುರಿಯಾ ದಾಸ್ ಫೈನಲ್ಗೆ ಲಗ್ಗೆ ಇಟ್ಟರು. ಡಬಲ್ಸ್ನಲ್ಲಿ ಕರ್ನಾಟಕದ ಆರ್. ಲೀಲಾ ಲಕ್ಷ್ಮಿ ದೆಹಲಿಯ ಮಯೂರಿ ಯಾದವ್ ಜೊತೆಗೂಡಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ಇತರೆ ವಿಭಾಗದ ಪಂದ್ಯಗಳ ಫಲಿತಾಂಶ ( ಸೆಮಿಫೈನಲ್ ಮಾತ್ರ): ಪುರುಷರು: ಸಿಂಗಲ್ಸ್ ( 45 ವರ್ಷ ಮೇಲ್ಪಟ್ಟವರು): ಮಧ್ಯಪ್ರದೇಶದ ಕುನಾಲ್ ಮಕ್ವಾನಗೆ 21–14, 21–11ರಿಂದ ಕೇರಳದ ಜೋಮನ್ ಜಾರ್ಜ್ ವಿರುದ್ಧ; ಹಿಮಾಚಲ ಪ್ರದೇಶದ ವಿಕಾಸ್ ಸೂದ್ಗೆ 21–14, 22–20ರಿಂದ ಗೆಲುವು. ಡಬಲ್ಸ್: ತಮಿಳುನಾಡಿನ ಈ. ಯುವರಾಜ್–ಸುಬ್ರಮಣಿಯಂ ಜೋಡಿಗೆ 21–13, 21–13ರಿಂದ ಕೇರಳದ ಆಕಾಶ್ ಶಿವಾಜಿ– ಎಂ. ಶ್ರೀಧಿನ್ ವಿರುದ್ಧ ಜಯ; ಶುಭಂ ಯಾದವ್ ( ದೆಹಲಿ)– ಸಾದ್ವಿನ್ ಗೌಡ (ಒಡಿಶಾ) ಜೋಡಿಗೆ 14–21, 21–8, 21–13ರಿಂದ ಅಂಕಿತ್ ಮಲ್ಲಿಕ್ ( ಹರಿಯಾಣ), ಪ್ರಮೇಶ್ ಪಟಿದಾರ್ ವಿರುದ್ಧ ಗೆಲುವು.

ಮಹಿಳೆಯರ ಸಿಂಗಲ್ಸ್: ಗುಜರಾತ್ನ ವೈಷ್ಣವಿ ಅವರಿಗೆ 21–13, 21–13ರಿಂದ ಹಿಮಾಚಲ ಪ್ರದೇಶದ ಚಾವಿ ಠಾಕೂರ್ ಎದುರು; ಪಶ್ಚಿಮ ಬಂಗಾಳದ ಅನುರಿಯಾ ದಾಸ್ಗೆ 14–21, 21–12, 21–10ರಿಂದ ಅಸ್ಸಾಂನ ಮಢಘಾ ಬೋರಾ ಎದುರು ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.