ರಾಜಗೀರ್: ಎರಡು ಪಂದ್ಯಗಳಲ್ಲಿ ಸತತ ಗೆಲುವುಗಳನ್ನು ಪಡೆದು ಶುಭಾರಂಭ ಮಾಡಿರುವ ಭಾರತ ತಂಡವು, ಗುರುವಾರ ನಡೆಯುವ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದ್ದು, ಇದುವರೆಗಿನ ಲೋಪಗಳನ್ನು ತಿದ್ದಿಕೊಳ್ಳುವ ಅವಕಾಶ ಹೊಂದಿದೆ.

ಆತಿಥೇಯ ಭಾರತ ಮತ್ತು ಒಲಿಂಪಿಕ್ ಬೆಳ್ಳಿ ವಿಜೇತ ಚೀನಾ ತಂಡಗಳು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಸಮಾನ ಅಂಕ ಗಳಿಸಿವೆ. ಆದರೆ ಚೀನಾದ ಗೋಲು ವ್ಯತ್ಯಾಸ ಉತ್ತಮವಾಗಿದೆ. ಚೀನಾದ ಗೋಲು ವ್ಯತ್ಯಾಸ 20 ಇದ್ದರೆ, ಭಾರತದ ಗೋಲು ವ್ಯತ್ಯಯ 5. ಥಾಯ್ಲೆಂಡ್ ವಿರುದ್ಧ ಗುರುವಾರ ಭರ್ಜರಿ ಗೆಲುವು ದಾಖಲಿಸಿದರೆ ಅದು ತಂಡದ ನೆರವಿಗೆ ಬರಲಿದೆ.

ಈ ಪಂದ್ಯದ ನಂತರ ಭಾರತಕ್ಕೆ ಪ್ರಬಲ ಚೀನಾ ಮತ್ತು ಜಪಾನ್ ವಿರುದ್ಧ ಆಡಲು ಇದೆ. ರೌಂಡ್ರಾಬಿನ್ ಹಂತದ ನಂತರ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ಗೆ ಮುನ್ನಡೆಯುತ್ತವೆ.

ಭಾರತ, ಮೊದಲೆರಡೂ ಪಂದ್ಯಗಳಲ್ಲಿ ಜಯಗಳಿಸಿದೆ ನಿಜ, ಆದರೆ ಅನೇಕ ಬಾರಿ ಗೋಲು ಗಳಿಸುವ ಉತ್ತಮ ಅವಕಾಶಗಳನ್ನು ಸೃಷ್ಟಿಸಿಕೊಂಡ ನಂತರ ಕೊನೆಯಲ್ಲಿ ಎಡವುತ್ತಿದೆ.

‘ಭಾರತದ ಆಟಗಾರ್ತಿಯರು ಎದುರಾಳಿಯ ಗೋಲು ಆವರಣದಲ್ಲಿ ಉತ್ತಮ ಅವಕಾಶಗಳನ್ನು ಪರಿವರ್ತಿ
ಸಲು ವಿಫಲರಾಗುತ್ತಿದ್ದಾರೆ’ ಎಂದು ಚೀಫ್ ಕೋಚ್ ಹರೇಂದ್ರ ಸಿಂಗ್, ಮಂಗಳವಾರದ ಪಂದ್ಯದ ನಂತರ ಒಪ್ಪಿಕೊಂಡಿದ್ದರು.

ಭಾರತ ತಂಡದ ಚಿಂತೆಗೆ ಕಾರಣವಾಗಿರುವ ಮತ್ತೊಂದು ವಿಷಯವೆಂದರೆ ಪೆನಾಲ್ಟಿ ಕಾರ್ನರ್ಗಳನ್ನು ಪರಿವರ್ತಿಸುವಲ್ಲಿ ವಿಫಲವಾಗುತ್ತಿರುವುದು. ಮಲೇಷ್ಯಾ ವಿರುದ್ಧ 11 ಪೆನಾಲ್ಟಿ ಕಾರ್ನರ್ಗಳು ದೊರೆತರೂ, ಮೂರಷ್ಟೇ ಗೋಲಾಗಿದ್ದವು.

ಭಾರತದ ಮುಂಚೂಣಿ ಆಟಗಾರ್ತಿಯರಲ್ಲಿ ಸಂಗೀತಾ ಕುಮಾರಿ ಮತ್ತು ದೀಪಿಕಾ ಉತ್ತಮ ಪ್ರದರ್ಶನ ನೀಡಿದ್ದು, ತಲಾ ಮೂರು ಗೋಲುಗಳನ್ನು ಗಳಿಸಿದ್ದಾರೆ. ಇತರ ಫಾರ್ವರ್ಡ್ ಆಟಗಾರ್ತಿಯರಾದ ಶರ್ಮಿಳಾ ದೇವಿ, ಪ್ರೀತಿ ದುಬೆ, ಬ್ಯೂಟಿ ಡಂಗ್ಡಂಗ್ ಕೂಡ ಹೊಣೆಯರಿತು ಆಡಬೇಕಾಗಿದೆ.

ಥಾಯ್ಲೆಂಡ್ ವಿರುದ್ಧದ ಗೆಲುವು, ಭಾರತದ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಲಿದೆ. ವಿಶ್ವ ಕ್ರಮಾಂಕದಲ್ಲಿ ಭಾರತ 9ನೇ ಸ್ಥಾನದಲ್ಲಿದೆ. ಥಾಯ್ಲೆಂಡ್ 29ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತಕ್ಕೆ ಈ ಪಂದ್ಯ ಹೆಚ್ಚು ಕಠಿಣವಾಗದು. ಟೂರ್ನಿಯಲ್ಲಿ ಥಾಯ್ಲೆಂಡ್ ಸದ್ಯ ಕೊನೆಯ ಸ್ಥಾನದಲ್ಲಿದೆ.

ಗುರುವಾರ ನಡೆಯುವ ಇತರ ಪಂದ್ಯಗಳಲ್ಲಿ ಮಲೇಷ್ಯಾ, ಚೀನಾ ತಂಡವನ್ನು ಎದುರಿಸಲಿದೆ. ಚೀನಾ ತಂಡವು, ಜಪಾನ್ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.