ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ದೇವತಾನುಗ್ರಹ ಸಂಪೂರ್ಣವಾಗಿ ಇರಲಿದೆ
Published 21 ನವೆಂಬರ್ 2024, 19:23 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಪೂರ್ವ ತಯಾರಿ ಅನಿವಾರ್ಯ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ಆಘಾತವಾಗಲಿದೆ.
ವೃಷಭ
ನಿಧಾನಗತಿಯಲ್ಲಿ ನಡೆಯುತ್ತಿದ್ದ ಕಾರ್ಯಗಳು ಮಹಾಗಣಪತಿಯ ಆಶೀರ್ವಾದದಿಂದ ಶೀಘ್ರಗತಿ ಹೊಂದಿ ಪ್ರಗತಿಯನ್ನು ಹೊಂದುತ್ತವೆ. ಕೃಷಿಯ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ ಉಂಟಾಗುವುದು
ಮಿಥುನ
ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕಂಕಣಬಲಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಲಿದೆ. ಮನೆಯಲ್ಲಿ ಆನಂದದ ವಾತಾವರಣ ಉದಯವಾಗುತ್ತದೆ. ವಾದವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
ಕರ್ಕಾಟಕ
ಎಲ್ಲವನ್ನೂ ಸ್ವಂತವಾಗಿ ಮಾಡಬಲ್ಲೆನೆಂಬ ಹುಮ್ಮಸ್ಸು ನಷ್ಟಕ್ಕೆ ಕಾರಣವಾಗುತ್ತದೆ. ರೈತರಿಗೆ ತರಕಾರಿ ಬೆಳೆಯ ಬಗ್ಗೆ ಇರುವ ನಿರೀಕ್ಷೆ ಫಲಿಸಿ, ಸಂತೋಷಕ್ಕೆ ಕಾರಣವಾಗುವುದು. ಧನ ಸಂಪಾದನೆಯಾಗುವುದು.
ಸಿಂಹ
ಬುದ್ಧಿವಂತಿಕೆಯನ್ನು ಹೊಂದಿದ ಜನರಲ್ಲಿ ವ್ಯವಹಾರ ನಡೆಸಬೇಕಾಗುವುದರಿಂದ ಜಾಗ್ರತೆ ಇರಲಿ. ಇಷ್ಟ ವಸ್ತುಗಳ ಖರೀದಿಯಿಂದ ಹಣ ವ್ಯಯವಾಗುವುದು. ಕುಟುಂಬದಲ್ಲಿ ಎಲ್ಲರ ಆರೋಗ್ಯ ಉತ್ತಮವಾಗಿರುವುದು.
ಕನ್ಯಾ
ಕಾರ್ಯಕ್ಷೇತ್ರದಲ್ಲಿ ದೂರ ಸಂಚಾರ ಹೆಚ್ಚಾಗಿದ್ದರೂ ಎಣಿಕೆಗೆ ಮೀರಿದ ಧನಾಗಮವಿದೆ. ಎಲ್ಲಾ ಕಾರ್ಯಗಳು ಸಿದ್ಧಿಸಲಿವೆ. ಉದ್ಯೋಗಕ್ಕೆ ಅನುಕೂಲವಾಗುವ ಜನರ ಪರಿಚಯವಾಗಲಿದೆ.
ತುಲಾ
ಪಾಲುದಾರಿಕೆ ವ್ಯವಹಾರದಲ್ಲಿ ಬುದ್ಧಿಶಕ್ತಿಯಿಂದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಇದ್ದಲ್ಲಿ ಲಾಭವಾಗುವುದು. ಪ್ರವಾಸ ಹೋಗುವ ವಿಷಯದಲ್ಲಿ ಕುಟುಂಬದ ಸದಸ್ಯರು ನಿರ್ಧಾರಗಳನ್ನು ಒಪ್ಪಿಕೊಳ್ಳುವರು.
ವೃಶ್ಚಿಕ
ಎಲ್ಲಾ ರೀತಿಯ ದವಸ ಧಾನ್ಯ ಹಾಗೂ ಮಸಾಲೆ ಪದಾರ್ಥಗಳ ಸಗಟು ಹಾಗೂ ರಫ್ತು ವ್ಯಾಪಾರಿಗಳಿಗೆ ಅಧಿಕ ಮಟ್ಟದ ವ್ಯಾಪಾರ ಇರಲಿದೆ. ಸಂಶೋಧನಾ ಕ್ಷೇತ್ರದಲ್ಲಿನ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ.
ಧನು
ಹೊಸ ಕಾರ್ಯದ ಸಂಪೂರ್ಣ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಪ್ರವೃತ್ತಿಯಲ್ಲಿ ಅಪಾದನೆಗಳು ಎದುರಾಗಿ ಮಾನಸಿಕವಾಗಿ ಕಿರಿಕಿರಿ ಎನಿಸಲಿವೆ. ಅಡೆ ತಡೆಗಳು ಇರದು.
ಮಕರ
ಕಾಡುವ ಸಮಸ್ಯೆಯಿಂದಾಗಿ ಮತ್ತು ಅಸಹಾಯಕ ಸ್ಥಿತಿಯಿಂದಾಗಿ ಯಾರಲ್ಲೂ ನಂಬಿಕೆ ಇಡದಂಥ ಪರಿಸ್ಥಿತಿ ತೋರಿಬರುವುದು. ಪ್ರೀತಿಯ ವಿಚಾರದಲ್ಲಿ ಗುಣಾತ್ಮಕ ಬೆಳವಣಿಗೆ ಅನುಭವಕ್ಕೆ ಬಂದೀತು.
ಕುಂಭ
ಕಚೇರಿಯ ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ವಿಷಯದಲ್ಲಿ ಜಾಗ್ರತೆ ಇರಲಿ. ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳ ಬಗ್ಗೆ ನಿಗಾ ಇರಲಿ. ವಿದೇಶಿ ವಸ್ತುಗಳ ಮೇಲೆ ಹೆಚ್ಚಿನ ಹಣ ವ್ಯಯ ಆಗುತ್ತದೆ.
ಮೀನ
ದೇವತಾನುಗ್ರಹ ಸಂಪೂರ್ಣವಾಗಿ ಇರಲಿದೆ. ತೊಂದರೆಗಳನ್ನು ನಿವಾರಿಸಿ, ವೃತ್ತಿರಂಗದಲ್ಲಿ ಉತ್ತಮ ರೀತಿಯಲ್ಲಿ ಮುಂದುವರಿಯಲು ಪೂರಕವಾಗಿರುತ್ತದೆ. ಇಂದಿನಿಂದ ಕ್ರೀಡಾ ಚ
ADVERTISEMENT
ADVERTISEMENT