ನೊಯ್ಡಾ: ನಾಯಕ ಗುಮಾನ್ ಸಿಂಗ್ ಅವರ ಅಮೋಘ ಆಟದ ಬಲದಿಂದ ಗುಜರಾತ್ ಜೈಂಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು 47–28 ರಲ್ಲಿ 19 ಅಂಕಗಳಿಂದ ಮಣಿಸಿತು.

ಇದರೊಂದಿಗೆ ಸರಣಿ ಸೋಲುಗಳ ನಂತರ ಟೂರ್ನಿಯಲ್ಲಿಎರಡನೇ ಜಯ ದಾಖಲಿಸುವಲ್ಲಿ ಜೈಂಟ್ಸ್
ಯಶಸ್ವಿಯಾಯಿತು. ಹಿಂದಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗೆಲುವಿನ ಲಯಕ್ಕೆ ಮರಳಿದ್ದ ಬೆಂಗಾಲ್, ಸ್ಥಿರತೆ ಕಾಯ್ದುಕೊಳ್ಳಲು ವಿಫಲವಾಯಿತು.

ನೊಯ್ಡಾ ಒಳಾಂಗಣ ಕ್ರೀಡಾಂಗಣ
ದಲ್ಲಿ ಬುಧವಾರ ನಡೆದ ಮೊದಲ ಪಂದ್ಯದ ಉಭಯ ಅವಧಿಗಳಲ್ಲಿ ಜೈಂಟ್ಸ್ ತಂಡ ರೇಡಿಂಗ್ ಮತ್ತು ಟ್ಯಾಕಲ್ಗಳಲ್ಲಿ ಮಿಂಚಿತು. ಗುಮಾನ್ ಸಿಂಗ್ 17 ಅಂಕ ಕಲೆಹಾಕಿ ಪಂದ್ಯದ ಗೆಲುವಿನ ರೂವಾರಿಯೆನಿಸಿರು. ಪ್ರತೀಕ್ ದಹಿಯಾ, ಹಿಮಾಂಶು ಮತ್ತು ಜಿತೇಂದರ್ ಯಾದವ್ ತಲಾ 6 ಅಂಕಗಳನ್ನು ಕಲೆಹಾಕಿದರು.

ಬೆಂಗಾಲ್ ತಂಡದ ಪರ ನಿತಿನ್ ಕುಮಾರ್ 11 ಅಂಕ ಗಳಿಸಿದರೆ, ಸುಶೀಲ್ ಕಂಬ್ರೇಕರ್ 5
ಅಂಕ ತಂದರು. ಆದರೆ ಸ್ಟಾರ್ ರೇಡರ್ ಮಣಿಂದರ್ ಸಿಂಗ್ ಮತ್ತು ಫಜಲ್ ಅತ್ರಾಚಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದು ಬೆಂಗಾಲ್ ದುಬಾರಿಯಾಯಿತು.

ಅಗ್ರಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ತಂಡ ಇನ್ನೊಂದು ಪಂದ್ಯದಲ್ಲಿ 37–32 ಪಾಯಿಂಟ್ಗಳಿಂದ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು.

ಗುರುವಾರದ ಪಂದ್ಯಗಳು: ಯು.ಪಿ. ಯೋಧಾಸ್– ತೆಲುಗು ಟೈಟನ್ಸ್ (ರಾತ್ರಿ 8.00); ತಮಿಳ್ ತಲೈವಾಸ್ –ಯು ಮುಂಬಾ (ರಾತ್ರಿ 9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.