ನೊಯ್ಡಾ: ದ್ವಿತೀಯಾರ್ಧದಲ್ಲಿಆಕ್ರಮಣಕಾರಿ ಆಟ ಪ್ರದರ್ಶಿಸಿದ ಯು.ಪಿ. ಯೋಧಾಸ್ ತಂಡ ಪ್ರೊ
ಕಬಡ್ಡಿ ಲೀಗ್ ಪಂದ್ಯದಲ್ಲಿ 16 ಅಂಕಗಳಿಂದ ತಮಿಳ್ ತಲೈವಾಸ್ ತಂಡವನ್ನು ಮಣಿಸಿ
ಟೂರ್ನಿಯಲ್ಲಿ ಐದನೇ ಜಯ ದಾಖಲಿಸಿತು.

ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಯೋಧಾಸ್ 40-24 ಅಂಕಗಳಿಂದ ತಲೈವಾಸ್ ತಂಡವನ್ನು ಸೋಲಿಸಿತು. ವಿರಾಮದ ವೇಳೆ ಸ್ಕೋರ್ 13–13ರಲ್ಲಿ ಸಮನಾಗಿತ್ತು. ಮೊದಲಾರ್ಧದಲ್ಲಿ ಪ್ರಬಲ ಪೈಪೋಟಿ ನೀಡಿದ್ದ ತಲೈವಾಸ್ ವಿರಾಮದ ನಂತರ ನಿಸ್ತೇಜಗೊಂಡಿತು. ಇದರಿಂದ ಏಳನೇ ಸೋಲಿಗೆ ಗುರಿಯಾಗಬೇಕಾಯಿತು.

ಯೋಧಾಸ್ ತಂಡ ಪರ ಭವಾನಿ ರಜಪೂತ್ 10 ಅಂಕ ಗಳಿಸಿದರೆ, ಭರತ್ ಮತ್ತು ಹಿತೇಶ್ ಕ್ರಮವಾಗಿ 5 ಮತ್ತು 6 ಅಂಕಗಳ ಕೊಡುಗೆ ನೀಡಿದರು. ತಲೈವಾಸ್ ಪರ ವಿಶಾಲ್ ಮತ್ತು ನಿತೇಶ್ ಕುಮಾರ್ ತಲಾ 6 ಅಂಕ ಗಳಿಸಿದರು.

₹2.15 ಕೋಟಿ ಪಡೆದು ಲೀಗ್ನಲ್ಲೇ ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗಿದ್ದ ಸಚಿನ್ ಮತ್ತು ತಂಡದ ಇತರ ಪ್ರಮುಖ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದು, ತಲೈವಾಸ್ ಮೇಲಿನ ಒತ್ತಡವನ್ನು ಹೆಚ್ಚಿಸಿತು.

ಶನಿವಾರದ ಪಂದ್ಯಗಳು: ಗುಜರಾತ್ ಜೈಂಟ್ಸ್– ತೆಲುಗು ಟೈಟನ್ಸ್ (ರಾತ್ರಿ 8.00). ಜೈಪುರ ಪಿಂಕ್ ಪ್ಯಾಂಥರ್ಸ್– ಹರಿಯಾಣ ಸ್ಟೀಲರ್ಸ್ (ರಾತ್ರಿ 9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.