ಮಂಗಳೂರು: ರಾಜಸ್ಥಾನದ ಜುಂಜುನು ಜಿಲ್ಲೆಯ ಜೆಜೆಟಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಟೂರ್ನಿಯಲ್ಲಿ ದಕ್ಷಿಣ ಭಾರತದ ವಿವಿಗಳಿಗೆ ಅನ್ಯಾಯ ಮಾಡಲಾಗಿದ್ದು ಕೋಚ್ ಮೇಲೆ ಹಲ್ಲೆ ನಡೆದಿದೆ ಎಂದು ದೂರಲಾಗಿದೆ. ಹಲ್ಲೆ ನಡೆಸಿದ ಮತ್ತು ಗದರಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನ.20ರಂದು ಆರಂಭಗೊಂಡ ಟೂರ್ನಿ 24ರ ವರೆಗೆ ನಡೆಯಲಿದೆ. 16 ತಂಡಗಳು ಪಾಲ್ಗೊಂಡಿರುವ ಟೂರ್ನಿಯಲ್ಲಿ ದಕ್ಷಿಣ ವಲಯದಿಂದ ಮಂಗಳೂರು ವಿವಿ, ಮೈಸೂರು ವಿವಿ, ಚೆನ್ನೈನ ಎಸ್ಆರ್ಎಂ ಮತ್ತು ವೆಲ್ಸ್ ವಿವಿಗಳು ಪಾಲ್ಗೊಳ್ಳುತ್ತಿವೆ. ಕಳೆದ ಬಾರಿಯ ಚಾಂಪಿಯನ್ ಮಂಗಳೂರು ವಿವಿ ಸೇರಿದಂತೆ ಎಲ್ಲ ನಾಲ್ಕೂ ವಿವಿಗಳು ನಾಕೌಟ್ ಹಂತ ಪ್ರವೇಶಿಸದೆ ಹೊರಬಿದ್ದಿವೆ. ‘ರೆಫರಿಗಳು ಉತ್ತರದ, ವಿಶೇಷವಾಗಿ ಆತಿಥೇಯ ವಿವಿ ಪರವಾಗಿ ಏಕಪಕ್ಷೀಯ ತೀರ್ಪು ನೀಡಿರುವುದೇ ದಕ್ಷಿಣದ ತಂಡಗಳ ಸೋಲಿಗೆ ಕಾರಣ’ ಎಂದು ಕೋಚ್ಗಳು ಮತ್ತು ವ್ಯವಸ್ಥಾಪಕರು ದೂರಿದ್ದಾರೆ.

‘ಪಂದ್ಯಗಳ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಿಲ್ಲ. ವಿಡಿಯೊ ಚಿತ್ರೀಕರಣ ಕೂಡ ಇಲ್ಲ. ತೀರ್ಪಿನಲ್ಲಿ ಅನ್ಯಾಯ ಆಗಿದೆ ಎಂದು ದೂರಿದಾಗ ಹಲ್ಲೆಗೂ ಮುಂದಾಗಿದ್ದಾರೆ. ಪಂಜಾಬ್ನ ಗುರು ಕಾಶಿ ವಿವಿ ಎದುರಿನ ಪಂದ್ಯದಲ್ಲಿ ಅನ್ಯಾಯ ಪ್ರಶ್ನಿಸಿದ್ದಕ್ಕೆ ಎಸ್ಆರ್ಎಂ ಕೋಚ್ ಮುನಿಯಪ್ಪನ್ ಅವರ ಮೇಲೆ ಹಲ್ಲೆ ಮಾಡಲಾಗಿದೆ’ ಎಂದು ಮಂಗಳೂರು ತಂಡದ ಜೊತೆ ಇರುವ ಕೋಚ್ ಸತೀಶ್ ನಾಯಕ ತಿಳಿಸಿದರು.

‘ಮಂಗಳೂರು ವಿವಿ ತಂಡ ಮೊದಲ ಪಂದ್ಯದಲ್ಲಿ ಪಟಿಯಾಲದ ಪಂಜಾಬಿ ವಿವಿ ವಿರುದ್ಧ 33-35ರಲ್ಲಿ ಸೋತಿತ್ತು. ಎರಡನೇ ಪಂದ್ಯದಲ್ಲಿ ಜೆಜೆಟಿಗೆ 32–41ರಲ್ಲಿ ಮಣಿದಿತ್ತು. ಮೈಸೂರು ಮತ್ತು ವೆಲ್ಸ್ ವಿವಿ ಕೂಡ ತಲಾ ಎರಡು ಪಂದ್ಯಗಳನ್ನು ಸೋತಿದೆ. ದಕ್ಷಿಣದ ತಂಡಗಳು ಗೆಲ್ಲುವ ಸಾಧ್ಯತೆಗಳು ಕಂಡಾಗಲೆಲ್ಲ ಎದುರಾಳಿಗಳಿಗೆ ಕಣ್ಣುಮುಚ್ಚಿ ಪಾಯಿಂಟ್ಗಳನ್ನು ಕೊಡಲಾಗಿದೆ’ ಎಂದು ಸತೀಶ್ ನಾಯಕ ದೂರಿದರು.

ಟೂರ್ನಿಯ ಆರಂಭದಿಂದಲೇ ರೆಫರಿಗಳು ಪೂರ್ವಗ್ರಹಪೀಡಿತರಂತೆ ವರ್ತಿಸಿದ್ದಾರೆ ಎಂದು ಎಸ್ಆರ್ಎಂ ವಿವಿ ವ್ಯವಸ್ಥಾಪಕ ಸುರೇಶ್ಚಂದ್ರ ಬಾಬು ದೂರಿದ್ದಾರೆ.

ಜೆಜೆಟಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರ ಅಭಿಪ್ರಾಯ ಕೇಳಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.