ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕೆಲವು ಸ್ಟ್ಯಾಂಡ್ಗಳಿಗೆ ಶೀಘ್ರದಲ್ಲಿಯೇ ಕರ್ನಾಟಕದ ದಿಗ್ಗಜ ಕ್ರಿಕೆಟಿಗರ ಹೆಸರುಗಳನ್ನು ನೀಡಿ, ಗೌರವಿಸುವತ್ತ ರಾಜ್ಯ ಕ್ರಿಕೆಟ್ ಸಂಸ್ಥೆಯು ಒಲವು ತೋರಿದೆ ಎನ್ನಲಾಗಿದೆ.

ಇಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದು (1974ರ ನವೆಂಬರ್ 22 ರಿಂದ 27) ಶುಕ್ರವಾರಕ್ಕೆ 50 ವರ್ಷ ತುಂಬಿದೆ. ಈ ಸಂದರ್ಭದಲ್ಲಿ; ಭಾರತ ತಂಡವನ್ನು ಪ್ರತಿನಿಧಿಸಿ ಅಮೋಘ ಸಾಧನೆ ಮಾಡಿರುವ ರಾಜ್ಯ ದಿಗ್ಗಜ ಆಟಗಾರರ ಹೆಸರುಗಳನ್ನು ಸ್ಟ್ಯಾಂಡ್ಗಳಿಗೆ ಇಡುವ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಆ ಟೆಸ್ಟ್ ಪಂದ್ಯದಲ್ಲಿಯೂ ಆಡಿದ್ದ ಎರ್ರಪಳ್ಳಿ ಪ್ರಸನ್ನ, ಜಿ.ಆರ್. ವಿಶ್ವನಾಥ್, ಬಿ.ಎಸ್. ಚಂದ್ರಶೇಖರ್ ಮತ್ತು ಬ್ರಿಜೇಶ್ ಪಟೇಲ್ ಅವರ ಹೆಸರುಗಳನ್ನು ಕೆಲವು ಸ್ಟ್ಯಾಂಡ್ಗಳಿಗೆ ನಾಮಕರಣ ಮಾಡಬೇಕು. ಅವರಲ್ಲದೇ ಸೈಯದ್ ಕಿರ್ಮಾನಿ, ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಅವರ ಹೆಸರುಗಳನ್ನು ಇಡಲು ಕೂಡ ಈಚೆಗೆ ನಡೆದ ಸಭೆಯಲ್ಲಿ ಚರ್ಚೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಭಾರತದ ಕ್ರಿಕೆಟ್ ಬೆಳವಣಿಗೆ ಮತ್ತು ಕರ್ನಾಟಕಕ್ಕೆ ಕ್ರಿಕೆಟ್ ಪರಂಪರೆಯನ್ನು ಕಟ್ಟಿಕೊಟ್ಟ ಖ್ಯಾತನಾಮ ಆಟಗಾರರಿಗೆ ಗೌರವ ಸಲ್ಲಿಸಲು ಈ ಕುರಿತು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಚರ್ಚೆಗಳೂ ನಡೆದಿವೆ. ಇನ್ನೂ ಅಂತಿಮ ನಿರ್ಧಾರವಾಗಿಲ್ಲ’ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಹೋದ ಮಾರ್ಚ್ನಲ್ಲಿ ಇತಿಹಾಸಕಾರ ಮತ್ತು ಲೇಖಕ ರಾಮಚಂದ್ರ ಗುಹಾ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ದ್ವಾರಗಳು ಅಥವಾ ಸ್ಟ್ಯಾಂಡ್ಗಳಿಗೆ ರಾಜ್ಯದ ಖ್ಯಾತನಾಮ ಕ್ರಿಕೆಟಿಗರ ಹೆಸರುಗಳನ್ನು ಇಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಆ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರೂ ಕೆಎಸ್ಸಿಎ ಅಧ್ಯಕ್ಷರಿಗೆ ಪತ್ರ ಬರೆದು, ರಾಜ್ಯಕ್ಕೆ ಕೀರ್ತಿ ತಂದ ಮಹನೀಯ ಕ್ರಿಕೆಟಿಗರ ಹೆಸರುಗಳನ್ನು ಸ್ಟ್ಯಾಂಡ್ಗಳಿಗೆ ಇಡಬೇಕು ಎಂದು ಮನವಿ ಮಾಡಿದ್ದರು.

‘ರಾಮಚಂದ್ರ ಗುಹಾ ಅವರು ಮಾಡಿರುವ ಮನವಿಯಲ್ಲಿ ಶ್ರೇಷ್ಠ ಅಂಶಗಳಿವೆ. ಜಿ.ಆರ್. ವಿಶ್ವನಾಥ್, ಇ.ಎ.ಎಸ್. ಪ್ರಸನ್ನ ಹಾಗೂ ಬಿ.ಎಸ್. ಚಂದ್ರಶೇಖರ್ ಅವರ ಹೆಸರುಗಳನ್ನು ಸ್ಟ್ಯಾಂಡ್ಗಳಿಗೆ ನಾಮಕರಣ ಮಾಡಬೇಕೆಂದು ಮನವಿ ಮಾಡುತ್ತೇನೆ. ಇದರಿಂದ ಮುಂದಿನ ಪೀಳಿಗೆಯ ಆಟಗಾರರಿಗೆ ಪ್ರೇರಣೆ ಲಭಿಸುತ್ತದೆ’ ಎಂದು ಸಿದ್ಧರಾಮಯ್ಯ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

‘1974ರಲ್ಲಿ ಕರ್ನಾಟಕ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿ ಜಯಿಸಿತ್ತು. ಸತತ 15 ಬಾರಿ ರಣಜಿ ಚಾಂಪಿಯನ್ ಆಗಿದ್ದ ಮುಂಬೈ ತಂಡದ ಪಾರಮ್ಯಕ್ಕೆ ಕರ್ನಾಟಕ ತಡೆಯೊಡ್ಡಿದ್ದು ಐತಿಹಾಸಿಕ ಸಾಧನೆ. ಆ ವಿಜಯಕ್ಕೆ ಈಗ 50 ವರ್ಷಗಳು ತುಂಬಿರುವ ಸಂಭ್ರಮ. ಶ್ರೇಷ್ಠ ಬ್ಯಾಟರ್ ವಿಶ್ವನಾಥ್, ಸ್ಪಿನ್ ಅವಳಿಗಳಾದ ಪ್ರಸನ್ನ ಮತ್ತು ಚಂದ್ರಶೇಖರ್ ರಾಜ್ಯ ಮತ್ತು ದೇಶದ ಕ್ರಿಕೆಟ್ಗೆ ನೀಡಿರುವ ಕೊಡುಗೆ ಅಮೋಘವಾದದ್ದು. ಅವರ ಹೆಸರುಗಳನ್ನು ಸ್ಟ್ಯಾಂಡ್ಗಳಿಗೆ ಇಡಲು ಕ್ರಮ ಕೈಗೊಳ್ಳಬೇಕು’ ಎಂದು ಗುಹಾ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.