ಪರ್ತ್: ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಕೆ.ಎಲ್. ರಾಹುಲ್ ಅವರನ್ನು ಯುಡಿಆರ್ಎಸ್ ನಲ್ಲಿ ಔಟ್ ಎಂದು ತೀರ್ಪು ನೀಡಿದ ಮೂರನೇ ಅಂಪೈರ್ ರಿಚರ್ಡ್ ಇಲಿಂಗ್ವರ್ಥ್ ಈಗ ಕ್ರಿಕೆಟ್ ವಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶುಕ್ರವಾರ ಬೆಳಿಗ್ಗೆಯ ಅವಧಿಯಲ್ಲಿ ರಾಹುಲ್ ಅವರೊಬ್ಬರೇ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ಆತಿಥೇಯ ವೇಗಿಗಳನ್ನು ದಿಟ್ಟವಾಗಿ ಎದುರಿಸಿದವರು. ಅಗ್ರಕ್ರಮಾಂಕದ ಮೂವರು ಬ್ಯಾಟರ್ಗಳು ಬೇಗನೆ ಔಟಾದರೂ ರಾಹುಲ್ ತಾಳ್ಮೆಯಿಂದ ಆಡಿದ್ದರು. ನಾಲ್ಕನೇ ವಿಕೆಟ್ಗೆ ರಿಷಭ್ ಪಂತ್ ಅವರೊಂದಿಗೆ ಜೊತೆಯಾಟ ಬೆಳಸುವ ಹಾದಿಯಲ್ಲಿದ್ದರು.

ಆದರೆ 23ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ ಹಾಕಿದೆ ಎಸೆತವು ಆಫ್ಸ್ಟಂಪ್ ಪಕ್ಕದಲ್ಲಿ ಹಾದು ಹೋಗುತ್ತಿತ್ತು. ರಾಹುಲ್ ಕಟ್ ಮಾಡಲು ಪ್ರಯತ್ನಿಸಿದರು. ಚೆಂಡು ಬ್ಯಾಟಿನ ತೀರಾ ಸಮೀಪದಿಂದ ಹಾದುಹೋಯಿತು. ಅಲ್ಲದೇ ಸಣ್ಣ ಶಬ್ದವೂ ಕೇಳಿಬಂದಿತ್ತು. ಆಸ್ಟ್ರೇಲಿಯಾದವರ ಜೋರಾದ ಮನವಿಗೆ ಆನ್ಫೀಲ್ಡ್ ಅಂಪೈರ್ ರಿಚರ್ಡ್ ಕೆಟಲ್ಬರೊ ಪ್ರತಿಕ್ರಿಯಿಸಲಿಲ್ಲ. ಆತಿಥೇಯ ನಾಯಕ ಪ್ಯಾಟ್ ಕಮಿನ್ಸ್ ಡಿಆರ್ಎಸ್ ಮೊರೆ ಹೋದರು.

ಮೈದಾನದಲ್ಲಿದ್ದ ದೊಡ್ಡ ಸ್ಕ್ರೀನ್ನಲ್ಲಿ ಚೆಂಡು ಬ್ಯಾಟ್ನಿಂದ ಕೂದಲೆಳೆಯ ಅಂತರದಲ್ಲಿ ಹಾದು ಹೋಗುವ ಹೊತ್ತಿನಲ್ಲಿ ರಾಹುಲ್ ಅವರ ಬ್ಯಾಟ್ ಪ್ಯಾಡ್ಗೆ ಉಜ್ಜಿದ ಶಬ್ದ ಉತ್ಪತ್ತಿಯಾಗಿತ್ತು. ಅದು ಸ್ನಿಕೊ ಮೀಟರ್ನಲ್ಲಿಯೂ ಕಂಡಿತ್ತು. ಇದರಿಂದ ನಿರಾಳವಾದ ರಾಹುಲ್ ಮರಳಿ ಗಾರ್ಡ್ ತೆಗೆದುಕೊಳ್ಳಲು ಸಿದ್ಧತೆ ನಡೆಸಿದರು.

ಆದರೆ ಬ್ರಾಡಕಾಸ್ಟಿಂಗ್ ವಿಭಾಗದವರು ನೀಡಿದ ವಿವಿಧ ಆಯಾಮಗಳ ವಿಡಿಯೊಗಳನ್ನು ಅಂಪೈರ್ ಪರಿಶೀಲನೆ ನಡೆಸಿದರು. ಆದರೆ ನಿಖರವಾಗಿ ಗುರುತಿಸಬಹುದಾದಂತಹ ಆಯಾಮದ ವಿಡಿಯೊ ಕಾಣಲಿಲ್ಲ. ಇದರಿಂದಾಗಿ ಇಲಿಂಗ್ವರ್ಥ್ ಅವರು ಔಟ್ ನೀಡಿದರು. ರಾಹುಲ್ ಅವರು ಇದರಿಂದ ಅಸಮಾಧಾನಗೊಂಡು ಗೊಣಗಾಡುತ್ತಲೇ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. 74 ಎಸೆತಗಳಲ್ಲಿ 26 ರನ್ ಗಳಿಸಿದ ಅವರ ಇನಿಂಗ್ಸ್ಗೆ ತೆರೆಬಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಆಕ್ರೋಶ ಭುಗಿಲೆದ್ದಿತು.

‘ಅಂಪೈರ್ ಸರಿಯಾದ ಆಯಾಮವಿರುವ ವಿಡಿಯೊ ಕೇಳಿರಬಹುದು. ಆದರೆ ಅದನ್ನು ಕೊಟ್ಟಿಲ್ಲವೆಂದು ನನಗನಿಸುತ್ತದೆ. ಆದರೆ ಮೂರನೇ ಅಂಪೈರ್ ತಮಗೆ ಖಚಿತವಿಲ್ಲದಿದ್ದರೆ, ಫೀಲ್ಡ್ ಅಂಪೈರ್ ತೀರ್ಪನ್ನು ಅನೂರ್ಜಿತಗೊಳಿಸಬಾರದಿತ್ತು. ತಂತ್ರಜ್ಞಾನವನ್ನು ಕೆಟ್ಟದಾಗಿ ಬಳಕೆ ಮಾಡಿಕೊಂಡ ಪರಿಣಾಮ ಇದು. ಶಿಷ್ಟಾಚಾರವನ್ನೂ ಸರಿಯಾಗಿ ಪಾಲಿಸಿಲ್ಲ‘ ಎಂದು ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಎಕ್ಸ್ನಲ್ಲಿ ಬರೆದಿದ್ದಾರೆ.

ಸೆವೆನ್ ಕ್ರಿಕೆಟ್ ವಾಹಿನಿಯಲ್ಲಿ ಕಾಮೆಂಟೆಟರ್ ಆಗಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.

‘ಚೆಂಡು ಚಲಿಸಿ ಹೋಗುವಾಗ ರಾಹುಲ್ ಅವರ ಬ್ಯಾಟ್ ಮತ್ತು ಪ್ಯಾಡ್ ಸಮೀಪದಲ್ಲಿರಲಿಲ್ಲ. ನಂತರದಲ್ಲಿ ಬ್ಯಾಟ್ ಪ್ಯಾಡ್ಗೆ ತಗುಲಿತು. ಚೆಂಡು ಬ್ಯಾಟ್ ಅಂಚಿನ ಅಲ್ಪ ಅಂತರದಲ್ಲಿದಾಟಿ ಹೋಯಿತು. ಸ್ನೀಕೊ ಮೀಟರ್ ಈ ಸದ್ದು ಗ್ರಹಿಸಿತೇ? ಬ್ಯಾಟ್ ಹೊರ ಅಂಚು ತಗುಲಿರಬಹುದೇಂದು ಸ್ನಿಕೊ ನೋಡಿದಾಗ ಅನಿಸಿತ್ತು. ಆದರೆ ಅದು ಹಾಗಾಗಿರಲಿಲ್ಲ’ ಎಂದಿದ್ದಾರೆ.

'ಇದೇಂತಾ ತೀರ್ಪು. ಇದೇನು ತಮಾಷೆನಾ?’ ಎಂದು ಕರ್ನಾಟಕದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಎಕ್ಸ್ನಲ್ಲಿ ಖಾರವಾದ ಸಂದೇಶ ಹಾಕಿದ್ದಾರೆ.

ಹುಬ್ಬಳ್ಳಿ ಪೊಲೀಸರ ರಸ್ತೆ ಸುರಕ್ಷತೆ ಜಾಗೃತಿ

ರಾಹುಲ್ ಔಟಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರವಿರೋಧ ಚರ್ಚೆಗಳು ಜೋರಾಗಿ ನಡೆದಿವೆ. ಆದರೆ ಈ ಸಂದರ್ಭವನ್ನು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್ ರಸ್ತೆ ಸುರಕ್ಷತಾ ಜಾಗೃತಿಗಾಗಿ ಬಳಸಿಕೊಂಡಿದೆ. ‘ನಿಮಗೆ ಬ್ಯಾಟ್ ಮತ್ತು ಚೆಂಡಿನ ನಡುವಣ ಅಂತರ ಕಂಡಿಲ್ಲವೇ..! ‘ಹಾಗಿದ್ದರೆ ದಯವಿಟ್ಟು ಇವತ್ತು ರಾತ್ರಿ ರಸ್ತೆ ಮೇಲೆ ವಾಹನ ಚಾಲನೆ ಮಾಡಬೇಡಿ..‘ ಎಂಬ ಸಂದೇಶವನ್ನು ಇಲಾಖೆಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.