ದಿನ ಭವಿಷ್ಯ | ಈ ರಾಶಿಯ ಕಥೆ ಬರಹಗಾರರಿಗೆ ಶುಭ ದಿನ
Published 13 ನವೆಂಬರ್ 2024, 23:49 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬುದ್ಧಿವಂತಿಕೆಯಿಂದ ಮತ್ತು ವಾಕ್ಚಾತುರ್ಯದಿಂದ ಹಲವು ಕಲಹಗಳು ದೂರಾಗಲಿವೆ. ಕಲಾವಿದರಿಗೆ ಅಭ್ಯಾಸದ ಫಲದಿಂದ ಅವಕಾಶಗಳು ಲಭ್ಯವಾಗುತ್ತವೆ. ವಿಮೆಯಿಂದ ಲಾಭ ಪಡೆದುಕೊಳ್ಳುವಿರಿ.
13 ನವೆಂಬರ್ 2024, 23:49 IST
ವೃಷಭ
ದುಡುಕು ಸ್ವಭಾವದಿಂದ ಅಣ್ಣ ತಮ್ಮಂದಿರ ಬಾಂಧವ್ಯಕ್ಕೆ ಹಾನಿ, ಎಚ್ಚರವಿರಲಿ. ವ್ಯವಹಾರಗಳನ್ನು ನೇರ ನಡೆ ನುಡಿಯಿರುವವರೊಂದಿಗೆ ಮಾತ್ರ ಮುಂದುವರಿಸಿಕೊಂಡು ಹೋಗುವ ತೀರ್ಮಾನ ತೆಗೆದುಕೊಳ್ಳುವಂತಾಗಲಿದೆ.
13 ನವೆಂಬರ್ 2024, 23:49 IST
ಮಿಥುನ
ರಾಜಕೀಯ ರಂಗಕ್ಕೆ ಸಂಬಂಧಿಸಿದಂತೆ ಸ್ಫರ್ಧಾತ್ಮಕ ವಾತಾವರಣ ಇರುವುದು. ಅವಶ್ಯಕತೆ ಇರುವ ಹಾಗೂ ನಿಮಗೆ ಇಷ್ಟವಾಗುವ ವಸ್ತುಗಳನ್ನು ಖರೀದಿಸುವ ಯೋಗವಿದೆ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ.
13 ನವೆಂಬರ್ 2024, 23:49 IST
ಕರ್ಕಾಟಕ
ಅತಿ ಅವಸರ ಮತ್ತು ಉದ್ವೇಗ ಇವೆರಡೂ ತಲೆ ತಗ್ಗಿಸುವಂತೆ ಮಾಡುತ್ತದೆ. ಹಿರಿಯರ ಅನುಗ್ರಹದಿಂದ ಇಷ್ಟಸಿದ್ಧಿಯಾಗಿ ಕ್ರಯ-ವಿಕ್ರಯದಲ್ಲಿ ಲಾಭ ತರಲಿದೆ. ಗುರುಗಳ ಸ್ಮರಣೆ ಚೈತನ್ಯ ನೀಡುವುದು.
13 ನವೆಂಬರ್ 2024, 23:49 IST
ಸಿಂಹ
ವೃತ್ತಿರಂಗದಲ್ಲಿ ಅನವಶ್ಯಕವಾಗಿ ಇತರರ ಕೋಪಕ್ಕೆ ಗುರಿಯಾಗುವ ಸನ್ನಿವೇಶ ಇರುವುದು. ಅಧಿಕಾರಿಗಳಿಗೆ ಸಹೋದ್ಯೋಗಿಗಳಿಂದ ನಿರೀಕ್ಷೆಗೆ ಮೀರಿದ ಸಹಾಯ ದೊರೆಯುವುದು. ಉದಯೋನ್ಮುಖ ತಾರೆಯರಿಗೆ ಲಾಭ.
13 ನವೆಂಬರ್ 2024, 23:49 IST
ಕನ್ಯಾ
ದಕ್ಷತೆಗೆ ಅಡ್ಡಿಯಾಗುವಂಥ ಘಟನೆಗಳು ನಡೆಯಬಹುದು. ಅಂಥ ಅವಕಾಶಗಳನ್ನು ನೀಡಬೇಡಿ. ಚಿತ್ರೀಕರಣ ನಡೆಸುವ ವೃತ್ತಿಯವರಿಗೆ ಅನುಭವದ ಕೊರತೆ ಕಾಣುವುದು.
13 ನವೆಂಬರ್ 2024, 23:49 IST
ತುಲಾ
ಸಾಮಾಜಿಕವಾಗಿ ಜನೋಪಕಾರದಿಂದ ಪ್ರಶಂಸೆ ಲಭಿಸಲಿದೆ. ಕೆಲಸ ಕಾರ್ಯಗಳ ಬಗ್ಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ. ಯಶಸ್ಸು ನಿಮ್ಮದಾಗಿರುತ್ತದೆ.
13 ನವೆಂಬರ್ 2024, 23:49 IST
ವೃಶ್ಚಿಕ
ಹೊಸ ವ್ಯಾಪಾರ ಆರಂಭಿಸುವ ಬಗ್ಗೆ ತಿಳಿದವರೊಂದಿಗೆ ಮತ್ತು ಮನೆಯವರೊಂದಿಗೆ ಚರ್ಚಿಸಿದ ನಂತರ ತೀರ್ಮಾನಕ್ಕೆ ಬರುವುದು ಉತ್ತಮ. ಔಷಧ ಪದಾರ್ಥಗಳ ಮಾರಾಟದಿಂದ ಲಾಭ ಪಡೆಯುವಿರಿ.
13 ನವೆಂಬರ್ 2024, 23:49 IST
ಧನು
ಬರವಣಿಗೆ ಮತ್ತು ಮುದ್ರಣ ಕೆಲಸಗಳನ್ನು ಮಾಡುವವರಿಗೆ ವರಮಾನ ತರಲಿದೆ. ಕಥೆ ಬರಹಗಾರರಿಗೆ ಶುಭ ದಿನ. ಸುವರ್ಣ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಗಮನಹರಿಸಿ.
13 ನವೆಂಬರ್ 2024, 23:49 IST
ಮಕರ
ಭಯದ ವಾತಾವರಣವು ಕೆಲಸಕ್ಕೆ ಅಡ್ಡಿಯನ್ನು ಉಂಟುಮಾಡುವುದು. ಹಣದ ಮೇಲಿನ ದುರಾಸೆಗಾಗಿ ಕೆಲಸವನ್ನೂ ಮಾಡಬೇಡಿ. ಸಾಧನೆ ಅಭಿನಂದನೆಗೆ ಪಾತ್ರವಾಗಲಿವೆ.
13 ನವೆಂಬರ್ 2024, 23:49 IST
ಕುಂಭ
ರಾಜಕೀಯ ವ್ಯಕ್ತಿಗಳಿಗೆ ವಿವಿಧ ವಿಚಾರಗಳಲ್ಲಿ ಪ್ರಗತಿ ಇದ್ದು, ಸಾಮಾಜಿಕವಾಗಿ ಸ್ಥಾನಮಾನ ಹಾಗೂ ಗೌರವ ಪ್ರಾಪ್ತಿ. ಬಂಡವಾಳವನ್ನು ತೊಡಗಿಸುವ ವಿಚಾರ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು.
13 ನವೆಂಬರ್ 2024, 23:49 IST
ಮೀನ
ಹೊಸ ಉದ್ಯಮ ಅಥವಾ ವ್ಯಾಪಾರ ಪ್ರಾರಂಭಿಸಲು ಆಲೋಚನೆಗಳು ಬರಲಿವೆ. ಆದರೆ, ನೀವು ಯೋಚಿಸಿದಷ್ಟು ಸುಲಭವಾಗಿರುವುದಿಲ್ಲ. ನಿದ್ರಾಹೀನತೆಯಂಥ ಸಮಸ್ಯೆಗೆ ಕೆಟ್ಟ ಯೋಚನೆಗಳೇ ಮುಖ್ಯ ಕಾರಣವಾಗಿರುತ್ತದೆ.
13 ನವೆಂಬರ್ 2024, 23:49 IST