ಪ್ರಕಟಿತ ಸಂದರ್ಶನಗಳ ಸಂಗ್ರಹ ಕೃತಿ ಇದಾಗಿದೆ. ತಿರುಮಲೇಶ್ ಅವರ ಕಾವ್ಯ, ಕಥೆ, ಅವರ ಬದುಕು, ಬರೆಹಗಳನ್ನು ಓದುಗರ ಮುಂದೆ ಇಡುತ್ತಲೇ ಕಾಲನ ಮಡಿಲಲ್ಲಿ ಕಣ್ಮರೆಯಾದಂತಿರುವ ಹಲವಾರು ಕವಿತೆ ಮತ್ತು ಪುಸ್ತಕಗಳ ಮರು ಓದಿಗೆ ಈ ಕೃತಿಯು ಪ್ರೇರಣೆ ನೀಡುತ್ತದೆ. ತಿರುಮಲೇಶ್ ಅವರ ಸಾಹಿತ್ಯ, ಭಾಷೆ, ವಿಷಯವಸ್ತುಗಳು, ಅವರ ತಿರುಗಾಟ ಜೊತೆಗೆ ವೈಯಕ್ತಿಕ ಬದುಕು ಇವೆಲ್ಲವನ್ನೂ ಹದವಾಗಿ ಹಿಡಿದಿಟ್ಟಿರುವ ಆರೇಳು ಸಂದರ್ಶನಗಳು ಇಲ್ಲಿವೆ. ಪ್ರತಿ ಸಂದರ್ಶನದಲ್ಲಿಯೂ ಭಾಷೆಯನ್ನು ಬಳಸಿಕೊಳ್ಳುವ ಕುರಿತ ಜಿಜ್ಞಾಸೆ ಗಮನಸೆಳೆಯುತ್ತದೆ. ಓದದ ಕವಿತೆಗಳು, ಅನುವಾದಗಳು ಕಥನಕುತೂಹಲವನ್ನು ಕೆರಳಿಸುತ್ತವೆ. ಪ್ರಶಸ್ತಿ ವಾಪಸಾತಿ ಘಟನೆ, ಪ್ರತಿ ಊರಿನಲ್ಲಿ ತಳ ಊರುವಾಗಿನ ಅತಂಕ, ತಾಯ್ನೆಲದಿಂದ ದೂರ ಇರುವಾಗ ತಾಯ್ನೆಲದ ಸೆಳೆತ, ಎಳೆತ, ಅನ್ಯ ಭಾಷೆ, ಸಂಸ್ಕೃತಿಯನ್ನು ಕನ್ನಡಕ್ಕೆ ತರುವ, ಪರಿಚಯಿಸಿದ ತಂತ್ರ ಇವೆಲ್ಲ ತಿರುಮಲೇಶ್ ಅವರ ಸಂದರ್ಶನ ಮಾತ್ರವಾಗದೇ ಅವರ ಬದುಕಿನ ದರ್ಶನವನ್ನು ಮಾಡಿಸುತ್ತವೆ.

ಮೂಲ ಸಂದರ್ಶನಗಳನ್ನು ಹಾಗೆಯೇ ಸಂಕಲನಕ್ಕೆ ಬಳಸಿರುವುದರಿಂದ ಹಲವಾರು ಕಡೆ ತಿರುಮಲೇಶ್ ಅವರ ಬಾಲ್ಯ, ಊರು, ವಿದ್ಯಾಭ್ಯಾಸದ ವಿಷಯಗಳು ಪುನರಾವರ್ತನೆ ಆಗುತ್ತವೆ. ಆದರೆ ಇವು ಮುಂದಿನ ಪ್ರಶ್ನೆಗಳಿಗೆ ಪೂರಕ ಆಗಿರುವುದರಿಂದ, ಅಲ್ಲಿ ಉಳಿಸಿಕೊಳ್ಳುವುದು ಅನಿವಾರ್ಯವಾಗಿಯೂ ಗೋಚರಿಸುತ್ತವೆ.

ಬದ್ಧತೆ ಎನ್ನುವುದು ಬಂಧನ ಸಂ: ಎಂ.ಎಸ್. ಶ್ರೀರಾಮ್ ಪ್ರ: ಬಹುವಚನ ಸಂ: 9035220992

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.