ನಿನ್ನೆ ಕೂತೆದ್ದು ಹೋದ ನೂರಾರು
ಜೀವಗಳ ನಿಟ್ಟುಸಿರು
ಮುಂಜಾನೆ ಹತ್ತಿದ ಬಸ್ನ ಖಾಲಿ ಸೀಟುಗಳಲ್ಲಿ
ಕಿವಿಗಪ್ಪಳಿಸುತಿದೆ

ಅಮ್ಮನ ಕೊರಳಿಗೆ ಜೋತುಬಿದ್ದ ಕಂದನ ರಚ್ಚೆ
ಕಿಟಕಿಯಾಚೆಯ ಐಸು ಕ್ರೀಮಿಗೆ ,
ದೂರ ಮರದ ಮರೆಗೆ ನಿಂತು ಇವಳ ಕಳಿಸಿ
ಕೈ ಬೀಸಿ ಹೋದ ಹುಡುಗನ
ಕಣ್ಣ ಹಸಿ ಹಸಿವು ಹೊತ್ತ ಹುಡುಗಿಯ ವಿಷಾದಗಾಥೆ

ಮಗಳ ಮನೆಗೆ ಹೋಗಿ ಕೂತ ಅಜ್ಜಿಯ
ಕರೆತರಲು ಹೊರಟ ಮೂರು ಕಾಲಿನ , ಒಂದು ಕಣ್ಣಿಗೆ
ಹಸಿರು ಪಟ್ಟಿ ಕಟ್ಟಿ ಕೊಂಡು ಕಂಡಕ್ಟರನ ಭಯಕೆ ಬೀಡಿ ಹೊತ್ತಿಸದೇ
ಚಡಪಡಿಸೋ ಮುದುಕ

ಮುಂದಿನ ನಿಲ್ದಾಣದಲ್ಲಿ ಅವಳು ಹತ್ತಿಯೇ
ಹತ್ತುತ್ತಾಳೆಂದು ಏನೂ ಬರೆಯದ
ಎಲ್ಲಾ ಬರೆದಂತಿರುವ ಹೊಟ್ಟೆ ಒಳಗೆ ಸಿಕ್ಕಿಸಿ ಒಂದು ಮೂಲೆ ಮಡಚಿದ ಕಲಬೆರಕೆ ನೋಟ್ಸ್ ಒಂದನು ಪಕ್ಕದ
ಸೀಟಿಗೆ ಹಾಕಿ ಕಾದ ನಡುಗಾಲದ ಪ್ರೇಮಿ......ಹೀಗೆ

ಯಾರ್ಯಾರೋ ನಿನ್ನೆ ಇದ್ದರು
ಪಾಪ ಈಗಿಲ್ಲ
ಬಸ್ ಓಡುತ್ತಿದೆ ಖಾಲಿ ಸೀಟುಗಳ ಮೌನ ಮೆರವಣಿಗೆ
ತಾತ್ಕಾಲಿಕ ಅಷ್ಟೇ;
ಜೀವನ ನಡೆದಂತೆ ಏನೋ ತುಂಬಿ , ಏನೋ ಕಳೆದುಕೊಂಡು
ಮತ್ತೆ
ನಾಳೆ ನನ್ನದೆಂಬಂತೆ ಒಂದೊಂದೇ ಸೀಟು ಅಲ್ಲಲ್ಲಿ
ಭರ್ತಿ !

ದಾರಿ ನೋಡುವ ಚಾಲಕನಿಗೆ ಬೆನ್ನ ಹಿಂದಿನ ಸೀಟುಗಳ ಕಥೆ ಗೊತ್ತಿಲ್ಲ ; ಕನ್ನಡಿಯಲ್ಲಿ ಕಂಡದ್ದಷ್ಟೇ ಅವನ ದುನಿಯಾ
ಟಿಕೇಟು ಹರಿಯುವ ಕಂಡಕ್ಟರನಿಗೆ
ಹತ್ತುವ ಇಳಿಯುವ ಲೆಕ್ಕ
ಮಾತ್ರ ...ಹಣದ್ದಿಷ್ಟು, ಕಾರ್ಡಿನದಿಷ್ಟು!

ಖಾಲಿ ಸೀಟುಗಳು ಬದುಕು ನಡೆ ನಡೆದಂತೆ ಏನೋ ಸಿಕ್ಕುವ , ಮತ್ತೇನೋ ಕಳೆದುಕೊಳ್ಳುವ
ಹಾಗೆ ಆಗಾಗ ಭರ್ತಿ ಮತ್ತೆಲ್ಲೋ ಖಾಲಿ!

ನಿನ್ನೆ ಅಜ್ಜ ಕೂತ ಸೀಟಿಗೆ ಇಂದು ಮಗನ ಆಸ್ಪತ್ರೆಗೆ
ಸೇರಿಸಿ ಹಣ ಹೊಂದಿಸುವ ಚಿಂತೆಗೆ ಬಿದ್ದ ಹಸಿರು ಟವಲು ಹೊದ್ದ
ಅಪ್ಪ ಕೂತಿದ್ದಾನೆ

ಹುಡುಗಿಯ ಜಾಗಕ್ಕೆ ದೇವರ ಪುಟ್ಟಿ ಹೊತ್ತ
' ಅಮ್ಮ' ಅರಿಶಿನ ಮೆತ್ತಿದ ಆಧಾರ ಕಾರ್ಡಿನೊಂದಿಗೆ ಚಿಲ್ಲರೆ ಎಣಿಸುವಲ್ಲಿ ಮಗ್ನ

ಇಲ್ಲಿ ಇಂದು ನಮ್ಮದು
ನಾಳೆ ಮತ್ಯಾರದೋ

ಸೀಟೂ ಮತ್ತು ಬದುಕು !

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.