ಯಾರದೋ
ಪರಿಚಿತ ದನಿ ಕರೆದಂತಾಗಿ
ಮಗ್ಗುಲು
ಬದಲಿಸಿ ಎದ್ದರೆ
ಹೊರಗೆ ನಕ್ಷತ್ರಗಳ ಹೊಳಪು
ರಾತ್ರಿ ಬೆಂದ ಬಿರಿಯಾನಿ
ಸಾಲದೇ
ಹುರಿದುಪ್ಪು ಹಾಕಿದ ಬಾದಾಮಿ ಗೋಡಂಬಿ
ಒಳಗಿಳಿದು
ನಾಲ್ಕೇ ನಾಲ್ಕು
ರಖಾತು
ನಿಂತು ಬಗ್ಗಿ ಕುಳಿತು
ಎಡಕ್ಕೂ ಬಲಕ್ಕೂ ಕತ್ತು ಹೊರಳಿಸಿ
ಅಂಗೈ ಹೊಸೆದು
ಮುಖಕ್ಕೊರೆಸಿದರೆ ಅಲ್ಲಿ ಅದೆಂಥದೋ ತಣ್ಣಗೆ ತೀಡಿತು
ಆಕಾಶದಗಲಕ್ಕು
ಬಿತ್ತಿದ ತಂಪು ಕಾಡಿತು
ಚಂದ್ರ ತಾರೆ ನಕ್ಕವು!

ಆಗೀಗ
ಚೌಕಾಸಿ ಬಿಸಿಲು ಕಾಲೂರಿದ್ದೇ
ತಡ
ಮತ್ತದೇ
ಉಂಡುಡುವ ಬೆಂಬಿಡದ ಕರ್ಮದ ನಿಟ್ಟೋಟ
ಎಳೆಮುದಿಗಳೆಲ್ಲ ಒಟ್ಟಿಗೆ
ಇಕ್ಕಟ್ಟು
ಇಳಿಜಾರು ದಾಟಿ
ಗುಜರಿ ಹೊಗೆ ಧೂಳು ಸೇದಿ ಎದೆ ಉರಿದು
ಮೂಗೊಳಗೆ
ಕಪ್ಪಾದ ಸಿಂಬಳದ ಕತೆ ಕಾಣುವುದಿಲ್ಲ
ಹೊರಗೆ
ತೂತು
ತೂತಾದ ಟೋಪಿ
ಬಣ್ಣ ತುಂಬಿದ ದಾಡಿ
ಕಾಮಾಲೆ
ಕಣ್ಣು ಚುಚ್ಚುತ್ತವೆ
ಬಿಸಿಲಿಗೆ ನಶೆಯೇರಿ ಬೆಂಕಿಗೆ ಬೆದೆ ಬಂದು
ಬೆದರಿಸುತ್ತದೆ
ಕರುಣೆ ಕರುಳನು ಕತ್ತರಿಸಿ
ತಾರಾಡುತ್ತದೆ
ಸುಟ್ಟ ಬೂದಿಯ ನಡುವೆ
ಸೋದರ ಪ್ರೇಮದ ನಾದ ಗುನುಗುತ್ತದೆ.

ಕೂಗು ಕಿರುಚಾಟಗಳ
ನಡುವೆ
ಒಳಗೂ ಹೊರಗೂ ಖಾಲಿಯಾದ ತಲೆ
ಹಿಡುಕ
ಬಂದ
ಬೆಂಗಾವಲು ಪಡೆ ಸುತ್ತ
ಕುಂಟುತ್ತ
ಗಂಡಲ್ಲದ ನಡೆಗೆ ಹೆಣ್ಣಲ್ಲದ ನುಡಿ ತೊಡಿಸಿ
ತುಟಿನಡುಕ ತಡೆದು
ಜೇನು ಕಾರಿದ
ಏನಿವನ ಗತ್ತು
ಗೈರತ್ತು!
ಹೊಲಸಲ್ಲಿ ಮಿನುಗೆದ್ದ ಕುರುಡು ನೊಣಗಳ ಹಿಂಡು!
ಇವನು ಪದವಿಟ್ಟಲ್ಲೆಲ್ಲ
ಪರಿಮಳಯುಕ್ತ
ಭಕ್ತಗಣ
ಧ್ವಜಸ್ತಂಭ
ಕೆನ್ನೀರು
ಸಾಲು ಸಮಾಧಿಗಳ ಸಮ್ಮೋಹಕ ನಗೆಬಳಗ!

ಈಗಷ್ಟೆ
ಯಾರದ್ದೋ ಕ್ರೂರ ಕರೆ ತಾಗಿತು
ಮುನ್ನೋಟಕ್ಕೆ
ಕನಸುಗಳು ಕವಿದವು
ವರುಷಕ್ಕೊಮ್ಮೆ
ಉತ್ತುತ್ತಿ
ಕಲ್ಲುಸಕ್ಕರೆ ಬಾದಾಮಿ ನೆನೆದು ಕುಳಿತವು
ಮೆಲ್ಲುವ ನಾಲಿಗೆ ಬಂದಾಗಿ
ಕಣ್ಣಾಲಿ ಕರಗಿ
ಮತ್ತದೇ ನಾಲ್ಕು ರಖಾತು
ಎದ್ದು ಬಗ್ಗಿ ಕುಳಿತು ಅಂಗೈ
ಹೊಸೆದು
ಮುಖಕ್ಕೊರೆಸಿದರೆ
ಬಾನಿಗೊಡ್ಡಿದ ಬೊಗಸೆ ತುಂಬ
ನಾಳೆಗಳ ನಾಕ
ನೆರೆ ಹೊಯ್ದು ಹರಿದಾಡಿ
ಬರಿಗೈಯ ಗೆರೆಗಳಲಿ ಭರವಸೆ ತುಂಬಿ
ಜನ್ನತಿನ ಸುಂದರ ಚಿತ್ರ ಬಿಡಿಸಿತ್ತು!

ಇವತ್ತುಗಳ ಸುಟ್ಟು
ನಾಳೆಗಳ ಬಿತ್ತುವವರ ಬಾಯೊಣಗಿ
ನೆಲವೆಲ್ಲ
ಬಿಸಿಲು
ಬೆಳದಿಂಗಳು
ಚೆಲ್ಲಿ
ಚಿಗುರು ಹೂ ಹಣ್ಣು ಮೊರೆವಂತೆ
ಹದ ಮಳೆಯ ನಾದ ಸದಾ
ಸದಾ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಯಾರದೋ
ಪರಿಚಿತ ದನಿ ಕರೆದಂತಾಗಿ
ಮಗ್ಗುಲು
ಬದಲಿಸಿ ಎದ್ದರೆ
ಹೊರಗೆ ನಕ್ಷತ್ರಗಳ ಹೊಳಪು
ರಾತ್ರಿ ಬೆಂದ ಬಿರಿಯಾನಿ
ಸಾಲದೇ
ಹುರಿದುಪ್ಪು ಹಾಕಿದ ಬಾದಾಮಿ ಗೋಡಂಬಿ
ಒಳಗಿಳಿದು
ನಾಲ್ಕೇ ನಾಲ್ಕು
ರಖಾತು
ನಿಂತು ಬಗ್ಗಿ ಕುಳಿತು
ಎಡಕ್ಕೂ ಬಲಕ್ಕೂ ಕತ್ತು ಹೊರಳಿಸಿ
ಅಂಗೈ ಹೊಸೆದು
ಮುಖಕ್ಕೊರೆಸಿದರೆ ಅಲ್ಲಿ ಅದೆಂಥದೋ ತಣ್ಣಗೆ ತೀಡಿತು
ಆಕಾಶದಗಲಕ್ಕು
ಬಿತ್ತಿದ ತಂಪು ಕಾಡಿತು
ಚಂದ್ರ ತಾರೆ ನಕ್ಕವು!

ಆಗೀಗ
ಚೌಕಾಸಿ ಬಿಸಿಲು ಕಾಲೂರಿದ್ದೇ
ತಡ
ಮತ್ತದೇ
ಉಂಡುಡುವ ಬೆಂಬಿಡದ ಕರ್ಮದ ನಿಟ್ಟೋಟ
ಎಳೆಮುದಿಗಳೆಲ್ಲ ಒಟ್ಟಿಗೆ
ಇಕ್ಕಟ್ಟು
ಇಳಿಜಾರು ದಾಟಿ
ಗುಜರಿ ಹೊಗೆ ಧೂಳು ಸೇದಿ ಎದೆ ಉರಿದು
ಮೂಗೊಳಗೆ
ಕಪ್ಪಾದ ಸಿಂಬಳದ ಕತೆ ಕಾಣುವುದಿಲ್ಲ
ಹೊರಗೆ
ತೂತು
ತೂತಾದ ಟೋಪಿ
ಬಣ್ಣ ತುಂಬಿದ ದಾಡಿ
ಕಾಮಾಲೆ
ಕಣ್ಣು ಚುಚ್ಚುತ್ತವೆ
ಬಿಸಿಲಿಗೆ ನಶೆಯೇರಿ ಬೆಂಕಿಗೆ ಬೆದೆ ಬಂದು
ಬೆದರಿಸುತ್ತದೆ
ಕರುಣೆ ಕರುಳನು ಕತ್ತರಿಸಿ
ತಾರಾಡುತ್ತದೆ
ಸುಟ್ಟ ಬೂದಿಯ ನಡುವೆ
ಸೋದರ ಪ್ರೇಮದ ನಾದ ಗುನುಗುತ್ತದೆ.

ಕೂಗು ಕಿರುಚಾಟಗಳ
ನಡುವೆ
ಒಳಗೂ ಹೊರಗೂ ಖಾಲಿಯಾದ ತಲೆ
ಹಿಡುಕ
ಬಂದ
ಬೆಂಗಾವಲು ಪಡೆ ಸುತ್ತ
ಕುಂಟುತ್ತ
ಗಂಡಲ್ಲದ ನಡೆಗೆ ಹೆಣ್ಣಲ್ಲದ ನುಡಿ ತೊಡಿಸಿ
ತುಟಿನಡುಕ ತಡೆದು
ಜೇನು ಕಾರಿದ
ಏನಿವನ ಗತ್ತು
ಗೈರತ್ತು!
ಹೊಲಸಲ್ಲಿ ಮಿನುಗೆದ್ದ ಕುರುಡು ನೊಣಗಳ ಹಿಂಡು!
ಇವನು ಪದವಿಟ್ಟಲ್ಲೆಲ್ಲ
ಪರಿಮಳಯುಕ್ತ
ಭಕ್ತಗಣ
ಧ್ವಜಸ್ತಂಭ
ಕೆನ್ನೀರು
ಸಾಲು ಸಮಾಧಿಗಳ ಸಮ್ಮೋಹಕ ನಗೆಬಳಗ!

ಈಗಷ್ಟೆ
ಯಾರದ್ದೋ ಕ್ರೂರ ಕರೆ ತಾಗಿತು
ಮುನ್ನೋಟಕ್ಕೆ
ಕನಸುಗಳು ಕವಿದವು
ವರುಷಕ್ಕೊಮ್ಮೆ
ಉತ್ತುತ್ತಿ
ಕಲ್ಲುಸಕ್ಕರೆ ಬಾದಾಮಿ ನೆನೆದು ಕುಳಿತವು
ಮೆಲ್ಲುವ ನಾಲಿಗೆ ಬಂದಾಗಿ
ಕಣ್ಣಾಲಿ ಕರಗಿ
ಮತ್ತದೇ ನಾಲ್ಕು ರಖಾತು
ಎದ್ದು ಬಗ್ಗಿ ಕುಳಿತು ಅಂಗೈ
ಹೊಸೆದು
ಮುಖಕ್ಕೊರೆಸಿದರೆ
ಬಾನಿಗೊಡ್ಡಿದ ಬೊಗಸೆ ತುಂಬ
ನಾಳೆಗಳ ನಾಕ
ನೆರೆ ಹೊಯ್ದು ಹರಿದಾಡಿ
ಬರಿಗೈಯ ಗೆರೆಗಳಲಿ ಭರವಸೆ ತುಂಬಿ
ಜನ್ನತಿನ ಸುಂದರ ಚಿತ್ರ ಬಿಡಿಸಿತ್ತು!

ಇವತ್ತುಗಳ ಸುಟ್ಟು
ನಾಳೆಗಳ ಬಿತ್ತುವವರ ಬಾಯೊಣಗಿ
ನೆಲವೆಲ್ಲ
ಬಿಸಿಲು
ಬೆಳದಿಂಗಳು
ಚೆಲ್ಲಿ
ಚಿಗುರು ಹೂ ಹಣ್ಣು ಮೊರೆವಂತೆ
ಹದ ಮಳೆಯ ನಾದ ಸದಾ
ಸದಾ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.