ನವದೆಹಲಿ: ಪತ್ರಕರ್ತ ಹಾಗೂ ಲೇಖಕ ರಘು ಕಾರ್ನಾಡ್ ಅವರ‘ಫಾರ್ದೆಸ್ಟ್ ಫೀಲ್ಡ್: ಆ್ಯನ್ ಇಂಡಿಯನ್ ಸ್ಟೋರಿ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್’ ಕೃತಿ,ಯೇಲ್ ವಿಶ್ವವಿದ್ಯಾಲಯ ನೀಡುವ ಈ ವರ್ಷದಪ್ರತಿಷ್ಠಿತ ವಿಂಡ್ಹಮ್ ಕ್ಯಾಂಬೆಲ್ ಪ್ರಶಸ್ತಿಗೆ ಭಾಜನವಾಗಿದೆ.

ರಘು ಸೇರಿ ವಿಶ್ವದಾದ್ಯಂತ ಒಟ್ಟು 8 ಲೇಖಕರು ಈ ಬಾರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರತಿ ಲೇಖಕರಿಗೆ ತಲಾ₹1.14 ಕೋಟಿ ಬಹುಮಾನ ನೀಡಲಾಗುತ್ತದೆ.

2015ರಲ್ಲಿ ಪ್ರಕಟವಾದಈ ಕೃತಿಯಲ್ಲಿ,2ನೇ ಜಾಗತಿಕ ಯುದ್ಧದ ವೇಳೆ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಒಂದೇ ಕುಟುಂಬದ ಮೂವರ ಕಥೆ ಕಟ್ಟಿಕೊಡಲಾಗಿದೆ.

‘ಕಾಲ್ಪನಿಕತೆ ಹಾಗೂ ವಿಚಲಿತಗೊಳಿಸುವ ರಾಷ್ಟ್ರೀಯ ಮತ್ತು ವಸಾಹತುಶಾಹಿ ಇತಿಹಾಸದೊಂದಿಗೆ ಪುರಾತತ್ವ ಸಂಶೋಧನೆಯನ್ನು ಸೇರಿಸಿ ರಚಿಸಿರುವ ಈ ಕೃತಿ ಮರೆಯಲಾಗದ ಶ್ರೇಷ್ಠಮಟ್ಟದ್ದು’ ಎಂದು ಪ್ರಶಸ್ತಿ ಸಮಿತಿ ಲೇಖಕರನ್ನು ಪ್ರಶಂಸಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.