ಕಲಿಕೆಯಲ್ಲಿ ಪ್ರಯೋಗಗಳ ಮಹತ್ವ
‘ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಉತ್ತಮ, ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದು ಇನ್ನೂ ಉತ್ತಮ’ ಎಂಬ ಮಾತೊಂದು ಕನ್ನಡದಲ್ಲಿದೆ. ಈ ಮಾತು ಅಕ್ಷರಶಃ ಅನ್ವಯಿಸುವುದು ವಿದ್ಯಾರ್ಥಿಗಳಿಗೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕವನ್ನು ಓದುವುದಷ್ಟೇ ಅಲ್ಲ. ಅಷ್ಟೇ ಪ್ರಾಮುಖ್ಯವನ್ನು ಪ್ರಯೋಗಗಳಿಗೂ ನೀಡಬೇಕು. ಪ್ರಯೋಗಗಳು ನಮ್ಮಲ್ಲಿ ಕಲಿಯುವ ಉತ್ಸಾಹವನ್ನು ಹೆಚ್ಚಿಸುತ್ತವೆ; ಜೊತೆಗೆ ನಾವಾಗಿಯೇ ಅದರಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತವೆ. ಪ್ರಯೋಗಗಳಿಂದ ವಿದ್ಯಾರ್ಥಿಗಳಲ್ಲಿ ಸೂಕ್ಷ್ಮವಾದ ಅವಲೋಕನ ಗುಣವೂ ಬೆಳೆಯುತ್ತದೆ.Last Updated 1 ಜುಲೈ 2018, 11:22 IST