ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ದ್ವಾರಕೀಶ್

ಸಂಪರ್ಕ:
ADVERTISEMENT

ಕೊನೆಯ `ಆಪ್ತ' ಮಾತು

`ಆಪ್ತಮಿತ್ರ' ನನ್ನ ಬದುಕಿನ ಅತ್ಯಂತ ಯಶಸ್ವಿ ಚಿತ್ರವಾಯಿತು. ನಂಬಿದ ಪರದೆ ಮೋಸ ಮಾಡಲಿಲ್ಲ. ಮೈಸೂರಿನಲ್ಲಿ ಪ್ರೇಕ್ಷಕರು ಚಿತ್ರಕ್ಕೆ ಟಿಕೆಟ್ ಪಡೆಯುವ ಮುಂಚೆ, `ಈ ಹಣವೆಲ್ಲಾ ದ್ವಾರಕೀಶ್‌ಗೆ ಹೋಗುತ್ತಾ?' ಎಂದು ಕೇಳಿದರಂತೆ. ಅದೇ ಭಾಗ್ಯ. ನಾನು ಕಷ್ಟದಲ್ಲಿದ್ದದ್ದು ಪ್ರೇಕ್ಷಕರಿಗೆ ಗೊತ್ತಿತ್ತು.
Last Updated 9 ಮಾರ್ಚ್ 2013, 19:59 IST
fallback

ವಿಷ್ಣು `ಆಪ್ತಮಿತ್ರ' ಆದದ್ದು...

ಚಿತ್ರರಂಗದ 51 ವರ್ಷದ ಜೀವನದಲ್ಲಿ 32 ವರ್ಷ ಮದ್ರಾಸ್‌ನಲ್ಲಿ ಬದುಕಿದೆ. ಅಲ್ಲಿ ಕಳೆದ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬಂಗಾಲಿ, ಮರಾಠಿ ಹೀಗೆ ಹಲವು ಭಾಷೆಗಳ ಚಿತ್ರಗಳು ಅಲ್ಲಿ ತಯಾರಾಗುತ್ತಿದ್ದವು. ಮದ್ರಾಸ್‌ನ ಎಲ್ಲಾ ಸ್ಟುಡಿಯೊಗಳಲ್ಲೂ ನಾನು ಚಿತ್ರೀಕರಣ ಮಾಡಿದ್ದೇನೆ.
Last Updated 2 ಮಾರ್ಚ್ 2013, 19:59 IST
fallback

ಆಸ್ಪತ್ರೆಯಲ್ಲಿ ಅಮ್ಮನ ಕಾಲಿಗೆ ಬಿದ್ದು ಕ್ಷಮೆ

ಎಲ್ಲಾ ಚೆಕಪ್‌ಗಳ ನಂತರ ನನಗೆ ಬೈಪಾಸ್ ಸರ್ಜರಿ ಆಗಬೇಕೆಂಬುದು ನಿಶ್ಚಿತವಾಯಿತು. ಕೈಯಲ್ಲಿ ಹಣವಿಲ್ಲ. ಸಹಾಯ ಮಾಡಬಲ್ಲ ಸ್ನೇಹಿತರೂ ಇಲ್ಲ. 40 ಚಿತ್ರಗಳ ಸ್ಯಾಟಲೈಟ್ ಹಕ್ಕನ್ನು ಮಾರಿದ್ದರಿಂದ ಜೀವನ ನಿರ್ವಹಣೆಗೆ ಒಂದಿಷ್ಟು ಹಣ ಬಂತು.
Last Updated 23 ಫೆಬ್ರುವರಿ 2013, 19:59 IST
fallback

ರಜನಿ ಕೊಟ್ಟದ್ದು ಬರೀ ಕಾಫಿ

ವಿಷ್ಣುವರ್ಧನ್ ನನ್ನಿಂದ ದೂರವಾಗಿ ಏಳು ವರ್ಷ ಆಗಿದ್ದರೂ ಹೃದಯದಲ್ಲಿ ಅವನು ಇದ್ದೇ ಇದ್ದ. ಆತನಿಲ್ಲದೆ ನನ್ನ ಚಿತ್ರ ಏಳುವುದು ಕಷ್ಟ ಎಂದು ಮನಸ್ಸು ಹೇಳುತ್ತಿತ್ತು.
Last Updated 16 ಫೆಬ್ರುವರಿ 2013, 19:59 IST
fallback

ಶ್ರುತಿ ಸಿನಿಮಾ ಶೈಲಜಾ ಮದುವೆ

ಅಂಬುಜಾ ಕೂಡ ನಾನು ಇಷ್ಟಪಟ್ಟು ಮದುವೆಯಾಗಿದ್ದವಳು. ಒಂದು ದಿನ ಮನಸ್ಸನ್ನು ಗಟ್ಟಿ ಮಾಡಿಕೊಂಡು ಅವಳಿಗೆ ಶೈಲಜಾ ವಿಷಯವನ್ನು ಹೇಳಿಬಿಟ್ಟೆ. `ನನ್ನ ಜೀವನದ ಕಾದಂಬರಿ ನಿನ್ನ ಕೈಲಿದೆ. ಕಾಮಿಡಿಯೋ ಟ್ರ್ಯಾಜಿಡಿಯೋ, ಕ್ಲೈಮ್ಯಾಕ್ಸನ್ನು ನೀನೇ ಹೇಳಬೇಕು' ಎಂದೆ. ಅದಕ್ಕೆ ಅವಳು ಕೊಟ್ಟ ಪ್ರತಿಕ್ರಿಯೆ ನೆನೆಸಿಕೊಂಡರೆ ಈಗಲೂ ನನಗೆ ಕಣ್ಣಲ್ಲಿ ನೀರು ಬರುತ್ತದೆ. ಅವಳು ಹೇಳಿದ್ದು ಒಂದೇ ಮಾತು: `ದ್ವಾರ್ಕಿ ನಿನ್ನ ಇಷ್ಟವೇ ನನ್ನ ಇಷ್ಟ'.
Last Updated 9 ಫೆಬ್ರುವರಿ 2013, 19:59 IST
fallback

ಕರಗಿತು ಐಷಾರಾಮ

`ಡಾನ್ಸ್ ರಾಜಾ ಡಾನ್ಸ್' ಆದಮೇಲೆ ನಾನು ಮಾಡಿದ ಚಿತ್ರ `ಕೃಷ್ಣ ನೀ ಕುಣಿದಾಗ'. ವಿನೋದ್ ರಾಜ್- ಸುಧಾರಾಣಿ ಜೋಡಿ. ಜಗ್ಗೇಶ್ ಕೂಡ ಆ ಚಿತ್ರದಲ್ಲಿ ಇದ್ದ. ಮಂಗಳೂರು ಸೇಂಟ್ ಮೇರೀಸ್ ದ್ವೀಪದಲ್ಲಿ ಮೊದಲ ಶಾಟ್ ಚಿತ್ರೀಕರಿಸಬೇಕಿತ್ತು. ಹಲವು ಡಾನ್ಸರ್‌ಗಳು ಅಲ್ಲಿದ್ದರು. ದುರದೃಷ್ಟವಶಾತ್ ಸುಧಾರಾಣಿ ಕಾಲಿಗೆ ಆ ದಿನ ಪೆಟ್ಟುಬಿತ್ತು.
Last Updated 2 ಫೆಬ್ರುವರಿ 2013, 19:59 IST
fallback

ವಿನೋದ್‌ರಾಜ್ ಮತ್ತು ಬೇಡರ ಕಣ್ಣಪ್ಪ

ಅಷ್ಟೆಲ್ಲಾ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೋತ ಮೇಲೂ ಧೃತಿಗೆಡಲಿಲ್ಲ. ಇನ್ನೊಂದು ಸಿನಿಮಾ ಬಗೆಗೆ ತಲೆ ಓಡುತ್ತಲೇ ಇತ್ತು. ಹೊಸ ನಾಯಕರನ್ನು ಹಾಕಿ ಸಿನಿಮಾ ಮಾಡುವುದು ನನ್ನ ಹಂಬಲ. ನಮ್ಮ ಮನೆಗೆ ಲೀಲಾವತಿಯ ಮಗ ವಿನೋದ್ ರಾಜ್ ಬರುತ್ತಾ ಇದ್ದ.
Last Updated 26 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT