ಸಂಗತ | ಕುಲದ ಬಗ್ಗೆ ಕನಕನ ಬಗೆ
ಭಾರತದ ಮಹಾಕಾವ್ಯ ಸಂಸ್ಕೃತದ ಮಹಾಭಾರತವನ್ನು ಅನುಸರಿಸಿ ಕನ್ನಡದಲ್ಲಿ ಆದಿಕವಿ ಪಂಪ ಬರೆದ ‘ವಿಕ್ರಮಾರ್ಜುನ ವಿಜಯ’ದಲ್ಲಿ ಎರಡು ಪ್ರಸಂಗಗಳಿವೆ. ಒಂದು, ಕರ್ಣನು ತನ್ನ ಅಸ್ತ್ರವಿದ್ಯಾ ಪ್ರೌಢಿಮೆಯನ್ನು ಪ್ರದರ್ಶಿಸುವಾಗ ದ್ರೋಣನು, ‘ನಿನ್ನ ತಾಯಿ ತಂದೆಯ ವಿಷಯವನ್ನು ವಿಚಾರಿಸಿ ಮಾತನಾಡುವುದಾದರೆ, ನಿನಗೂ ಅರಿಕೇಸರಿಗೂ (ಅರ್ಜುನ) ಯಾವ ಸಮಾನತೆಯಿದೆ?’ ಎಂದಾಗ ದುರ್ಯೋಧನನು, ‘ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ’ (ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ?) ಎಂದು ತೀಕ್ಷ್ಣವಾಗಿ ಪ್ರಶ್ನಿಸುತ್ತಾನೆ.Last Updated 21 ನವೆಂಬರ್ 2021, 21:15 IST