ಬೆಂಗಳೂರು: ದೇಶದ ಪ್ರಮುಖ ಎಸ್ಯುವಿ ತಯಾರಿಕಾ ಕಂಪನಿ ಮಹೀಂದ್ರ ಆ್ಯಂಡ್ ಮಹೀಂದ್ರ ಲಿಮಿಟೆಡ್, ಮಂಗಳವಾರ ಬೊಲೆರೊ ನಿಯೋ ಪ್ಲಸ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಪಿ4 ಮತ್ತು ಪ್ರೀಮಿಯಂ ಪಿ10 ವೇರಿಯಂಟ್ಗಳಲ್ಲಿ ಈ ವಾಹನ ಲಭ್ಯವಿದೆ. ಚಾಲಕ ಸೇರಿ ಒಂಬತ್ತು ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಲು ಅವಕಾಶವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ವಾಹನವು ಬೋಲ್ಡ್ ಡಿಸೈನ್, ಪ್ರೀಮಿಯಂ ಇಂಟೀರಿಯರ್ ಮತ್ತು ನಿಯೋ ತಂತ್ರಜ್ಞಾನ ಹೊಂದಿದೆ. ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇಂಧನ ದಕ್ಷತೆ ಹೆಚ್ಚಿಸಲು ಮೈಕ್ರೋ-ಹೈಬ್ರೀಡ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ವಾಹನದ ಆರಂಭಿಕ ಬೆಲೆಯು ₹11.39 ಲಕ್ಷ ಆಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.