ಬೆಂಗಳೂರು: ಓಂಕಾರ್ ಸಾಳ್ವಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಮುಂಬೈ ತಂಡ, ಕಳೆದ ಋತುವಿನಲ್ಲಿ ರಣಜಿ ಟ್ರೋಫಿ ಮತ್ತು ಇರಾನಿ ಟ್ರೋಫಿ ಗೆಲ್ಲುವಲ್ಲಿ ಓಂಕಾರ್ ಅವರ ಮಾರ್ಗದರ್ಶನವೂ ಇತ್ತು.

ದೇಶಿ ಕ್ರಿಕೆಟ್ನಲ್ಲಿ ಹೆಸರು ಮಾಡಿರುವ ಓಂಕಾರ್ ಅವರು ಈ ಹಿಂದೆ ಕೋಲ್ಕತ್ತ ನೈಟ್ ರೈಡರ್ಸ್ ಸಹಾಯಕ ಕೋಚ್ ಆಗಿದ್ದರು.

‘ಮುಂಬೈ ತಂಡದ ಹಾಲಿ ಹೆಡ್ ಕೋಚ್ ಆಗಿರುವ ಓಂಕಾರ್ ಸಾಳ್ವಿ ಅವರನ್ನು ಆರ್ಸಿಬಿ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ’ ಎಂದು ಬೆಂಗಳೂರಿನ ಫ್ರಾಂಚೈಸಿ ಟ್ವೀಟ್ ಮಾಡಿದೆ.

ರಣಜಿ ಟ್ರೋಫಿ ಪಂದ್ಯಗಳು ಜನವರಿ 23ರಂದು ಪುನರಾರಂಭಗೊಳ್ಳಲಿದ್ದು, ಅದರ ಮುಕ್ತಾಯದ ನಂತರ ಅವರು ಆರ್ಸಿಬಿ ತಂಡ ಕೂಡಿಕೊಳ್ಳಲಿದ್ದಾರೆ.

ಭಾರತ ತಂಡದ ಮಾಜಿ ಆಟಗಾರ ಅವಿಷ್ಕಾರ್ ಸಾಳ್ವಿ ಅವರ ತಮ್ಮನಾಗಿರುವ ಓಂಕಾರ್, ರೈಲ್ವೆ ಪರ 2005ರಲ್ಲಿ ಒಂದು ಲಿಸ್ಟ್ ಎ ಪಂದ್ಯ ಆಡಿದ್ದಾರೆ. ಮುಂಬೈ ತಂಡದ ಜೊತೆ ಅವರ ಒಪ್ಪಂದ 2025ರ ಮಾರ್ಚ್ವರೆಗೆ ಇದೆ.

2008ರಲ್ಲಿ ಐಪಿಎಲ್ ಆರಂಭವಾದಾಗ ಇದ್ದ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿ, ಒಮ್ಮೆಯೂ ಟ್ರೋಫಿ ಗೆದ್ದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.